ಕೋಟ (ರಾಜಸ್ಥಾನ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ವಿರೋಧ ಪಕ್ಷಗಳ 25 ಸಂಸದರ ಮೇಲೆ ಗುಂಡು ಹಾರಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಬೆದರಿಕೆ ಹಾಕಿದ ಆರೋಪದ ಮೇಲೆ ಬಿಜೆಪಿ ಬೆಂಬಲಿಗ, ಕರ್ಣಿ ಸೇನೆಯವ ಎಂದು ಹೇಳಿಕೊಂಡಿದ್ದ ವ್ಯಕ್ತಿಯೋರ್ವನನ್ನು ರಾಜಸ್ಥಾನದ ಪೊಲೀಸರು ಬಂಧಿಸಿದ್ದಾರೆ.
ರಾಜ್ ಸಿಂಗ್ ಅಮೇರಾ ಬಂಧಿತ ಆರೋಪಿ. ಕೋಟಾದವನಾದ ಈತ, ತಾನು ತಾನು ಕರ್ಣಿ ಸೇನೆ ಎಂದು ಹೇಳಿಕೊಂಡಿದ್ದು, ಬಜೆಟ್ ಅಧಿವೇಶನದ ಮೊದಲ ಹಂತದಲ್ಲಿ ಓಂ ಬಿರ್ಲಾ ಅವರ ಕಚೇರಿಯಲ್ಲಿ ಕಾಂಗ್ರೆಸ್ ಸಂಸದರು ಗದ್ದಲ ಎಬ್ಬಿಸಿದರು ಎಂಬ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಆರೋಪವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಸೇರಿದಂತೆ 25 ಮಂದಿ ಕಾಂಗ್ರೆಸ್ ಸಂಸದರಿಗೆ ಜೀವ ಬೆದರಿಕೆ ಹಾಕಿದ್ದಾರೆ.
भाजपा के एक कार्यकर्ता द्वारा नेता प्रतिपक्ष @RahulGandhi जी को खुलेआम गोली मारने की धमकी देना बेहद गंभीर और शर्मनाक है।
— Delhi Congress (@INCDelhi) February 19, 2026
राजनीतिक मतभेद अपनी जगह हैं, लेकिन हिंसा के लिए उकसाना लोकतंत्र पर सीधा हमला है।
संबंधित व्यक्ति की तुरंत गिरफ्तारी हो और कड़ी कानूनी कार्रवाई सुनिश्चित की… pic.twitter.com/keObsnGAJ9
ಸಂಸದರ ನಡೆದುಕೊಂಡ ರೀತಿಯು ಬಿಜೆಪಿ ಮತ್ತು ಕರ್ಣಿ ಸೇನೆಯ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ, ಓಂ ಬಿರ್ಲಾ ಅವರ ಕಚೇರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 25 ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವ್ಯಕ್ತಿಯು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಓಂ ಬಿರ್ಲಾ ಫೋಟೊ ಇರುವ ಕೊಠಡಿಯಲ್ಲಿ ಕುಳಿತ ವ್ಯಕ್ತಿಯು, ಬಿಜೆಪಿ ಶಾಲು ಹಾಕಿಕೊಂಡು, ತಾನು ಕರ್ಣಿ ಸೇನೆಯ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ.
ಇಂತಹ ಘಟನೆ ಮತ್ತೆ ಸಂಭವಿಸಿದರೆ, ನಾವು ಆ ಸಂಸದರ ಮನೆಗಳಿಗೆ ನುಗ್ಗಿ ಅವರ ಮನೆಗಳನ್ನು ಧ್ವಂಸ ಮಾಡುತ್ತೇವೆ. ಈ ಘಟನೆ ರಾಹುಲ್ ಗಾಂಧಿಯವರ ಆದೇಶದ ಮೇರೆಗೆ ನಡೆದಿದೆ ಎಂದು ನಾನು ನಂಬುತ್ತೇನೆ.
ರಾಹುಲ್ ಗಾಂಧಿ, ಎಚ್ಚರಿಕೆಯಿಂದ ಕೇಳಿ, ಅಂತಹ ಘಟನೆ ಮತ್ತೆ ಸಂಭವಿಸಿದರೆ, ನಾವು ನಿಮ್ಮ ಮನೆಗೆ ನುಗ್ಗಿ ನಿಮಗೆ ಗುಂಡು ಹಾರಿಸುತ್ತೇವೆ’ ಎಂದು ಹೇಳಿದ್ದಾರೆಂದು ವರದಿಯಾಗಿದೆ.