ನಾರ್ವೆ: ಚೆಸ್ ವಿಶ್ವ ಚಾಂಪಿಯನ್ ಡಿ.ಗುಕೇಶ್ (D.Gukesh) ಅವರು ನಾರ್ವೆ ಚೆಸ್ 2025 ಪಂದ್ಯಾವಳಿಯಲ್ಲಿ ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು 6ನೇ ಸುತ್ತಿನಲ್ಲಿ ಸೋಲುಣಿಸಿದ್ದಾರೆ.
19 ವರ್ಷದ ಭಾರತೀಯ ಪ್ರತಿಭೆಯ ಐತಿಹಾಸಿಕ ಗೆಲುವಿಗೆ ಇಡೀ ದೇಶ ಸಂಭ್ರಮಿಸುತ್ತಿದೆ.
ಗುಕೇಶ್ ಎದುರು ನಾರ್ವೇ ಚಾಂಪಿಯನ್ ಶಿಪ್ ಪಂದ್ಯವನ್ನು ಸೋತ ಬಳಿಕ ