ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೋದಿ ಕೇಂದ್ರ ಸಚಿವ ಸಂಪುಟವನ್ನು ಸಂಪರ್ಕಿಸದೆ ಅಮೆರಿಕದ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಭೋಪಾಲ್‌ನ ಕಿಸಾನ್ ಮಹಾ ಚೌಪಾಲ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಈ ನಿರ್ಧಾರವನ್ನು ಸಂಪೂರ್ಣ ಗೌಪ್ಯವಾಗಿ ಮತ್ತು ಭಾರತೀಯ ರೈತರ ವೆಚ್ಚದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. “ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟವನ್ನು ಕೇಳದೆಯೇ ಅಮೆರಿಕದ ಒಪ್ಪಂದವನ್ನು ಅಂತಿಮಗೊಳಿಸಿದರು” ಎಂದು ಅವರು ಹೇಳಿದರು.
BREAKING : Rahul Gandhi threw open challenge to Narendra Modi 🔥
— Ankit Mayank (@mr_mayank) February 24, 2026
“I challenge Narendra Modi to cancel US Trade Deal but he won’t
Because he was forced to sign the deal under the gun to save his image”
RaGa completely ripped apart Modi 🫡 pic.twitter.com/GrfLSmdfQX
ಅಮೆರಿಕದೊಂದಿಗಿನ ಒಪ್ಪಂದವನ್ನು ಸಂಪೂರ್ಣವಾಗಿ ವಾಷಿಂಗ್ಟನ್‌ನ ಷರತ್ತುಗಳ ಮೇಲೆ ರಚಿಸಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕೇಂದ್ರಕ್ಕೆ “ದಮ್” ಇದ್ದರೆ ಅಮೇರಿಕಾ ಜೊತೆ ಮಾಡಿಕೊಂಡಿರುವ ಒಪ್ಪಂದವನ್ನು ಹಿಂತೆಗೆದುಕೊಳ್ಳುವಂತೆ ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಿದರು.
“ಇದು ಒಪ್ಪಂದವಲ್ಲ. ಇದು ರೈತರ ಹೃದಯಕ್ಕೆ ಬಾಣ. ಅಮೆರಿಕವು ತನಗೆ ಬೇಕಾದಂತೆ ಒಪ್ಪಂದವನ್ನು ರೂಪಿಸಿತು. ಮೋದಿಗೆ ಧೈರ್ಯವಿದ್ದರೆ, ಒಪ್ಪಂದವನ್ನು ರದ್ದುಗೊಳಿಸಲಿ” ಎಂದು ಅವರು ಹೇಳಿದರು.
ಬಿಜೆಪಿ ಕಾರ್ಯಕರ್ತರಿಗೆ ಹೇಳುತ್ತೇನೆ, ಮೋದಿ ಮೇಲೆ ಟ್ರಂಪ್ ಒತ್ತಡವಿದ್ದು, ಇವರು ಒಪ್ಪಂದವನ್ನು ರದ್ದು ಮಾಡಲು ಸಾಧ್ಯವಿಲ್ಲ. ಎಫ್ಸ್ಟೀನ್ ಫೈಲ್ ದಮ್ಕಿ ಮಾಡುತ್ತಿದ್ದಾರೆ. ಅಲ್ಲದೆ ಅದಾನಿಯ ಕ್ರಿಮಿನಲ್ ಕೇಸ್ ಇವರ ತಲೆಯ ಮೇಲೆ ಕುಳಿತಿದೆ ಎಂದರು.
ನಮ್ಮ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ನೀವು ಸಿಂಹಗಳು
ನೀವು ಮೋದಿಗೆ ಹೆದರುವುದಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ನರೇಂದ್ರ ಮೋದಿ ಭಾಷಣ ಮಾಡುವಾಗ, ಅವರ ಕಣ್ಣುಗಳನ್ನು ನೋಡಿ; ನೀವು ಅವರ ಕಣ್ಣುಗಳಲ್ಲಿ ಭಯವನ್ನು ನೋಡುತ್ತೀರಿ ಎಂದು ನಾನು ದೇಶದ ಯುವಕರಿಗೆ ಹೇಳಲು ಬಯಸುತ್ತೇನೆ” ಎಂದು ಕಾಂಗ್ರೆಸ್ ನಾಯಕ ಹೇಳಿದರು