Daily story: Humble lamp

ಹರಿತಲೇಖನಿ ದಿನಕ್ಕೊಂದು: ವಿನಮ್ರ ಹಣತೆ

Daily story: ಬೆಳಕಿನ ವಿಚಾರದಲ್ಲಿನಾನೇ ಶ್ರೇಷ್ಠ, ನಾನೇ ಶ್ರೇಷ್ಠ’ ಅನ್ನುವ ತರ್ಕಗಳು ದಿನೇ ದಿನೇ ದೇವಲೋಕಕ್ಕೆ ಬರತೊಡಗಿದವು. ಸೂರ್ಯ, ಚಂದ್ರ, ನಕ್ಷತ್ರಗಳು ಪ್ರತಿನಿತ್ಯ ಇದೇ ವಿಷಯದ ಬಗ್ಗೆ ಸಂಬಂಧಿಸಿದವರ ಮೂಲಕ ತಮ್ಮನ್ನೇ ಶ್ರೇಷ್ಠರೆಂದು ಗುರುತಿಸಬೇಕು’ ಅನ್ನುವ ಬಲವಂತ ಹೇರತೊಡಗಿದವು.

ಯಾರನ್ನು ತಾನು ಶ್ರೇಷ್ಠನೆಂದು ಗುರುತಿಸಬೇಕೆಂದು ಬ್ರಹ್ಮನಿಗೆ ಗಲಿಬಿಲಿಯುಂಟಾಯಿತು. ಈ ವಿಚಾರದಲ್ಲಿಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿ ತುರ್ತು ಸಭೆ ಕರೆದನು.

ಸಭೆಗೆ ಇಂದ್ರಾದಿಗಳು ಸೇರಿದಂತೆ ಎಲ್ಲಾದೇವತೆಗಳು ಹಾಜರಿದ್ದರು. ಸೂರ್ಯ, ಚಂದ್ರ ಹೀಗೆ ಯಾರಾರ‍ಯರು ಸ್ಪರ್ಧೆಯಲ್ಲಿಇದ್ದರೋ ಅವರಿಗೆಲ್ಲಾಕರೆ ಹೊಯಿತು. ಎಲ್ಲರೂ ಬಂದು ಸೇರಿದಾಗ ಸಭೆ ಆರಂಭವಾಯಿತು.

ಭೂಮಿ ಕಡೆಯಿಂದ ಮಿಂಚುಹುಳ ಸ್ಪರ್ಧೆಗೆ ಹೋಗಿತ್ತು. ಭೂಮಿಯಲ್ಲಿಬೆಳಕಿಗೆ ಪ್ರತಿನಿಧಿ ನೀನು ಒಬ್ಬನೇನಾ, ಮತ್ಯಾರು ಇಲ್ಲವೇ ಹಣತೆ ಯಾಕೆ ಬಂದಿಲ್ಲಅಂತ ಸಭೆಯಲ್ಲಿಕೇಳಲಾಯಿತು. ಆಗ ಮಿಂಚುಹುಳವು ಹಣತೆಯನ್ನು ನಾನು ಕರೆದೆ. ಆದರೆ ಹಣತೆ ನಾನು ಸ್ಪರ್ಧಿಸಲು ಸೂಕ್ತವಾದವನೊ, ಇಲ್ಲವೊ ಗೊತ್ತಿಲ್ಲ. ನೀವು ಹೋಗಿ ಬನ್ನಿ’ ಅಂತ ಹೇಳಿ ಕಳಿಸಿತು ಎಂದಿತು.

ಬ್ರಹ್ಮನಿಗೆ ಈ ಸಭೆಯಲ್ಲಿ ಹಣತೆ ಇರುವುದು ಸೂಕ್ತವೆನ್ನಿಸಿ ತುರ್ತಾಗಿ ಅದನ್ನು ಕರೆಯಿಸಿತು. ಸಭೆಯಲ್ಲಿಮೊದಲು ವಾದಿಸುವ ಮತ್ತು ಹಕ್ಕು ಮಂಡಿಸುವ ಅಧಿಕಾರವನ್ನು ಸೂರ್ಯನಿಗೆ ನೀಡಲಾಯಿತು.

