Daily story Worry about tomorrow

Daily story: ಹರಿತಲೇಖನಿ ದಿನಕ್ಕೊಂದು ಕಥೆ: ನಾಳೆಯ ಚಿಂತೆ

Daily story: ಹಲವರಿಗೆ ಜೀವನ ನಿರ್ವಹಣೆಯ ಚಿಂತೆಯಾದರೆ, ಮತ್ತೆ ಕೆಲವರಿಗೆ ಜೀವನವೇ ಚಿಂತೆಯಾಗಿರುತ್ತದೆ. ನಾಳೆ ಏನು ನಾಡಿದ್ದು ಏನು ಎನ್ನುವ ಚಿಂತೆಯಲ್ಲಿ, ಕಣ್ಣೆದುರು ಇರುವ ಖುಷಿಯನ್ನೇ ಮರೆತುಬಿಡುತ್ತಾರೆ.

ನಿರೀಕ್ಷೆ ಇರಬೇಕು. ಆದರೆ ಮಿತಿಮೀರಿ ಸಂಪತ್ತ ಮಾಡಬೇಕು ಎಂಬ ಹೆಬ್ಬಯಕೆಯಿಂದ ಮಾಡ ಹೊರಟರೆ, ಚಿಂತೆಯಲ್ಲಿ ಮುಪ್ಪಾಗುತ್ತಾರೆ.
ಕೂಡಿಟ್ಟ ಸಂಪತ್ತು ಪರರ ಪಾಲಾಗುತ್ತದೆ.

ಈ ಕುರಿತು ಬುದ್ಧನ ಒಂದು ಕಥೆ

ಒಬ್ಬ ಆಗರ್ಭ ಶ್ರೀಮಂತನಿದ್ದ. ಅವನು ಎರಡ್ಮೂರು ತಲೆಮಾರಿಗಾಗುವಷ್ಟು ಆಸ್ತಿಯನ್ನು ಮಾಡಿದ್ದ. ಅವನ ವ್ಯಾಪಾರ- ವಹಿವಾಟು ಒಂದೆರಡಾಗಿರದೆ ನಾನಾ ಮೂಲಗಳಾಗಿದ್ದವು.

ಅವನು ಅಷ್ಟು ಶ್ರೀಮಂತನಾಗಿದ್ದರೂ ಇನ್ನಷ್ಟು ಗಳಿಸುವ ಚಿಂತೆ ಕಾಡುತ್ತಿತ್ತು. ಏಕೆಂದರೆ ಅವನು ಮಾತ್ರವಲ್ಲದೆ ಅವನ ಮಕ್ಕಳು, ಮೊಮ್ಮಕ್ಕಳು ಕೂತು ಉಂಡರೂ ಕರಗದಷ್ಟು ಆಸ್ತಿ ಮಾಡಬೇಕು. ಮತ್ತು ಆಹಾರ, ವಸ್ತ್ರ ,ಧನ – ಧಾನ್ಯಗಳು ಎಂದಿಗೂ ಕೊರತೆಯಾಗಬಾರದು ಎಂಬುದು ಅವನ ಯೋಚನೆ.

ಈ ಚಿಂತೆಯಲ್ಲಿಯೇ ಒಂದು ದಿನ ತನ್ನ ಗುಮಾಸ್ತನನ್ನು ಕರೆದು, ನನ್ನ ಆಸ್ತಿ ಒಟ್ಟು ಎಷ್ಟು ಇದೆ, ಅದು ಎಷ್ಟು ತಲೆಮಾರಿನ ತನಕ ಬರುತ್ತದೆ, ಅದನ್ನು ವಿವರವಾಗಿ ತಿಳಿಸು ಆನಂತರ ನಾನು ಮತ್ತಷ್ಟುಗಳಿಸಬೇಕೋ, ಬೇಡವೋ ಯೋಚಿಸುತ್ತೇನೆ.

ಗುಮಾಸ್ತನು, ಸ್ವಲ್ಪ ದಿನಗಳಲ್ಲೆ, ಶ್ರೀಮಂತನ ಆಸ್ತಿ ಎಲ್ಲೆಲ್ಲಿ ಎಷ್ಟೆಷ್ಟು ಇದೆ ಎಂದು ಲೆಕ್ಕ ಮಾಡಿ, ಶ್ರೀಮಂತನ ಬಳಿ ಬಂದು, ಸರ್, ನಾನು ನಿಮ್ಮ ಆಸ್ತಿ ಎಲ್ಲವನ್ನು ಲೆಕ್ಕ ಹಾಕಿದ್ದೇನೆ.

