ದೊಡ್ಡಬಳ್ಳಾಪುರ: ಕರವೇ ಪ್ರವೀಣ್ ಶೆಟ್ಟಿ ಬಣದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣಮಾರನಹಳ್ಳಿಯ
ವಕೀಲರಾದ ಎಸ್.ಡಿ ಮುನಿರಾಜು (S.D. Muniraju) ಅವರನ್ನು ನೇಮಿಸಲಾಗಿದೆ.
ಈ ಕುರಿತಂತೆ ಇಂದು ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿಯವರು ಆದೇಶ ಪತ್ರ ವಿತರಿಸಿದರು.
ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಉಪಾಧ್ಯಕ್ಷರಾದ ಶಿವರಾಜ್ ಗೌಡ, ಜಗದೀಶ್ ಗೌಡ, ಮಂಜೇಶ್, ಉಮೇಶ್ ಗೌಡ ಸೇರಿದಂತೆ ಗ್ರಾಮಾಂತರ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.