ಚೆನೈ: ಬಸ್ ಚಾಲನೆ ಮಾಡುತ್ತಿದ್ದ ವೇಳೆ ಚಾಲಕನಿಗೆ ಏಕಾಏಕಿ ಹೃದಯಾಘಾತ (Heart attack) ಸಂಭವಿಸಿ, ಪ್ರಜ್ಞೆ ತಪ್ಪಿ ಬಿದ್ದಿದ್ದು, ನಿರ್ವಾಹನ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮಿಳುನಾಡಿನ ಪಳನಿ ಬಳಿಯ ಕಂಕಂಪಟ್ಟಿಯಲ್ಲಿ ಪುದುಕೊಟ್ಟೈಗೆ ಹೋಗುತ್ತಿದ್ದಾಗ ಖಾಸಗಿ ಬಸ್ ಚಾಲಕ ಪ್ರಭು ಅವರಿಗೆ ಏಕಾಏಕಿ ಉಂಟಾದ ಹೃದಯಾಘಾತದಿಂದ ಬಸ್ ಚಾಲನೇ ವೇಳೆಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ಕೂಡಲೇ ಕಂಡಕ್ಟರ್ ಬ್ರೇಕ್ ಒತ್ತಿ ಬಸ್ ನಿಲ್ಲಿಸಿದರು, ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತ ತಪ್ಪಿದೆ.
ಬಳಿಕ ಪ್ರಯಾಣಿಕರು ಚಾಲಕನನ್ನು ಉಪಚರಿಸಿದರಾದರು, ಚಾಲಕ ಪ್ರಭು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಇಡೀ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಇನ್ನೂ ಈ ವಿಡಿಯೋ ಕುರಿತು ಅನೇಕ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದು, ಕೋವಿಡ್ ವ್ಯಾಕ್ಸಿನ್ ಕಾರಣದಿಂದಲೇ ಯುವ ಸಮುದಾಯ ಹೃದಯಾಘಾತದಿಂದ ಆಕಾಲಿವಾಗಿ ಸಾವನಪ್ಪುತ್ತಿದ್ದಾರೆಂದು ಆರೋಪಿಸಿದ್ದಾರೆ.