ಬೆಂಗಳೂರು: ಉದ್ಯೋಗಾಂಕ್ಷಿ ಯುವ ಸಮುದಾಯ ಬಿಜೆಪಿಯವರ (BJP) ಮಾತು ನಂಬಿ ಎಫ್‌ಐಆರ್ (FIR) ಹಾಕಿಸಿಕೊಂಡು ಕೋರ್ಟ್‌ಗೆ ಅಲೆದಾಟ ಮಾಡಬೇಡಿ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ( MLA Pradeep Eshwar) ಕಿವಿಮಾತು ಹೇಳಿದ್ದಾರೆ.
ಧಾರವಾಡದಲ್ಲಿ ಮಂಗಳವಾರ ಉದ್ಯೋಗಾಂಕ್ಷಿಗಳ ಪ್ರತಿಭಟನೆ ಕುರಿತಂತೆ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಯುವಕರು ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡಿದ್ರು. ಕರ್ನಾಟಕದ ಯುವಕರಿಗೆ ವಿನಂತಿ ಮಾಡುತ್ತೇನೆ. ನಿಮ್ಮ ಪರವಾಗಿ ನಮ್ಮ ಸರಕಾರ ಇದೆ. ನಿಮ್ಮ ಭವಿಷ್ಯ ನಮಗೆ ಮುಖ್ಯ. ಇದಕ್ಕಾಗಿಯೇ ವಯಸ್ಸಿನ ಮಿತಿ ಜಾಸ್ತಿ ಮಾಡಿದ್ದೆವು. ಕಾನೂನಿನಲ್ಲಿ ಕೆಲವು ಪ್ರೊಸೀಜರ್ ಮಾಡಿ ತೀರ್ಮಾನ ಮಾಡಬೇಕಾಗುತ್ತದೆ. ಆದಷ್ಟು ಬೇಗ ನೇಮಕಾತಿ ಮಾಡುತೇವೆ ಅಂತ ಸಿಎಂ ಅವರು ಭರವಸೆ ಕೊಟ್ಟಿದ್ದಾರೆ. ಗೃಹ ಸಚಿವರೂ ಹೇಳಿದ್ದಾರೆ ಎಂದರು.
ನಿಮ್ಮ ಜತೆ ನಾವು ಇದ್ದೇವೆ. ಹೋರಾಟ ಮಾಡೋದು ತಪ್ಪು ಅಂತ ಹೇಳೋದಿಲ್ಲ. ಶಾಂತಿಯುತ ಹೋರಾಟ ಮಾಡಿ. ಅಗ್ರೇಸಿವ್ ಆಗಿ ಎಫ್‌ಐಆರ್ ದಾಖಲು ಮಾಡೋ ಹಂತಕ್ಕೆ ಹೋಗಬೇಡಿ. ಎಫ್ ಐಆರ್ ಆದ್ರೆ ನಾಳೆ ಕೆಲಸಕ್ಕೆ ತೊಂದರೆ ಆಗುತ್ತದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡಿ. ಕೆಲಸ ಆಗೋ ಟೈಂನಲ್ಲಿ ಎಫ್ ಐಆರ್ ಹಾಕಿಸಿಕೊಂಡು ಕೋರ್ಟ್‌ಗೆ ಸುತ್ತಬೇಡಿ. ಶಾಂತಿಯುತ ಪ್ರತಿಭಟನೆ ಮಾಡಿ. ನಿಮ್ಮ ಜತೆ ನಾವು ಇದ್ದೇವೆ ಎಂದು ಹೇಳಿದರು.
ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿ ಇದ್ದಾಗ ಉದ್ಯೋಗ ನೇಮಕಾತಿ ಮಾಡಬೇಕೆಂಬುದು ನೆನಪಿಗೆ ಬರಲಿಲ್ಲ. ಬೆಲ್ಲದ್ ಅವರು ಪ್ರತಿಭಟನೆಗೆ ಹೋಗುತ್ತಾರೆ. ಬೆಲ್ಲದ್ ಅವರೇ ನಿಮ್ಮ ಸರಕಾರ ಇದ್ದಾಗ ಯಾಕೆ ನೇಮಕಾತಿ ಮಾಡಿಕೊಂಡಿಲ್ಲ? ಯಡಿಯೂರಪ್ಪ, ಬೊಮ್ಮಾಯಿ ಇದ್ದಾಗ ಯಾಕೆ ನೇಮಕಾತಿ ಮಾಡಿಲ್ಲ.
ಅಶೋಕಣ್ಣ ಒಬೆರಾಯನ ಕಾಲದಲ್ಲಿ ನೇಮಕಾತಿ ಮಾಡಿರೋದು ಮಾತಾಡಬೇಡಿ. 3-4 ವರ್ಷ ಇದ್ದಾಗ ಯಾಕೆ ನೇಮಕಾತಿ ಮಾಡಿಲ್ಲ. ನಾವು ಬಂದು 2.5 ವರ್ಷ ಆಯಿತು. ಬಿಜೆಪಿ ಅಧಿಕಾರದಲ್ಲಿ ಯಾಕೆ ಮಾಡಲಿಲ್ಲ? ಯುವಕರಿಗೆ ಕೇಳೀನಿ, ಇದರಲ್ಲಿ ರಾಜಕೀಯ ತರಬೇಡಿ.
ವಿರೋಧ ಪಕ್ಷದವರ ನಿಮ್ಮನ್ನ ಎತ್ತಿಕಟ್ಟೋ ಕೆಲಸ ಮಾಡುತ್ತಾರೆ. ನಿಮಗೆ ಸಮಸ್ಯೆ ಆದ್ರೆ ಅಶೋಕ್, ಬೆಲ್ಲದ್ ಯಾರೂ ಬರಲ್ಲ. ಯುವಕರನ್ನ ಉದ್ವೇಗ ಮಾಡೋಕೆ ಬಿಜೆಪಿ ಯವರು ಹೇಳ್ತಾ ಇದ್ದಾರೆ. ಯುವಕರು ಅವರ ಮಾತು ನಂಬಬೇಡಿ ಎಂದರು.