ನೀವು ಈಗ ಖರ್ಚು ಮಾಡುತ್ತಿರುವ ಲೆಕ್ಕವನ್ನೂ ಸೇರಿಸಿ, ಎಷ್ಟಿದೆ ಎಂದರೆ, ನೀವು ಇನ್ನು ಮುಂದೆ ಸಂಪಾದನೆ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ನಿಮ್ಮ ಹಾಗೂ ನಿಮ್ಮ ಎರಡು ತಲೆಮಾರು ಕೂತುಂಡರೂ ಕರಗದಷ್ಟು ಆಸ್ತಿ ಇದೆ.

ನೀವು ಏನು ಚಿಂತಿಸದೆ ಆರಾಮವಾಗಿ ಜೀವನ ಮಾಡಿ ಎಂದನು. ಆದರೆ ಆ ಶ್ರೀಮಂತನು, ಯೋಚಿಸಿ ಹ್ಞಾಂ ಏನಂದೆ ಕೇವಲ ಎರಡು ತಲೆಮಾರಿಗಾಗುವಷ್ಟು ಮಾತ್ರ ಆಸ್ತಿ ಇದೆಯೇ ಮತ್ತೆ ಅದರ ಮುಂದಿನ ಎರಡು ತಲೆಮಾರುಗಳು ಗತಿ ಏನು.‌?

ತಲೆಮಾರುಗಳಿಗಾಗಿ ನಾನು ಮತ್ತಷ್ಟು ಗಳಿಸಬೇಕು ಎಂದುಕೊಂಡು ಕಾರ್ಯಪ್ರವೃತ್ತನಾದನು.

ದಿನ ಬೆಳಗಾದರೆ, ಮೂರು ಮತ್ತು ನಾಲ್ಕು ತಲೆಮಾರುಗಳ ಬಗ್ಗೆ ಯೋಚಿಸ ತೊಡಗಿದನು, ಶ್ರಮಪಟ್ಟು ಸಂಪಾದಿಸಲು, ತನ್ನ ಆಹಾರ, ನೀರು, ವಿಶ್ರಾಂತಿ, ನಿದ್ರೆ, ಸೇರಿದಂತೆ ಎಲ್ಲಾ ಸಂಬಂಧಗಳನ್ನು ಮರೆತು ಗಳಿಸತೊಡಗಿದನು.

ಆಯಾಸ ಮತ್ತು ಚಿಂತೆಯಿಂದ ಕಾಯಿಲೆ ಬಿದ್ದನು. ಯಾವ ಔಷಧಿಗಳು ಉಪಚಾರಗಳು ಉಪಯೋಗಕ್ಕೆ ಬರಲಿಲ್ಲ. ಅವನು ಇಷ್ಟುಗಳಿಸಿದರು ಸಾಲದು ಎಂದೇ ಅವನಿಗೆ ಅನಿಸುತ್ತಿತ್ತು.

ಈ ಚಿಂತೆಯಲ್ಲಿ ಅವನ ಸುಂದರ ಯೌವ್ವನವೆಲ್ಲ ಹೋಯಿತು. ದೇಹ ಮುಖ ಸುಕ್ಕು ಬಿದ್ದಿತು. ಯೋಚಿಸಿ ಯೋಚಿಸಿ ಬೆನ್ನು ಬಗ್ಗಿತು. ಕೆಲವೆ ವರ್ಷಗಳ ಕೆಳಗೆ ನೋಡಿದವರು ಈಗ ಅವನನ್ನು ನೋಡಿದರೆ ಗುರುತು ಸಿಗದಷ್ಟು ಬದಲಾಗಿದ್ದನು.

ಗೆಳೆಯನ ಭೇಟಿ

ಹೀಗಿರುವಾಗ ಒಂದು ದಿನ ಅವನನ್ನು ನೋಡಲು ಆತ್ಮೀಯ ಗೆಳೆಯ ಬಂದನು. ತಲೆ ಮೇಲೆ ಕೈಹೊತ್ತು ಚಿಂತೆ ಮಾಡುತ್ತಾ ಕುಳಿತಿದ್ದ ವ್ಯಕ್ತಿಯನ್ನು ನೋಡಿ ಯಾರಿರಬಹುದು ಎಂದು ಯೋಚಿಸುತ್ತಿದ್ದಾಗ, ಎಲ್ಲವನ್ನು ತಿಳಿದು ಅವನಿಗೆ ಇವನೇ ತನ್ನ ಗೆಳೆಯ ಎಂದು ಗೊತ್ತಾಯಿತು.

ಆ ವ್ಯಾಪಾರಿ, ಬಂದ ಗೆಳೆಯನ ಜೊತೆಗೂ, ಗೆಳೆಯಾ ನಾನು ಗಳಿಸಿದ ಸಂಪತ್ತು ನನ್ನ ಮುಂದಿನ ಎರಡು ತಲೆಮಾರಿಗಾಗುವಷ್ಟು ಮಾತ್ರ ಇದೆ.