ಸೂರ್ಯ, ನನಗೆ ಪ್ರತಿಸ್ಪರ್ಧಿಯೇ ಇಲ್ಲ. ಈ ಸಭೆಯ ಅವಶ್ಯಕತೆಯೂ ಇರಲಿಲ್ಲ. ನಾನು ಇಲ್ಲದ ಜಗತ್ತೇ ಇಲ್ಲ. ಜೀವನ ನಡೆಯುವುದು ನನ್ನ ಬೆಳಕಿನಿಂದನೇ’ ಎಂದು ಹೇಳಿ ಅಹಂನಿಂದ ಎಲ್ಲರ ಕಡೆ ನೋಡಿತು.

ಆನಂತರ ಚಂದ್ರ, ಈ ಸೂರ್ಯ ಎಲ್ಲಾಕಾಲದಲ್ಲೂಇರವವನಲ್ಲ. ಹಗಲು ಮಾತ್ರ ಅವನ ಕೆಲಸ. ರಾತ್ರಿ ನಾನು ಇಲ್ಲದೆ ಬದುಕಿಲ್ಲ. ಕವಿಗಳಿಗೆ, ಪ್ರೇಮಿಗಳಿಗೆ ನನ್ನಷ್ಟು ಸಹಾಯ ಮಾಡಿದವರು ಯಾರೂ ಇಲ್ಲ. ನಾನು ಸೂರ್ಯನಷ್ಟು ಪ್ರಖರವಾದ ಬಿಸಿಲು ನೀಡಿ ಜನರಿಗೆ ತೊಂದರೆ ಕೊಡುವುದಿಲ್ಲ’ ಎಂದು ವಾದಿಸಿತು.

ನಕ್ಷತ್ರಗಳು ಸೂರ್ಯನ ಬೆಳಕು ಹಗಲು ಮಾತ್ರ ಮತ್ತು ಚಂದ್ರ ತಿಂಗಳಲ್ಲಿಕೆಲವು ದಿನ ಮಾತ್ರ. ಆದರೆ ನಾವು ರಾತ್ರಿಯಲ್ಲಿಯಾವತ್ತೂ ಇರ್ತೀವಿ. ನಮ್ಮ ಬೆಳಕು ಅವರಿಗೆ ಚಿಕ್ಕದಿರಬಹುದು. ಆದರೆ ಅಷ್ಟರಲ್ಲೇ ಅವರಿಗೆ ಹಾದಿ ತೋರಿಸುತ್ತೀವಿ. ಮಕ್ಕಳಿಗೂ ನಮ್ಮನ್ನು ಕಂಡರೆ ಅಕ್ಕರೆ’ ಅಂತ ಹೇಳಿದವು.

ಮಿಂಚುಹುಳ ಕೂಡ ನಾನು ಸಣ್ಣವನಾದರೂ ಯಾರ ಸಹಾಯವಿಲ್ಲದೆ ಇಡೀ ಕತ್ತಲೆಯಲ್ಲಿಒಂದು ಬೆಳಕಿನ ಸೊಬಗು ಮೂಡಿಸುವೆ ಎಂದು ಹೇಳಿತು.

ತನ್ನ ವಾದ ಮಂಡಿಸಲು ಮುಂದಾದ ಹಣತೆ ನನಗೆ ವಾದ ಮಂಡಿಸಲು ಆಸೆಯೇನೂ ಇಲ್ಲ. ನಾನು ಶ್ರೇಷ್ಠನೆಂದೂ ಭಾವಿಸಿಲ್ಲ. ಕನಿಷ್ಠನೆಂದೂ ಭಾವಿಸಿಲ್ಲ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ತನ್ನನ್ನು ತಾನು ಸುಟ್ಟುಕೊಂಡು ಬೆಳಕು ನೀಡುವುದರಲ್ಲಿನನಗೆ ಖುಷಿ ಇದೆ.

