
ದೊಡ್ಡಬಳ್ಳಾಪುರ: ರಸ್ತೆ ದಾಟುತ್ತಿದ್ದ ವೃದ್ಧನಿಗೆ ಕಾರು ಡಿಕ್ಕಿ (Accident) ಹೊಡೆದ ಪರಿಣಾಮ, ವೃದ್ಧನಿಗೆ ಗಾಯಗಳಾಗಿರುವ ಘಟನೆ ಪಾಲನಜೋಗಿಹಳ್ಳಿ ಬಳಿ ಶನಿವಾರ ಸಂಭವಿಸಿದೆ.

ದೊಡ್ಡಬಳ್ಳಾಪುರ ಕಡೆಯಿಂದ ಬರುತ್ತಿದ್ದ ಕಾರು, ರಸ್ತೆ ದಾಟುತ್ತಿದ್ದ ವೃದ್ಧನಿಗೆ ಡಿಕ್ಕಿ ಹೊಡೆದಿದ್ದು, ವೃದ್ಧನಿಗೆ ತೀವ್ರವಾದ ಗಾಯಗಳಾಗಿದೆ.

ಈ ವೇಳೆ ಹಿಂದಿನಿಂದ ಮತ್ತೊಂದು ಕಾರು ಮುಂದೆ ಇದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರುಗಳು ಜಖಂಗೊಂಡಿವೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲನಜೋಗಿಹಳ್ಳಿ ರಸ್ತೆಯಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಅಪಘಾತಗಳು ಸಂಭವಿಸುತ್ತಿದ್ದು ಸ್ಥಳೀಯರು, ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ.