ಮತ್ತೆ ಮುಂದಿನ ಎರಡು ತಲೆಮಾರುಗಳ ಚಿಂತೆ ಕಾಡುತ್ತಿದೆ, ಅವರಿಗೆ ಆಸ್ತಿ ಮಾಡಬೇಕು ಹೇಗೆ ಮಾಡಲಿ..? ಇದನ್ನು ಕೇಳಿ ಗೆಳೆಯನು ಮೂಕನಾಗಿ, ನಗಬೇಕೊ, ಅಳಬೇಕೊ ಅವನಿಗೆ ತಿಳಿಯಲಿಲ್ಲ.

ಆಡುವ ಮಾತನ್ನು ನಿಲ್ಲಿಸಿದನು. ಸ್ವಲ್ಪ ಹೊತ್ತು ಬಿಟ್ಟು, ನೋಡು ಸ್ನೇಹಿತ ನಿನ್ನ ಚಿಂತೆ ನನಗೆ ಅರ್ಥವಾಗಿದೆ. ಅದಕ್ಕೊಂದು ಪರಿಹಾರವಿದೆ.

ನಮ್ಮ ಊರಿನ ಹೊರವಲಯದಲ್ಲಿ ಒಬ್ಬ ಸಾಧುಗಳು ಇದ್ದಾರೆ. ಅವರು ಯಾರಿಗೆ ಎಂತಹದೇ ಸಮಸ್ಯೆ ಇದ್ದರೂ ಅದನ್ನು ಕ್ಷಣಮಾತ್ರದಲ್ಲಿ ಪರಿಹರಿಸುತ್ತಾರೆ.

ಅವರ ಬಳಿ ನಿನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ ನೀನು ಅವರ ಬಳಿ ಹೋಗುವಾಗ ಅವರಿಗೆ ಊಟವನ್ನು ತೆಗೆದುಕೊಂಡು ಹೋಗಬೇಕು ಎಂದನು.

ಗೆಳೆಯನ ಮಾತಿನಂತೆ, ಮರುದಿನವೇ ಒಳ್ಳೆಯ ಊಟವನ್ನು ತೆಗೆದುಕೊಂಡು ಸಾಧುಗಳ ಬಳಿಗೆ ಬಂದನು.

ಆಹಾರವನ್ನು ನೋಡಿ ಸಾಧುಗಳ ಕೈಮುಗಿದು ಅವರ ಶಿಷ್ಯರಿಗೆ ಹೇಳಿದರು, ನೋಡಿ ಈ ಮನುಷ್ಯ ನಿಮಗೆ ಊಟವನ್ನು ತಂದಿದ್ದಾರೆ ಸ್ವೀಕರಿಸಿ ಎಂದರು.

ಆದರೆ ಆ ಶಿಷ್ಯ, ಗುರುಗಳೇ ಇಂದು ನಮಗೆ ಮುಂಜಾನೆಯೇ ಒಬ್ಬರು ಊಟ ತಂದುಕೊಟ್ಟಿದ್ದಾರೆ ನಮ್ಮ ಊಟ ಆಗಿದೆ ಎಂದನು.

ಆಗ ಸಾಧು ಶ್ರೀಮಂತನಿಗೆ, ನಮ್ಮನ್ನು ಕ್ಷಮಿಸಿ, ನೀವು ತಂದ ಊಟವನ್ನು ನಾವು ಸ್ವೀಕರಿಸುವುದಿಲ್ಲ ಏಕೆಂದರೆ ಯಾರೋ ಒಬ್ಬರು ನಮಗೆ ಊಟ ತಂದುಕೊಟ್ಟಿದ್ದಾರೆ ಎಂದರು.

ಅದಕ್ಕೆ ಶ್ರೀಮಂತನು, ಅವರು ಊಟ ಕೊಟ್ಟರೆ ಕೊಡಲಿ ಜೊತೆಗೆ ಇದನ್ನು ತೆಗೆದುಕೊಳ್ಳಿ ಎಂದನು. ಅದು ಸಾಧ್ಯವಿಲ್ಲ ಏಕೆಂದರೆ ನಾವು ದಿನಕ್ಕೆ ಒಂದು ಸಲ ಮಾತ್ರ ಊಟ ಸೇವಿಸುತ್ತೇವೆ ಎಂದರು.

