ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ನಗರ ಪೊಲೀಸರು ನಗರದ ಐಬಿ ಮುಂಭಾಗ ಆಯೋಜಿಸಿದ್ದ ‘ಕರ್ನಾಟಕ ರಾಜ್ಯ ಪೊಲೀಸ್ ರನ್’ ಗೆ (Karnataka Police Run) ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಶತೃ ದೇಶಗಳು ನಮ್ಮ ದೇಶವನ್ನು ನಾಶ ಮಾಡಲು ಯುವಕನ್ನು ಗುರಿ ಮಾಡುತ್ತಾರೆ, ಮಾದಕ ವಸ್ತುಗಳ ಮೂಲಕ ದೇಶದ ಯುವಕರನ್ನ ವ್ಯಸನಿಗಳನ್ನಾಗಿ ಮಾಡುತ್ತಾರೆ, ಯುವಕರು ದೇಶದ ಸಂಪತ್ತು ಅಂತಹ ಯುವಕರು ಮಾದಕ ವ್ಯಸನಕ್ಕೆ ತುತ್ತಾಗದೆ ದೇಶದ ಭವಿಷ್ಯ ಪ್ರಜೆಗಳಾಗಿ ದೇಶ ಕಟ್ಟುವ ಕೆಲಸ ಮಾಡಬೇಕೆಂದರು.
ಮಾದಕ ವಸ್ತುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರಣಕ್ಕೆ ಪ್ರತಿ ವರ್ಷ ಜಿಲ್ಲಾ ಪೊಲೀಸ್ ವತಿಯಂದ ಜಾಗೃತಿ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗುತ್ತದೆ, ಈ ಬಾರಿ ಡ್ರಗ್ಸ್ ಮುಕ್ತ ಕರ್ನಾಟಕ ಘೋಷಣೆಯೊಂದಿಗೆ ಅರಿವು ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿದೆ, ಜಿಲ್ಲಾ ಪೊಲೀಸ್ ವ್ಯಾಪ್ತಿಯ 4 ತಾಲೂಕು ಕೇಂದ್ರಗಳಲ್ಲಿ 5ಕೆ ಮತ್ತು 10ಕೆ ಓಟಕ್ಕೆ ಚಾಲನೆ ನೀಡಲಾಗಿದೆ.
ಐಬಿ ವೃತ್ತದ ಬಳಿ ಆರಂಭವಾದ ಮ್ಯಾರಥಾನ್, ಕೊಂಗಾಡಿಯಪ್ಪ ಕಾಲೇಜು ಮೈದಾನದಲ್ಲಿ ಮುಕ್ತಾಯವಾಯಿತು.
ಡಿವೈಎಸ್ಪಿ ಪಾಡುರಂಗ, ಶ್ರೀ ರಾಮ ಆಸ್ಪತ್ರೆಯ ಡಾ.ವಿಜಯಕುಮಾರ್, ತಾಲೂಕಿನ ವಿವಿಧ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್, ಸಿಬ್ಬಂದಿಗಳು, ಸರ್ಕಾರಿ ಮತ್ತು ಖಾಸಗಿ ಶಾಲೆ ಸುಮಾರು 600 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.