ಅದು ಕೇವಲ ಸ್ವಲ್ಪವೇ ಬೆಳಕಾಗಲಿ, ನನ್ನನ್ನು ನಂಬಿ ಹಚ್ಚಿದವರಿಗೆ ನಾನು ಮೋಸ ಮಾಡಲ್ಲ. ಅವರು ಬಯಸುವವರೆಗೂ ಬೆಳಕು ಕೊಡುತ್ತೇನೆ. ಅವರು ಬೇಡವೆಂದರೆ ನನ್ನ ಬೆಳಗುವಿಕೆ ನಿಲ್ಲಿಸುತ್ತೇನೆ. ಸೂರ್ಯನಾಗಲಿ, ಚಂದ್ರನಾಗಲಿ, ನಕ್ಷತ್ರಗಳಾಗಲಿ ಬೇಡವೆಂದರೆ ನಿಲ್ಲಿಸಿಯಾರೆ? ಜನರಿಗೆ ಬೇಕೋ ಬೇಡ್ವೊ ಗೊತ್ತಿಲ್ಲದೆ ತಮ್ಮ ಪಾಡಿಗೆ ತಾವು ಉರಿಯುತ್ತಲೇ ಇರುತ್ತಾರೆ.

ನಾನು ಇಲ್ಲದೆ ಹೋಗಿದ್ದರೆ ಮನುಷ್ಯರ ಜಗತ್ತು ಹೇಗಿರುತ್ತಿತ್ತು ಎಂದು ಊಹಿಸಿ. ಆದರೆ ನನಗೆ ಅದರಲ್ಲಿಹೆಗ್ಗಳಿಕೆ ಇಲ್ಲ. ಅದು ನನ್ನ ಕೆಲಸ, ನನ್ನ ಪಾಡಿಗೆ ನಾನು ಉರಿದು ಬೆಳಕು ಕೊಡುವುದು ಕರ್ತವ್ಯ. ಕರ್ತವ್ಯದಲ್ಲಿಶ್ರೇಷ್ಠತೆಯ ಲೆಕ್ಕ ಹಾಕುವುದು ನನಗೆ ಸರಿ ಬರುವುದಿಲ್ಲ. ಅದಕ್ಕಾಗಿ ನಾನು ಮೊದಲೇ ಸಭೆಗೆ ಬಂದಿರಲಿಲ್ಲ. ಕ್ಷಮಿಸಿ’ ಎಂದು ಕೈ ಮುಗಿಯಿತು.

ಹಣತೆಯ ಮಾತು ಮುಗಿಯುತ್ತಲೇ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಆಗ ಬ್ರಹ್ಮ, ಯಾರು ಶ್ರೇಷ್ಠರು ಎಂಬುದನ್ನು ನಾನು ತೀರ್ಮಾನಿಸುವ ಅಗತ್ಯ ಇಲ್ಲ. ಇಡೀ ಸಭೆಯೇ ಅದನ್ನು ಗುರುತಿಸಿದೆ.

ಶ್ರೇಷ್ಠತೆ ಬರುವುದು ಬರೀ ಬಲದಿಂದಲ್ಲ, ತನ್ನ ಶಕ್ತಿಯಿಂದಲ್ಲ, ಅದರ ಜೊತೆಗೆ ನಡವಳಿಕೆಯಿಂದಲೂ. ಸಣ್ಣ ಬೆಳಕು ಕೊಟ್ಟರೂ ಹಣತೆಯ ವ್ಯಕ್ತಿತ್ವ ಗುರುತರವಾದದ್ದು’ ಎಂದ. ಎಲ್ಲರೂ ಹಣತೆಗೆ ಜಯಕಾರ ಹಾಕಿದರು. ಸೂರ್ಯ, ಚಂದ್ರ, ನಕ್ಷತ್ರಗಳಿಗೆ ತಮ್ಮ ತಪ್ಪಿನ ಅರಿವಾಯಿತು.

ಕೃಪೆ: ಸದಾಶಿವ್‌ ಸೊರಟೂರು

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!