ಜಲಗಾಂವ್: ನಿನ್ನೆ ಸಂಭವಿಸಿದ ಭೀಕರ ರೈಲು ಅವಘಡದಲ್ಲಿ (Train accident) ಮಡಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದ ಜಲಗಾಂವ್ ಬಳಿ ತಾವಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿದ ಕಾರಣ, ಆ ರೈಲಿನಿಂದ ಜಿಗಿದು ಕೆಳಗೆ ನಿಂತಿದ್ದ ಪ್ರಯಾಣಿಕರ ಮೇಲೆ ಪಕ್ಕದ ಹಳಿ ಮೇಲೆ ಬಂದ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಹರಿದಿತ್ತು
ಆಗ 13 ಜನರು ದಾರುಣ ರೀತಿಯಲ್ಲಿ ಮೃತಪಟ್ಟು, 50ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.
ಜಲಗಾಂವ್ ಜಿಲ್ಲೆಯ ಮಹೆಜಿ ಮತ್ತು ಪರ್ದಾಡೆ ರೈಲು ನಿಲ್ದಾಣಗಳ ನಡುವೆ ಬುಧವಾರ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿದೆ. ಮೃತರ ಕುಟುಂಬಕ್ಕೆ ಮಹಾರಾಷ್ಟ್ರ ಸರ್ಕಾರ 5 ಲಕ್ಷ ರು. ಪರಿಹಾರ ಪ್ರಕಟಿಸಿದೆ ಹಾಗೂ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಿದೆ. ಸಾವಿನ ಸಂಖ್ಯೆ ಇನ್ನೂ ಏರುವ ಆತಂಕವಿದೆ.
बहुत ही दुःखद हादसा हुआ !
— Shivam Yadav (@shivamsln001) January 22, 2025
हमारे देश में कुछ दिन बाद एक न एक बड़ा ट्रेन हादसा जरूर हो जाता है
सभी घायलों को जल्द से जल्द स्वास्थ्य होने की कामना करता हूं तथा मृतक यात्रियों के प्रति संवेदनाएं व्यक्त करता हूं 🙏#trainaccident #KarnatakExpress #pushpakExpress #jalgaon #Maharashtra… pic.twitter.com/HJuJ1aQ3GC
ಆಗಿದ್ದೇನು?: ಲಖನೌನಿಂದ ಮುಂಬೈಗೆ ಬರುತ್ತಿದ್ದ ಪುಷ್ಪಕ್ ಎಕ್ಸ್‌ಪ್ರೆಸ್‌ನ ಜನರಲ್ ಬೋಗಿ ಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿ, ಪ್ರಯಾಣಿಕರು ಚೈನ್ ಎಳೆದು ರೈಲು ನಿಲ್ಲಿಸಿದ್ದರು.
ಜನ ರೈಲಿನಿಂದ ಜಿಗಿದು ಪಕ್ಕದ ಹಳಿ (ಜೋಡಿ ಮಾರ್ಗದ ಇನ್ನೊಂದು ಹಳಿ) ಮೇಲೆ ಬಂದು ನಿಂತಿದ್ದರು. ಇನ್ನು ಕೆಲವರು ದೂರಕ್ಕೆ ಹೋಗಿ ನಿಂತಿದ್ದರು. ಇದೇ ಪಕ್ಕದ ಹಳಿ ಮೇಲೆ ಬೆಂಗಳೂರಿನಿಂದ ದಿಲ್ಲಿಗೆ ಹೋಗುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ಬಂದಿದೆ. ವೇಗದ ಕಾರಣವಾಗಿ ರೈಲು ನಿಯಂತ್ರಣಕ್ಕೆ ಸಿಗದೆ ಜನರ ಮೇಲೆ ಹರಿದಿದೆ. ಪರಿಣಾಮ ದುರ್ಘಟನೆ ನಡೆದಿದೆ.
ಮಧ್ಯ ರೈಲ್ವೆ ವಕ್ತಾರ ಸ್ವಪ್ರಿಲ್ ನಿಲಾ ಮಾತನಾಡಿ, ‘ಬ್ರೇಕ್ ಜಾಮ್ ಅಥವಾ ಹಾಟ್ ಆ್ಯಕ್ಸೆಲ್ ತಾಂತ್ರಿಕ ಕಾರಣದಿಂದ ಒಂದು ಕೋಚ್‌ನ ಗಾಲಿಗಳಲ್ಲಿ ಕಿಡಿಗಳು ಕಾಣಿಸಿಕೊಂಡಿವೆ.
ಇದರಿಂದ ಭೀತಿಗೊಳಗಾದ ಪ್ರಯಾಣಿಕರು ಬೆಂಕಿ ಹೊತ್ತಿಕೊಂಡಿದೆ ಎಂದು ಭಾವಿಸಿ ಚೈನು ಎಳೆದಿದ್ದಾರೆ. ಆಗ ಕೆಲವರು ರೈಲಿಂದ ಜಿಗಿದು ಪಕ್ಕ ದೆ ರೈಲು ಮಾರ್ಗದ ಮೇಲೆ ನಿಂತಿದ್ದಾರೆ. ಆಗ ಅದೇ ವೇಳೆ ಕರ್ನಾಟಕ ಎಕ್ಸ್‌ಪ್ರೆಸ್ ಧಾವಿಸಿ ಹರಿದಿದೆ.
ಚಾಲಕ ಬ್ರೇಕ್ ಹಾಕಲು ಯತ್ನಿಸಿದರೂ ಆಗಲಿಲ್ಲ. ಸ್ಥಳದಲ್ಲಿ ತಿರವಿದ್ದು, ಇದರಿಂದ ರೈಲನ್ನು ನಿಯಂತ್ರಣಕ್ಕೆ ತರಲು ಆಗಲಿಲ್ಲ ಎಂದಿದ್ದಾರೆ. ಸುರಕ್ಷತಾ ಆಯುಕ್ತ ತನಿಖೆ ನಡೆಸಲಿದ್ದಾರೆ.