ದೊಡ್ಡಬಳ್ಳಾಪುರ: ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕರಾಗಿ ಹಿರಿಯ ಪತ್ರಕರ್ತ ಗಂಗರಾಜ ಶಿರವಾರ (Gangaraja Shiravara) ಅವರನ್ನು ನೇಮಕ ಮಾಡಲಾಗಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ದೇವನಹಳ್ಳಿ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ “ಮನೆಗೊಂದು ಗ್ರಂಥಾಲಯ” ಜಿಲ್ಲಾ ಸಮಿತಿಯ ಸದಸ್ಯರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನೆರವೇರಿಸಲಾಯಿತು.
ಈ ವೇಳೆ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕರಾಗಿ ಹಿರಿಯ ಪತ್ರಕರ್ತ ಗಂಗರಾಜ ಶಿರವಾರ ಅವರನ್ನು ನೇಮಕ ಮಾಡಲಾಗಿದ್ದು, ಉಳಿದಂತೆ ಬಿ.ಎನ್.ಕೃಷ್ಣಪ್ಪ, ರಬ್ಬನಹಳ್ಳಿ ಕೆಂಪಣ್ಣ, ಪ್ರಮೀಳಾ ಮಹದೇವ, ಚೌಡೇಗೌಡ, ಬಿ. ಆರ್ ಪ್ರದೀಪ್ ಕುಮಾರ್, ನರಸಿಂಹ ರೆಡ್ಡಿ, ಜೋಹಾರ್ ಜಾನ್ ಇವರನ್ನು ಗ್ರಂಥಾಲಯ ಸಮಿತಿಯ ಸದಸ್ಯರಾಗಿ ನೇಮಕಾತಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಕರಿಯಪ್ಪ, ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಶರಣಯ್ಯ ಹಿರೇಮಠ, ಸಂಪತ್ ಕುಮಾರ್, ಚಂದ್ರಶೇಖರ್ ಹಡಪದ್, ಸಿ.ಪಿ.ರೆಡ್ಡಿ ಕುವೆಂಪು, ಕಸಾಪ ಜಿಲ್ಲಾಧ್ಯಕ್ಷ ಬಿ ಎನ್.ಕೃಷ್ಣಪ್ಪ, ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ವಿನೋದ್ ಕುಮಾರ್ ಗೌಡ, ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಕರಿಯಪ್ಪ, ದೇವನಹಳ್ಳಿ ಕಸಾಪ ಅಧ್ಯಕ್ಷ ಆರ್.ಕೆ.ನಂಜೇಗೌಡ, ನೆಲಮಂಗಲ ಕಸಾಪ ಅಧ್ಯಕ್ಷ ಪ್ರಕಾಶ್ ಮೂರ್ತಿ, ಸಾಹಿತಿ ಕಾರಹಳ್ಳಿ ಶ್ರೀನಿವಾಸ್ ಕಲಾವಿದರಾದ ಮೋಹನ್ ಬಾಬು, ಆವತಿಯ ರಾಧಾರೆಡ್ಡಿ, ಮಾಧವಿಕಾಂತರಾಜ್, ಶಶಿಕಲಾ, ಪುನೀತ, ಯಲಿಯೂರು ದೇವರಾಜ್ ಮುಂತಾದವರು ಉಪಸ್ಥಿತರಿದ್ದರು.