ಮತ್ತೆ ಶ್ರೀಮಂತನು, ಆದರೇನಂತೆ ಇದನ್ನು ತೆಗೆದು ಇಟ್ಟುಕೊಳ್ಳಿ ನಾಳೆಗೆ ಆಗುತ್ತದೆ ಎಂದನು. ಅದಕ್ಕೆ ಸಾಧು ಹೇಳಿದರು ನಾವು ನಾಳೆಯ ಕುರಿತು ಎಂದೂ ಚಿಂತಿಸುವುದಿಲ್ಲ.

ಅದಕ್ಕೆ ಶ್ರೀಮಂತನು, ಇವತ್ತು ಸಿಕ್ಕಂತೆ ನಾಳೆ ಯಾರೂ ನಿಮಗೆ ಊಟ ಕೊಡದಿದ್ದರೆ ಏನು ಮಾಡುತ್ತೀರಿ? ಆಗ ಸಾಧು ಹೇಳಿದನು.

ನಾಳೆಯ ಚಿಂತೆ ನಮಗಿಲ್ಲ ಸಿಕ್ಕರೆ ತಿನ್ನುತ್ತೇವೆ ಇಲ್ಲದಿದ್ದರೆ ಇಲ್ಲ ಹುಟ್ಟಿಸಿದ ದೇವರು, ಹುಲ್ಲು ಮೇಯಿಸದೆ ಇರಲಾರನು.

ಈ ದಿನ ಸಿಕ್ಕ ಹಾಗೆ ನಾಳೆಯೂ ಊಟ ಸಿಗಬಹುದು ಸಿಗದೇ ಇದ್ದರೂ ಇರಬಹುದು. ಆದರೆ ನಾಳೆ ಹೊತ್ತಿಗೆ ನಾವು ಇರುತ್ತೇವೆ ಎಂದು ಹೇಳುವುದಾದರೂ ಹೇಗೆ? ಆದುದರಿಂದ ನಾಳಿನ ಊಟದ ಕುರಿತು ಯೋಚಿಸುವುದಿಲ್ಲ.

ಈ ಹೊತ್ತಿನ ತನಕವೂ ಭಗವಂತ ನಮಗೆ ಊಟ ಕೊಟ್ಟಿದ್ದಾನೆ ಎಂದನು. ಶ್ರೀಮಂತನು ಸನ್ಯಾಸಿಗೆ
ನಮಸ್ಕರಿಸಿ ಮನೆಗೆ ಹೊರಟನು.

ಮಾರ್ಗದಲ್ಲಿ ಯೋಚಿಸಿದನು. ಸಾಧು ಮತ್ತು ಶಿಷ್ಯರಿಗೆ ನಾಳೆ ಊಟವಿಲ್ಲ ಆದರೆ ಚಿಂತೆ ಮಾಡುತ್ತಿಲ್ಲ. ಎರಡು ತಲೆ ಮಾರಿಕಾಗೋವಷ್ಟು ಆಸ್ತಿ ನನ್ನ ಬಳಿ ಇದ್ದರೂ, ಅದರ ಮುಂದಿನ ತಲೆಮಾರಿಗೆ ಆಗುವ ಆಸ್ತಿಯ ಬಗ್ಗೆ ಚಿಂತಿಸುತ್ತಾ ಈಗಿರುವ ಸುಖ ಸಂತೋಷಗಳನ್ನೆಲ್ಲ ಕಳೆದುಕೊಂಡಿದ್ದೇನೆ.

ಇಷ್ಟು ವರ್ಷಗಳವರೆಗೂ ಮುಂದಿನದನ್ನೆ ಚಿಂತಿಸುತ್ತಾ ಕಳೆದೆ, ಯಾವ ಸಂತೋಷ ನನಗೆ ಸಿಕ್ಕಿತ್ತೋ, ಅದನ್ನು ಅನುಭವಿಸಲಿಲ್ಲ.

ಇನ್ನು ಮುಂದಾದರೂ ಸಾಧುಗಳ ಮಾತಿನಂತೆ ನಾಳೆಯ ಚಿಂತೆಯನ್ನು ಬಿಟ್ಟು, ಭಗವಂತ ಏನು ಕೊಡುತ್ತಾನೋ ಅದನ್ನು ಸ್ವೀಕರಿಸಬೇಕು.

ಆಗ ಮಾತ್ರ ಇನ್ನು ಬೇಕು ಮತ್ತಷ್ಟು, ಮಗದಷ್ಟು ಬೇಕು ಎಂಬ ಯಾವ ಚಿಂತೆಯು ಕಾಡುವುದಿಲ್ಲ ಎಂದುಕೊಂಡನು.

ಬರಹ: ಆಶಾ ನಾಗಭೂಷಣ, (ಸಾಮಾಜಿಕ ಜಾಲತಾಣ) ಸಾಂದರ್ಭಿಕ ಚಿತ್ರ ಬಳಸಲಾಗಿದೆ.

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!