ಬೆಂ.ಗ್ರಾ ಜಿಲ್ಲೆ: ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ (DDU-GKY)ಯಡಿ ಏಪ್ರಿಲ್ 05 ರಂದು ಬೆಂಗಳೂರು ನಗರದ ‘ರಾಜರಾಜೇಶ್ವರಿ ತಾಂತ್ರಿಕ ಮಹಾವಿದ್ಯಾಲಯ’ ನಂ.14, ರಾಮೋಹಳ್ಳಿ ಕ್ರಾಸ್, ಮೈಸೂರು ರಸ್ತೆ, ಕುಂಬಳಗೋಡು. ಬೆಂಗಳೂರು ದಕ್ಷಿಣ ತಾಲ್ಲೂಕು ಇಲ್ಲಿ ಬೆಳಿಗ್ಗೆ 9:30 ಗಂಟೆಯಿಂದ ಸಂಜೆ:4.30 ಗಂಟೆಯವರೆಗೆ “ಉದ್ಯೋಗಮೇಳ-2025” (Job fair) ನ್ನು ಆಯೋಜಿಸಲಾಗಿದೆ.
ಎಸ್.ಎಸ್.ಎಲ್. ಸಿ, ಪಿಯುಸಿ, ಐ.ಟಿ.ಐ, ಡಿಪ್ಲೊಮಾ ಬಿ.ಇ/ ಬಿ.ಸಿ.ಎ/ ಬಿ.ಟೆಕ್/ ಬಿ.ಕಾಂ/ಬಿಬಿಎ ಮತ್ತು ಪಿಜಿ ವಿದ್ಯಾರ್ಹತೆ ಹೊಂದಿರುವ 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಉದ್ಯೋಗಾಕಾಂಕ್ಷಿಗಳು ನೋಂದಣಿಗಾಗಿ https://docs.google.com/forms/d/e/1FAIpQLSc5zbOVT9t9xIQQ-ka04-wGOCM2y2hI0QbAEmY3jPe9L199mg/viewform ಲಿಂಕ್ ನಲ್ಲಿ ಹಾಗೂ ಉದ್ಯೋಗಾದಾತರ ನೋಂದಣಿಗಾಗಿ:https://docs.google.com/forms/d/e/1FAIpQLSd9kHh6m5b5dbvB01g7ux2lsgplrpzq50lqNSF CB-yA2K-Q/viewform ಲಿಂಕ್ ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9964901444, 9964902444 ಗೆ ಸಂಪರ್ಕಿಸಬಹುದಾಗಿದೆ.