ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ಅಷ್ಟಮಿ ಜ.7.2025 ಮಂಗಳವಾರ; ವಿಶೇಷವಾಗಿ ದುರ್ಗಾಪರಮೇಶ್ವರಿ ದೇವಿಗೆ ಕೆಂಪು ಕಣಗಿಲ್ಲ ಹೂವಿನಿಂದ ಪೂಜೆ ಮಾಡಿ, ತುಪ್ಪದ ದೀಪಗಳನ್ನು ಹಚ್ಚಿ, ಪ್ರಾರ್ಥಿಸಿದರೆ ದಿನವೂ ಶುಭವಾಗುತ್ತದೆ. Astrology
ಮೇಷ ರಾಶಿ: ಮನಸ್ಸಿನಲ್ಲಿ ನಾನಾ ಚಿಂತೆ, ಅನವಶ್ಯಕ ತಿರುಗಾಟ, ಕಾರ್ಯದಲ್ಲಿ ಯಶಸ್ಸು, ವಿದ್ಯಾರ್ಥಿಗಳಿಗೆ ವಿದ್ಯಾ ಲಾಭ, ಅನುಕೂಲವಾದ ದಿನ, ಧನಾರ್ಜನೆಯಲ್ಲಿ ಪ್ರಗತಿ. (ಪರಿಹಾರಕ್ಕಾಗಿ ದತ್ತಾತ್ರೇಯರ ಸ್ತೋತ್ರವನ್ನು ಪಠಣೆ ಮಾಡಿ)
ವೃಷಭ ರಾಶಿ: ಕಾರ್ಯಗಳಲ್ಲಿ ಜಯ, ವಿದ್ಯಾನುಕೂಲ, ಯಾವುದೇ ಕಾರ್ಯವನ್ನು ಮಾಡುವಾಗ ಗಮನವಿಟ್ಟು ಮಾಡಿ, ಆತುರ ಬೇಡ. ಬಂಧು ಮಿತ್ರರ ಮಾತುಗಳನ್ನು ನಿರ್ಲಕ್ಷಿಸಬೇಡಿ. (ಪರಿಹಾರಕ್ಕಾಗಿ ಗಣಪತಿಗೆ ಪೂಜೆಯನ್ನು ಮಾಡಿ)
ಮಿಥುನ ರಾಶಿ: ಸ್ವಲ್ಪ ಕಠಿಣವಾದ ಸ್ವಭಾವ, ಆತುರ, ಕೆಲಸಗಳು ಕೆಡುವ ಸಂಭವ. ಧನಾರ್ಜನೆಯಲ್ಲಿ ಪ್ರಗತಿ ಇಲ್ಲ, ವಿದ್ಯಾರ್ಜನೆ ಸ್ವಲ್ಪ ಕಷ್ಟ, ಕಾರ್ಯಕ್ಕೆ ತಕ್ಕಂತೆ ಗುರಿಯನ್ನು ಇಟ್ಟುಕೊಳ್ಳಿ. ವ್ಯಸನಗಳು ಬೇಡ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯನ್ನು ಪೂಜೆ ಮಾಡಿ)
ಕಟಕ ರಾಶಿ: ದೂರದ ಪ್ರಯಾಣದ ಆಸೆ. ಆದರೆ ಧನದ ಭಾವ, ಅದಕ್ಕೋಸ್ಕರವಾಗಿ ಕೆಲವು ಕಾರ್ಯಗಳನ್ನು ಮಾಡುವ ಹಂಬಲ. ಯಾವುದೇ ಕೆಲಸವನ್ನು ಮಾಡಲು ಧನವನ್ನು ಹೂಡಿಕೆ ಮಾಡುವ ಮುನ್ನ ಎಚ್ಚರವಿರಲಿ, ಆತುರ ನಿರ್ಧಾರ ಬೇಡ.
(ಪರಿಹಾರಕ್ಕಾಗಿ ಶಿವನ ದೇವಾಲಯದಲ್ಲಿ ಬಿಲ್ವಪತ್ರೆಯಿಂದ ಪೂಜೆ ಮಾಡಿಸಿ)
ಸಿಂಹ ರಾಶಿ: ಎಲ್ಲ ಕಾರ್ಯದಲ್ಲೂ ಮುನ್ನುಗ್ಗ ಬೇಡಿ, ಅವಕಾಶ, ದೃಢವಾದ ನಿರ್ಧಾರ. ಅತ್ಯಂತ ಸುಖಕರವಾದ ಪ್ರಯಾಣ, ಶ್ರೇಷ್ಠವಾದ ಯೋಚನೆಗಳು ಒಳ್ಳೆಯದಾಗುತ್ತದೆ. ಆತುರ ಬೇಡ ಎಚ್ಚರಿಕೆ ಬಹಳ ಅಗತ್ಯ. (ಪರಿಹಾರಕ್ಕಾಗಿ ಆಂಜನೇಯನ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)
ಕನ್ಯಾ ರಾಶಿ: ಶಾಂತವಾಗಿ ಆಲೋಚನೆ ಮಾಡಿ, ಅತ್ಯಂತ ಒಳ್ಳೆಯ ಮನಸ್ಸನ್ನು, ಪ್ರಶಾಂತವಾದ ನೆಮ್ಮದಿಯಾದ ಹೃದಯವನ್ನು ಹೊಂದಿದ್ದೀರಿ, ಆತುರ ಏಕೆ? ಸಮಾಧಾನದಿಂದ ವರ್ತನೆ ಮಾಡಿ. ಕೋಪ ಮಾಡಿಕೊಳ್ಳಬೇಡಿ. (ಪರಿಹಾರಕ್ಕಾಗಿ ದುರ್ಗಾದೇವಿಯ ಪೂಜೆಯನ್ನು ಮಾಡಿ)
