ದೊಡ್ಡಬಳ್ಳಾಪುರ: ಧಾರವಾಡದಲ್ಲಿ ಯುವಕರ ಕಿಚ್ಚು ಆರಂಭವಾಗಿದೆ. ಇದು ಇಡೀ ರಾಜ್ಯ ವ್ಯಾಪಿಯಲ್ಲಿ ಹತ್ತಿ ಉರಿಯುವ ಮುನ್ನ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಉದ್ಯೋಗ ನೇಮಕ ಮಾಡಬೇಕು ಎಂದು ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ (Harish Gowda) ಆಗ್ರಹಿಸಿದರು.
ಧಾರವಾಡದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ವಿಚಾರದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆಯುತ್ತಾ ಬಂದಿದೆ. ಒಂದೇ ಒಂದು ಹುದ್ದೆಯನ್ನು ಭರ್ತಿ ಮಾಡಿಲ್ಲ. ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಯುವಕರಿಗೆ ಉದ್ಯೋಗ ಒದಗಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ ಕುರ್ಚಿಗಾಗಿ ಫೈಟ್ ನಡೆಸುತ್ತಿದ್ದಾರೆ.
ಯುವನಿಧಿಯಲ್ಲಿ ಮೂರು ಸಾವಿರ ಕೊಡುತ್ತಿದ್ದೇವೆ ಎಂದು ಜವಾಬ್ದಾರಿ ಮರೆತೆರೆ ಸಾಲದು. ಯುವನಿಧಿ ನಂಬಿಕೊಂಡು ಯಾವ ಯುವಕರು ಇಲ್ಲ, ಯುವಕರಿಗೆ ಸ್ವಾಭಿಮಾನ ಬದುಕು ರೂಪಿಸಿ, ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರಗಳ ಜವಾಬ್ದಾರಿ ಎಂದು ಹರಿಹಾಯ್ದರು.
ಕಳೆದ ವರ್ಷ ಮೇ ತಿಂಗಳಲ್ಲಿ ಕೊಟ್ಟಿದ್ದ ಮಾತನ್ನ ಕಾಂಗ್ರೆಸ್ ಸರ್ಕಾರ ತಪ್ಪಿದ್ದಾರೆ. 2.85 ಲಕ್ಷಕ್ಕೂ ಹೆಚ್ಚು ಹುದ್ದೆಗಳ ಭರ್ತಿ ಮಾಡುತ್ತೇವೆ ಎಂದು ಹೇಳಿ ಒಂದು ವರ್ಷ ಕಳೆದಿದೆ. ಆದರೆ ಒಂದು ಉದ್ಯೋಗ ಕೂಡ ಭರ್ತಿ ಅಗಿಲ್ಲ ಇದು ನಿಜಕ್ಕೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು ಹೇಳಿದರು.