ಬೆಂ.ಗ್ರಾ.ಜಿಲ್ಲೆ: ಮೀನುಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ (DAIGUA) ಯೋಜನೆಯಡಿ ಜೀವಂತ ಮೀನು ಮಾರಾಟ ಕೇಂದ್ರಕ್ಕೆ 2 ಗುರಿ ನೀಡಿದ್ದು, ಮೀನುಗಾರಿಕೆಯಲ್ಲಿ (Fishing) ತೊಡಗಿರುವ ಪರಿಶಿಷ್ಟ ಪಂಗಡದ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಗ್ರಾಮಪಂಚಾಯಿತಿಯ ಗುಮ್ಮನಹಳ್ಳಿ, ಅಣಬೆ ಗ್ರಾ.ಪಂ.ಯ ಬೊಮ್ಮನಹಳ್ಳಿ.
ದೇವನಹಳ್ಳಿ ತಾಲ್ಲೂಕಿನ ಬಿಜವರ ಗ್ರಾ.ಪಂ.ಯ ಹೊಲೇರಹಳ್ಳಿ, (ಗೊಡ್ಲುಮುದ್ದೇನಹಳ್ಳಿ ಗ್ರಾ.ಪಂ.ಯ ವೆಂಕಟೇನಹಳ್ಳಿ, ಮಂಡಿಬೆಲೆ ಗ್ರಾ.ಪಂ.ಯ ಚಿಕ್ಕತತ್ತಮಂಗಲ, ಕಾರಹಳ್ಳಿ ಗ್ರಾ.ಪಂ.ಯ ಕೆಂಪತಿಮ್ಮನಹಳ್ಳಿ, ಅಣ್ಣೇಶ್ವರ ಗ್ರಾ.ಪಂ.ಯ ಯರ್ತಿಗಾನಹಳ್ಳಿ, ಭುವನಹಳ್ಳಿ, ಬೆಟ್ಟಕೋಟೆ ಗ್ರಾ.ಪಂ.ಯ ರಾಯಸಂದ್ರ, ಯಲಿಯೂರು ಗ್ರಾ.ಪಂ.ಯ ಮಟ್ಟಬಾರ್ಲು, ಬೊಮ್ಮನಹಳ್ಳಿ, ನಲ್ಲೂರು ಗ್ರಾ.ಪಂ.ಯ ಜೊನ್ನಹಳ್ಳಿ, ಕೋರಮಂಗಲ ಗ್ರಾ.ಪಂ.ಯ ಕೊಂಡೇನಹಳ್ಳಿ.
ಹೊಸಕೋಟೆ ತಾಲ್ಲೂಕಿನ ದೊಡ್ಡನಲ್ಲಾಳ ಗ್ರಾ.ಪಂ.ಯ ವಲಗೇರೆಪುರ ಈ ಗ್ರಾಮಗಳಿಗೆ ಸಂಬಂಧಿಸಿದ ಪರಿಶಿಷ್ಟ ಪಂಗಡಕ್ಕೆ ಸೇರಿದ ಮೀನುಗಾರರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು ಸಂಬಂಧಪಟ್ಟ ದಾಖಲೆಗಳೊಂದಿಗೆ ಫೆ. 06 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತ ಅರ್ಜಿದಾರರು ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಆಯಾಯ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.