ತುಲಾ ರಾಶಿ: ಅನಾವಶ್ಯಕವಾಗಿ ಚಿಂತೆ ಬೇಡ, ಆತುರ ಬೇಡ, ದೀರ್ಘವಾಗಿ ಯೋಚಿಸಿ. ಶುಭವಾಗುತ್ತದೆ, ಕಾರ್ಯಗಳಲ್ಲಿ ಸಾಧನೆ ಉನ್ನತ ಮಟ್ಟದ್ದಾಗಿದೆ, ಬಹಳ ಸಂತೋಷ. ಆದರೆ ಬಂಧು ಮಿತ್ರರ ಜೊತೆ ವ್ಯವಹಾರ ಬೇಡ, ಎಚ್ಚರಿಕೆ. (ಪರಿಹಾರಕ್ಕೆ ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ)
ವೃಶ್ಚಿಕ ರಾಶಿ: ಕೆಲಸಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸಂಭವವಿದೆ ಎಚ್ಚರಿಕೆ, ದೀರ್ಘವಾಗಿ ಯೋಚಿಸಿ,, ಎಲ್ಲರ ಭಾವನೆಗೂ ಬೆಳಕನ್ನು ಚೆಲ್ಲಿ, ಯತ್ನ ಕಾರ್ಯಗಳಲ್ಲಿ ಅನುಕೂಲ, ವಿದ್ಯೆಯಲ್ಲಿ ಬಹಳ ಅನುಕೂಲ. (ಪರಿಹಾರಕ್ಕಾಗಿ ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿ)
ಧನಸ್ಸು ರಾಶಿ: ಎಲ್ಲಾ ಶುಭಕಾರ್ಯಗಳಲ್ಲೂ ಸ್ವಲ್ಪ ಸಂದೇಹ, ಅತ್ಯಂತ ನಿಧಾನವಾದ ಪ್ರಗತಿ, ಉತ್ಸಾಹವಿಲ್ಲದಿದ್ದರೂ ಕಾರ್ಯಗಳಲ್ಲಿ ಮುನ್ನುಗ್ಗುವುದಕ್ಕೆ ಪ್ರಯತ್ನ, ಆಲೋಚನೆ ಇಲ್ಲ ನಿರಾಸಕ್ತಿ. (ಪರಿಹಾರಕ್ಕಾಗಿ ಸೂರ್ಯನಾರಾಯಣನ ಸ್ತೋತ್ರ ಪಾರಾಯಣ ಮಾಡಿ)
ಮಕರ ರಾಶಿ: ಕಾರ್ಯಗಳಲ್ಲಿ ಹಿನ್ನಡೆ, ತುಂಬಾ ಜಟಿಲವಾದ ಮಾನಸಿಕ ಸಮಸ್ಯೆಗಳು, ದೃಢವಲ್ಲದ ನಿರ್ಧಾರಗಳು, ಅತಿಯಾದ ಆಸೆ, ಬಯಕೆ, ಕಾಮನೆ, ದುಃಖ, ನಿರಾಶಕ್ತಿ, ಸ್ವಲ್ಪ ಕಷ್ಟದ ಪರಿಸ್ಥಿತಿ
(ಪರಿಹಾರಕ್ಕಾಗಿ ನವನಾಗ ಸ್ತೋತ್ರದ ಪಾರಾಯಣ ಮಾಡಿ)
ಕುಂಭ ರಾಶಿ: ಆರೋಗ್ಯ ಸಮಸ್ಯೆ, ಧನ ಲಾಭವಿಲ್ಲ, ಭಯ, ಆತಂಕ, ಅರ್ಧಂಬರ್ಧ ಕೆಲಸ ಎಂದು ಮನಸ್ಸಿನಲ್ಲಿ ಬೇಸರ, ನಿಶ್ಚಿತ ಕಾರ್ಯಕ್ಕಾಗಿ ಮನಸ್ಸಿನಲ್ಲಿ ತೊಳಲಾಟ, ನಾನಾ ಚಿಂತೆ, ಆಸರೆ ಬೇಕು ಎನಿಸುತ್ತಿದೆ. (ಪರಿಹಾರಕ್ಕಾಗಿ ಗಣಪತಿಯನ್ನು ಪೂಜಿಸಿ)
ಮೀನ ರಾಶಿ: ಸಹಿಷ್ಣುಗಳಾದರೆ ಅನುಕೂಲವಿರುವುದಿಲ್ಲ, ಸೋದರ ಸೋದರಿಯ ಜೊತೆ ಸಂಬಂಧ ಚೆನ್ನಾಗಿ ಇರಿಸಿಕೊಳ್ಳಬೇಕು. ಸ್ವಲ್ಪ ಕಷ್ಟವಾದರೂ ಎಲ್ಲ ಕಾರ್ಯವನ್ನು ಮಾಡಬೇಕು, ದುಃಖವನ್ನು ನಿವಾರಿಸಿಕೊಳ್ಳಿ, ಧೈರ್ಯದಿಂದ ಮುನ್ನುಗ್ಗಿ ಕಾರ್ಯವು ಶುಭವಾಗುತ್ತದೆ, ಯೋಚಿಸಿ, ಆತಂಕ ಬೇಡ. (ಪರಿಹಾರಕ್ಕಾಗಿ ಅಮ್ಮನವರನ್ನು ಪೂಜಿಸಿ ಶುಭವಾಗತ್ತದೆ)
ರಾಹುಕಾಲ: 3-00 PMರಿಂದ 4-30PM
ಗುಳಿಕಕಾಲ: 12-00 PM ರಿಂದ 1-30PM
ಯಮಗಂಡಕಾಲ: 9-00AMರಿಂದ 10-30AM
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572