ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ (P.T. Usha) ಅವರ ಪತಿ ವಿ. ಶ್ರೀನಿವಾಸನ್ (ವಿ. Srinivasan) ಅವರು ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.
ಮೂಲತಃ ಶುಕ್ರವಾರ ಮುಂಜಾನೆ ಕೇರಳದ ತಿಕ್ಕೋಡಿ ಪೆರುಮಾಳ್ಪುರಂನಲ್ಲಿರುವ ತಮ್ಮ ಮನೆಯಲ್ಲಿ ಶ್ರೀನಿವಾಸನ್ ಶುಕ್ರವಾರ ರಾತ್ರಿ ಸುಮಾರು 12.30ರ ವೇಳೆ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದು, ಅವರನ್ನು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದುರದೃಷ್ಟವಶಾತ್ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
What happened to IOA chief PT Usha’s husband V Srinivasan? V Srinivasan, the husband of Indian Olympic Association president PT Usha,
— NationPress (@np_nationpress) January 30, 2026
passed away at the age of 64. Prime Minister Modi has expressed his condolences. https://t.co/ZTHrWTKMA2 pic.twitter.com/1G4HAcrDuV
ಈ ಹಿಂದೆ ಸಿಐಎಸ್ಎಫ್ನಲ್ಲಿ ಇನ್ಸ್ಪೆಕ್ಟರ್ ಹುದ್ದೆಯನ್ನು ಅಲಂಕರಿಸಿದ್ದ ಶ್ರೀನಿವಾಸನ್, 1991 ರಲ್ಲಿ ಪಿ.ಟಿ. ಉಷಾ ಅವರನ್ನು ವಿವಾಹವಾದರು. ಅವರಿಗೆ ಉಜ್ವಲ್ ವಿಘ್ನೇಶ್ ಎಂಬ ಮಗನಿದ್ದಾನೆ.
ಕೇಂದ್ರ ಸರ್ಕಾರದ ಮಾಜಿ ಉದ್ಯೋಗಿಯಾಗಿದ್ದ ವೆಂಗಲಿಲ್ ಶ್ರೀನಿವಾಸನ್ ಅವರು, ಪಿ.ಟಿ. ಉಷಾ ಅವರ ಕ್ರೀಡಾ ಹಾಗೂ ರಾಜಕೀಯ ಜೀವನದ ಪ್ರತಿಯೊಂದು ಹಂತದಲ್ಲೂ ನೆರಳಿನಂತೆ ಜೊತೆಯಾಗಿದ್ದರು.
ಉಷಾ ಅವರ ಅದ್ಭುತ ಕ್ರೀಡಾ ಸಾಧನೆಗಳು ಮತ್ತು ನಂತರದ ಸಾರ್ವಜನಿಕ ಜೀವನದ ಹಲವು ಮಹತ್ವದ ಮೈಲಿಗಲ್ಲುಗಳ ಹಿಂದೆ ಶ್ರೀನಿವಾಸ್ ಅವರ ನಿರಂತರ ಬೆಂಬಲ ಮತ್ತು ಪ್ರೇರಣೆಯೇ ಪ್ರಮುಖ ಶಕ್ತಿಯಾಗಿತ್ತು ಎಂದು ಅವರು ಪರಿಚಿತರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪಿ.ಟಿ. ಉಷಾ ಅವರನ್ನು ಸಂಪರ್ಕಿಸಿ ಅವರ ಪತಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.