Reason

ಹರಿತಲೇಖನಿ ದಿನಕ್ಕೊಂದು ಕಥೆ: ಕಾರಣ..!

Reason: ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಹೊರಟು ಎಂಟೂವರೆಗೆ ಆ ಶಾಲೆಯ ಮುಂದೆ ಹಾದು ಹೋಗುವಾಗ ಏನೋ ಗುಂಪು ಸೇರಿದ್ದು ಕಂಡು ಕುತೂಹಲದಿಂದ ಅತ್ತ ನಡೆದೆ. ನೋಡಿದರೆ, ಅಯ್ಯೋ..! ಆ ಮುದಿ ತಾತ ನೆಲಕ್ಕೊರಗಿದ್ದಾರೆ. ಕೆಲವೇ ನಿಮಿಷಗಳಾಗಿರಬಹುದು.

ಕಳೆದೆರೆಡು ದಶಕಗಳಿಂದ, ಈ ತಾತ, ದಿನಾ ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಸರಿಯಾಗಿ ಬಂದು, ಆ ಹಳೆಯ ಶಾಲೆಯ ಆವರಣವನ್ನೆಲ್ಲ ಶುಚಿಗೊಳಿಸಿ ಎದುರಿನ ಕಟ್ಟೆಯಲ್ಲಿ ಒಬ್ಬರೇ ಸುಮ್ಮನೇ ಕುಳಿತಿರುತ್ತಿದ್ದರು. ಸಂಜೆ ಆರರ ನಂತರ ಎದ್ದು ಮನೆ ಕಡೆ ಹೊರಡುತ್ತಿದ್ದರು.

ಶಾಲೆಗೆ ಬರುವ ಮಕ್ಕಳನ್ನೆಲ್ಲಾ ಮಾತಾಡಿಸಿ, ಊಟದ ಸಮಯದಲ್ಲಿ ಆ ಮಕ್ಕಳಿಗೆ ಅದೂ ಇದೂ ಸಹಾಯ ಮಾಡಿ, ಚಾಕೋಲೇಟ್, ಐಸ್ಕ್ರೀಂ ಎಲ್ಲ ಕೊಡಿಸುವುದರ ಜೊತೆಗೆ ತಮ್ಮ ಬುತ್ತಿಯನ್ನು ಕೂಡ ಅವರೊಂದಿಗೆ ಹಂಚಿಕೊಂಡು ಇಲ್ಲೇ ಉಣ್ಣುತ್ತಿದ್ದರು.

ಆಟದ ವೇಳೆಯಲ್ಲಂತೂ ಅವರೂ ಮಕ್ಕಳೊಂದಿಗೆ ಕೂಡಿ ಆಡುತ್ತಿದ್ದರು ಎಂದು ಆ ಶಾಲೆಯ ನನ್ನ ಸ್ನೇಹಿತ ಮೇಷ್ಟ್ರು ಹೇಳುತ್ತಿದ್ದರು. ಈಗಂತೂ ಕರೋನಾ ಕಾರಣದಿಂದ ಶಾಲೆ ತೆರೆಯದಿದ್ದರೂ ಸಹ ಇದೇ ಪ್ರವೃತ್ತಿಯನ್ನು ಕಂಡು, ಕುತೂಹಲದಿಂದ ನಾನೊಮ್ಮೆ ಅವರನ್ನೇ ಕೇಳಿದಾಗ ಒಲ್ಲದ ಮನಸ್ಸಿನಿಂದ ಹೇಳಿದ್ದರು.

“ನಿವೃತ್ತ ನೌಕರ ನಾನು. ಇಲ್ಲೇ ಶಾಲೆ ಹತ್ತಿರದಲ್ಲೇ ಕೆಲವು ದಶಕಗಳಿಂದ ಚಿಕ್ಕ ಸ್ವಂತ ಮನೆಯಲ್ಲಿದ್ದೇನೆ. ಬಾಲ್ಯದಲ್ಲಿ ನನ್ನ ಮಕ್ಕಳಿಬ್ಬರೂ ಇದೇ ಶಾಲೆಯಲ್ಲಿ 10ರವರೆಗೆ ಓದುವಾಗ ಆ ಇಬ್ಬರು ಮಕ್ಕಳನ್ನೂ ದಿನಾ ಸೈಕಲ್ನಲ್ಲಿ ಕೂರಿಸಿ ಕರೆದು ಕೊಂಡು ಬಂದು ಶಾಲೆ ಬಿಡುವಾಗ ಪುನಃ ಕರೆದುಕೊಂಡು ಹೋಗುತ್ತಿದ್ದೆ.

