ಬೆಂಗಳೂರು: ಕರ್ನಾಟಕ ಹಾಲು ಉತ್ಪಾದ ಕರ ಒಕ್ಕೂಟದ ನಂದಿನಿ (Nandini) ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾ ರಾಣಿ (Sudharani) ಆಯ್ಕೆಯಾಗಿದ್ದಾರೆ ಎಂದು ಬಮೂಲ್ (Bamul) ಅಧ್ಯಕ್ಷ ಡಿ.ಕೆ.ಸುರೇಶ್ (D.K. Suresh) ಹೇಳಿದ್ದಾರೆ.
ನಟಿ ಸುಧಾರಾಣಿ ಅವರನ್ನು ನಂದಿನಿ ಬ್ರಾಂಡ್ನ ಮುಖವಾಗಿಸಿ ಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಡಿ.ಕೆ. ಸುರೇಶ್, ನಂದಿನಿ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯಾಗಿ ಸುಧಾರಾಣಿಯವರನ್ನು ಆಯ್ಕೆ ಮಾಡಿರುವುದು ನಮಗೆ ಹೆಮ್ಮೆಯ ವಿಷಯ. ಬಮೂಲ್ ಕುಟುಂಬಕ್ಕೆ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲ ತಮ್ಮ ಅಭಿನಯದಿಂದ ಜನಮನ ಗೆದ್ದಿರುವ ಸುಧಾರಾಣಿ, ಸರಳತೆ, ನಂಬಿಕೆ ಮತ್ತು ಕುಟುಂಬ ಮೌಲ್ಯಗಳ ಪ್ರತೀಕವಾಗಿ ಗುರುತಿಸಿಕೊಂಡಿದ್ದಾರೆ.
ಇದೇ ಗುಣಗಳು ನಂದಿನಿ ಬ್ರಾಂಡ್ ಮೂಲ ತತ್ವಗಳಿಗೂ ಹೊಂದಿಕೆಯಾಗುತ್ತವೆ ಎಂಬ ಕಾರಣದಿಂದ ಅವರನ್ನು ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಬಮೂಲ್ ಮೂಲಗಳು ತಿಳಿಸಿವೆ.
ನಂದಿನಿ ಉತ್ಪನ್ನಗಳು ಶುದ್ಧತೆ, ಗುಣ ಮಟ್ಟ ಮತ್ತು ರೈತಪರ ಮೌಲ್ಯಗಳನ್ನು ಪ್ರತಿ ನಿಧಿಸುತ್ತಿದ್ದು, ಸುಧಾರಾಣಿ ಅವರ ಜನಪ್ರಿ ಯತೆ ಮತ್ತು ವಿಶ್ವಾಸಾರ್ಹತೆ ಬ್ರಾಂಡ್ಗೆ ಇನ್ನಷ್ಟು ಬಲ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಮುಂದಿನ ದಿನಗಳಲ್ಲಿ ನಂದಿನಿ ಹಾಲು ಮತ್ತು ಹಾಲು ಉತ್ಪನ್ನಗಳ ಜಾಹೀರಾತು ಹಾಗೂ ಸಾರ್ವಜನಿಕ ಅಭಿಯಾನಗಳಲ್ಲಿ ಸುಧಾ ರಾಣಿ ಕಾಣಿಸಿಕೊಳ್ಳಲಿದ್ದಾರೆ.
ಈ ನೇಮಕಾತಿಯ ಮೂಲಕ ನಂದಿನಿ ಬ್ರಾಂಡ್ನ್ನು ರಾಜ್ಯಾದ್ಯಂತ ಮತ್ತಷ್ಟು ಜನಪ್ರಿಯ ಗೊಳಿಸುವುದು ಮತ್ತು ಗ್ರಾಹಕರೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಬಲಪಡಿಸುವುದು ಬಮೂಲ್ ಉದ್ದೇಶ ಎಂದರು.