ಬೆಂಗಳೂರು: ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್ ಅವರು ಇಂದು ಮಂಡಿಸಿದ ದಾಖಲೆಯ 8ನೇ ಬಜೆಟ್ (UnionBudget2025) ಕುರಿತು ದಕ್ಷಿಣ ಭಾರತದ ರಾಜ್ಯಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕೇಂದ್ರ ಸರ್ಕಾರ ಅನ್ಯಾಯವೆಸಗಿದೆ ಎಂದು ದೂರಿವೆ.
ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna ByreGowda) ಅವರು ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, ದುಡಿದು ತೆರಿಗೆ ಕಟ್ಟುವ ಕನ್ನಡಿಗರಿಗೆ ಮೋದಿ ಸರ್ಕಾರ ಅನ್ಯಾಯವಾಗುತ್ತಿದ್ದು, ಕನ್ನಡಿಗರು ಕಡಲೇಕಾಯಿ ತಿನ್ನಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರು ಟ್ಯಾಕ್ಸ್ ಕಟ್ಟಬೇಕು ಬಜೆಟಲ್ಲಿ ನಮಗೆ ಚೆಂಬು.. ಕರ್ನಾಟಕಕ್ಕೆ ಈ ರೀತಿಯ ಅನ್ಯಾಯ, ಕರುನಾಡಿನ ಜನಗಳಿಗೆ ಕೇಂದ್ರ ಬಿಜೆಪಿ (BJP) ಸರ್ಕಾರ ಮಾಡ್ತಾ ಇರುವ ದ್ರೋಹವಾಗಿದೆ.
ಕರ್ನಾಟಕಕ್ಕೆ (Karnataka) 11 ಸಾವಿರ 495 ಕೋಟಿ ಫೈನಾನ್ಸ್ ಕಮಿಷನ್ ಶಿಫಾರಸು ಮಾಡಿದಂತಹ ಅನುದಾನ ಕೊಡುವುದರ ಬಗ್ಗೆ ಕೇಂದ್ರ ಸರ್ಕಾರ ಚೆಕಾವನ್ನು ಎತ್ತಿಲ್ಲ.
ಕರ್ನಾಟಕದ ಅಪ್ಪರ್ ಭದ್ರಾ ಯೋಜನೆ, ನಮಗೆ ಜಲವೇ ಜೀವನದ ಆಧಾರ.. ಕುಡಿಯುವ ಯೋಜನೆಯಾದ ಅಪ್ಪರ್ ಭದ್ರಾ ಯೋಜನೆಗೆ 5300ಕೋಟಿ ಕೊಡಬೇಕು ಒಂದು ಪೈಸಾ ಕೂಡ ಇದರಲ್ಲಿ ಉಲ್ಲೇಖ ಇಲ್ಲವಾಗಿದೆ.
ಕರ್ನಾಟಕದಲ್ಲಿ ಹಿಂದುಳಿದರಿರುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಈ ಬಜೆಟ್ ನಲ್ಲಿ ಒಂದು ರೂ ನೀಡಲ್ಲ.
ಕಾರ್ನಾಟಕದಲ್ಲಿ ನೈಸರ್ಗಿಕ ಸವಾಲುಗಳನ್ನು ಎದುರಿಸುತ್ತಿರುವ ಮಲೆನಾಡು ಕರ್ನಾಟಕಕ್ಕೆ ಒಂದು ಪೈಸೆಕೂಡ ನೀಡಿಲ್ಲ.
ಬೆಂಗಳೂರು ಇಡೀ ದೇಶಕ್ಕೆ ಉದ್ಯೋಗ ಕೊಡ್ತಾ ಇದೆ.. ದೇಶಕ್ಕೆ ರಫ್ತಿನ ಮೂಲಕ ಬಹಳ ಆದಾಯವನ್ನು ತಂದು ಕೊಡುತ್ತಿದೆ. ಆದರೆ ಬೆಂಗಳೂರು ಅಭಿವೃದ್ಧಿಗೆ ಒಂದು ರೂ ನೀಡಿಲ್ಲ.
ಈ ಕೇಂದ್ರದ ಬಜೆಟ್ ಕರ್ನಾಟಕದ ಪಾಲಿಗೆ ಕರಾಳ ಅಧ್ಯಾಯ ಮತ್ತು ದ್ರೋಹದ ಸಂಕೇತವಾಗಿದೆ.
ಕರ್ನಾಟಕದ ಜನ ದುಡಿಬೇಕು, ಬೆವರು ಸುರಿಸಬೇಕು, ಬರೀ ಕೇಂದ್ರ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಬೇಕು. ಕೇಂದ್ರದವರಿಗೆ ದುಡ್ ಕೊಡಬೇಕಾಗಿ ಬಂದಾಗ ಯೂಪಿ, ಬಿಹಾರ ಕಾಣ್ತಾವೇ ಬಿಟ್ರೆ, ದುಡಿದು ತೆರಿಗೆ ಕಟ್ಟಿದ ಕನ್ನಡಿಗರು ಅವರ ಕಣ್ಣಿಗೆ ಕಾಣದಾಗಿದ್ದಾರೆ.
ಕರ್ನಾಟಕದ ಜನ ದುಡಿಯೋದಕ್ಕೆ ಸೀಮಿತವಾಗಿರುವ ಆಳುಗಳಾಗಿದ್ದೇವೆ. ನಮ್ಮ ದುಡಿಮೆಯ ಲಾಭವೆಲ್ಲ ಬೇರೆಯವರಿಗೆ ಸಿಕ್ತಾ ಇದೆ.. ನಮ್ಮ ದುಡಿಮೆಯಲ್ಲಿ ನಮ್ಮ ಪಾಲು ಕೂಡ ಕೊಡದೆ ಈ ಬಜೆಟ್ ಮೂಲಕ ಅನ್ಯಾಯ ಮಾಡಿರುವುದನ್ನು ಖಂಡಿಸಿದ್ದಾರೆ.