ಆ ದಿನಗಳ ಖುಷಿಯಂತೂ ಮರೆಯೋ ಹಾಗಿಲ್ಲ..! ಆವಾಗೆಲ್ಲಾ, ಶಾಲೆ ಬಿಡುವ ಹೊತ್ತಿಗೆ ಇದೇ ಕಟ್ಟೆಯ ಮೇಲೆ ಕುಳಿತು ಕಾಯುತ್ತಿದ್ದೆ. ಬೆಳೆದು ಹೆಚ್ಚಿನ ಓದಿಗೆ ಶಹರಕ್ಕೆ ಹೋಗ ತೊಡಗಿದ ಮೇಲೆ ಅವರ ಒಡನಾಟ ಸ್ವಲ್ಪ ಸ್ವಲ್ಪವೇ ಕಡಿಮೆಯಾಗಿ, ವಿದೇಶಕ್ಕೆ ಹೋದ ಮೇಲಂತೂ ನಿಂತೇ ಹೋದಂತಾಗಿದೆ.

ಮಕ್ಕಳಿಬ್ಬರೂ ಮಕ್ಕಳೊಂದಿಗೆ ವಿದೇಶದಲ್ಲೇ ನೆಲೆಸಿದ್ದಾರೆ. ಯಾವಾಗಲೋ ಒಮ್ಮೆ ಮನಸ್ಸು ಬಂದರೆ ಮಾತಾಡ್ತಾರೆ ಅಷ್ಟೇ. ನನ್ನವಳೂ ಕೂಡ ಗತಿಸಿ ಕೆಲವು ವರ್ಷಗಳಾಗಿ, ಅವಳಿಚ್ಛೆಯಂತೆ ಕಟ್ಟಿಸಿದ ಮನೆಯಲ್ಲೇ ಇರುಳೆಲ್ಲ ಅವಳ ನೆನಪಿನಲ್ಲೇ ಕಳೆದರೂ.

ಹಗಲು ಸವೆಯಲು, ಬಾಲ್ಯದಲ್ಲಿ ಮಕ್ಕಳು ಆಡಿ ಬೆಳೆದ ಈ ಶಾಲೆಯನ್ನಾದರೂ ನೋಡುತ್ತ ಕುಳಿತಿದ್ದರೆ, ಸಮಯ ಹೋದೀತೆಂದು ದಿನಾ ಬಂದು ಕಳೆಯುತ್ತೇನೆ! ಆಡುವ ಮಕ್ಕಳಲ್ಲಿ ದೂರದಲ್ಲಿರುವ ನನ್ನ ಮಕ್ಕಳು, ಮೊಮ್ಮಕ್ಕಳನ್ನು ಅರಸುತ್ತ, ಕಳೆದ ದಿನಗಳ ನೆನೆದು ಆಯಸ್ಸು ಕಳೆಯುತ್ತಿದ್ದೇನೆ!.

ನನ್ನವಳ, ನನ್ನ ಮಕ್ಕಳ, ಮೊಮ್ಮಕ್ಕಳ ಮಧುರ ನೆನಪು ತರುವ ಈ ಹಳೆಯ ಶಾಲೆ, ಯಾವುದೇ ದೇವಾಲಯಕ್ಕಿಂತ ಪೂಜ್ಯವೆಂದು ಭಾವಿಸಿ, ಶುಚಿಗೊಳಿಸಿ, ಇಲ್ಲೇ ಸಮಯ ಕಳೆಯುತ್ತಿದ್ದೇನೆ.! ಬರುವ ಪಿಂಚಣಿಯಿಂದ ಅಲ್ಪ ಸ್ವಲ್ಪ ಶಾಲೆಯ ಅಭಿವೃದ್ಧಿಗೆ ವಿನಿಯೋಗಿಸುತ್ತೇನೆ!

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಅವರು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವನ್ನು ಭಾರತವು ಕೊನೆಗೊಳಿಸಬಹುದು ಎಂದು ಶುಕ್ರವಾರ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೆಗಲಿಗೆ ಜವಾಬ್ದಾರಿ ಹೊರೆಸಿದ್ದಾರೆ.

[ccc_my_favorite_select_button post_id="120350"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಯುಗಾದಿ ಹಬ್ಬದ ದಿನ ಜೂಜಾಟದಲ್ಲಿ ತೊಡಗಿದ್ದವರ ಬಂಧಿಸಿದ್ದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದು, ಬಂಧಿತರಲ್ಲಿ ಓರ್ವ ಸಾವನಪ್ಪಿರುವ ಕಾರಣ, ಲಾಕಪ್ ಡೆತ್ (lockup death) ಆರೋಪ ಕೇಳಿಬಂದಿದೆ.

[ccc_my_favorite_select_button post_id="120325"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ಬೆಳ್ಳಂಬೆಳಗ್ಗೆ ಕ್ಯಾಂಟರ್ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ (Accident), ಬೈಕ್ ಸವಾರ ಗಾಯಗೊಂಡಿರುವ ಘಟನೆ ಚನ್ನಾದೇವಿ ಅಗ್ರಹಾರದ ಬಳಿ ಇಂದು ಮುಂಜಾನೆ 5,30 ರ ವೇಳೆಗೆ ಸಂಭವಿಸಿದೆ.

[ccc_my_favorite_select_button post_id="120173"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!