ದೊಡ್ಡಬಳ್ಳಾಪುರ: ದೇವಾಲಯದಲ್ಲಿ ಧ್ವನಿವರ್ಧಕ (Loudspeaker) ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕೋಮಿನ ಯುವಕರ ನಡುವೆ ಮಾತಿನ ಚಕಮುಕಿ ನಡೆದಿರುವ ಘಟನೆ ಶಾಂತಿ ನಗರದ ಶನೇಶ್ವರ ದೇವಾಲಯದ ಬಳಿ ನಡೆದಿದೆ.
ದೇವಾಲಯದಲ್ಲಿ ಭಕ್ತಿಗೀತೆಗಳನ್ನು ಹಾಕಿದ್ದಾಗ ಅನ್ಯ ಕೋಮಿನ ಯುವಕನೊಬ್ಬ ಮನೆಯೊಳಗೆ ತಾಯಿ ಮಲಗಿರುವ ಕಾರಣ ಶಬ್ದ ಕಡಿಮೆ ಮಾಡುವಂತೆ ಹೇಳಿದ್ದಾನೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಸ್ಥಳೀಯರು ಮಸೀದಿಯಲ್ಲಿ ಅಜಾನ್ ಕೂಗಿದಾಗ ನಾವು ಹಾಗೇ ಕೇಳುತ್ತೇವಾ? ಎಂದು ವಾದ ಮಾಡಿದಾಗ, ಇಬ್ಬರ ನಡುವೆ ಮಾತಿನ ಚಕಮುಕಿ ನಡೆದಿದೆ.
ಘಟನೆಯು ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಎರಡೂ ಕಡೆಯವರನ್ನು ಠಾಣೆಗೆ ಕರೆಸಿ, ಶಾಂತಿ ಸಭೆ ನಡೆಸಿದರು.
ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಪ್ರಸ್ತುತ ಪ್ರದೇಶದಲ್ಲಿ ಶಾಂತಿಯುತ ವಾತಾವರಣವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಿಡಿಗೇಡಿಗಳ ಕುರಿತು ಪೊಲೀಸರು ನಿಗಾ ವಹಿಸಿದ್ದಾರೆಂದು ತಿಳಿದು ಬಂದಿದೆ.