ದೊಡ್ಡಬಳ್ಳಾಪುರ: ತಾಲೂಕಿನ ಗುಟ್ಟೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸನ್ಮಿಧಾನದಲ್ಲಿ ನಾಳೆಯಿಂದ (ಮಾ.2) ಮೂರು ದಿನಗಳ ಕಾಲ 2ನೇ ವರ್ಷದ ಜನಗಳ ಜಾತ್ರಾ ಮಹೋತ್ಸವ ಮತ್ತು ಬ್ರಹ್ಮರಥೋತ್ಸವ (Brahmarathotsava) ಆಯೋಜಿಸಲಾಗಿದೆ.
ಮಾ. 2 ರಂದು ಬೆಳಗ್ಗೆ ಗಂಗಾಪೂಜೆ, ಅಂಕುರಾರ್ಪಣೆ, ದ್ವಜಸಂಕಲ್ಪ, ಸುದರ್ಶನ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಮಾ.3 ರಂದು ಕದರಿ ಹುಣ್ಣಿಮೆ ಪ್ರಯುಕ್ತ ಮಧ್ಯಾಹ್ನ 12.8ಕ್ಕೆ ಸಲ್ಲುವ ಅಭಿಜಿನ್ ಲಗ್ನದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಬ್ರಹ್ಮರಥೋತ್ಸವ ನಡೆಯಲಿದೆ. ಬಳಿಕ ಪಾನಕ ಸೇವೆ, ಅನ್ನ ಸಂತರ್ಪಣೆ ಆಯೋಜಿಸಲಾಗಿದೆ.
ಇದೇ ದಿನ ಸಂಜೆ ಪಚ್ಚಾರಲಹಳ್ಳಿ, ಕಾಮೇನಹಳ್ಳಿ, ಆರೂಢಿ, ದೊಡ್ಡಗುಂಡಪ್ಪನಾಯಕನಹಳ್ಳಿ, ಚಿಕ್ಕ ಗುಂಡಪ್ಪನಾಯಕನಹಳ್ಳಿ, ಸಿಂಗ್ರಯ್ಯನಪಾಳ್ಯ, ಕಲ್ಲಕುಂಟೆ ಗರಿಕೇನಹಳ್ಳಿ, ವಡ್ಡನಹಳ್ಳಿ ಕೊಟ್ಟಗೆಮಾಚೇನಹಳ್ಳಿ, ಬನವತಿ, ದಡಘಟ್ಟಮೊಡಗು, ಗೌಡನಕುಂಟೆ, ಕರೇಕಲ್ಲಹಳ್ಳಿ, ಹಾರೋಹಳ್ಳಿ ಅಂಗದವೀರನಹಳ್ಳಿ, ಸೋಮಶೆಟ್ಟಿಹಳ್ಳಿ, ನಾಚಕುಂಟೆ, ತರಿದಾಳು, ನಾಗತೇನಹಳ್ಳಿ, ಇಂದಿರಾನಗರ, ಬೇವಿನಹಳ್ಳಿ, ಕುಕ್ಕಲಹಳ್ಳಿ, ಉಜ್ಜನಿ, ಸಾಸಲು ಹಾಗೂ ಹಾಗೂ ಅಕ್ಕಪಕ್ಕದ ಹಳ್ಳಿಗಳಿಂದ ಅಕರ್ಷಕ ದೀಪಾರತಿಗಳು ನಡೆಯಲಿದೆ.
ಸಂಜೆ 7-00 ರಿಂದ ಪಟಾಕಿ ಪ್ರದರ್ಶನ ಏರ್ಪಡಿಸಿದೆ.
ಮಾ. 4 ರಂದು ಬುಧವಾರ ಬೆಳಗ್ಗೆ ಜಾತ್ರಾ ಮಹೋತ್ಸವದ ಜಲಧಿ ಕಾಯಕ್ರಮ, ಬಾಳೆಮರ ಅಂಬು ಹಾಕುವ ಮುಖೇನ ಶಾಂತಿ ಸಂಪನ್ನ, ಹೋಳಿ ಹಬ್ಬದ ಪ್ರಯುಕ್ತ ಬಣ್ಣದ ಓಕುಳಿ ಮಧ್ಯಾಹ್ನ 12-00 ಗಂಟೆಗೆ ನಡೆಯಲಿದೆ.
ಇದೇ ದಿನ ರಾತ್ರಿ 8 ಗಂಟೆಗೆ ಶ್ರೀ ಗುಟ್ಟೆಲಕ್ಷ್ಮೀನರಸಿಂಹಸ್ವಾಮಿ ನಾಟಕ ಮಂಡಲಿ ವತಿಯಿಂದ ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಆಯೋಜಿಸಲಾಗಿದೆ ಎಂದು ಮುಖಂಡ ಪಚ್ಚಾರಲಹಳ್ಳಿ ರಮೇಶ್ ತಿಳಿಸಿದ್ದಾರೆ. (ಸಂಗ್ರಹ ಚಿತ್ರ ಬಳಸಲಾಗಿದೆ)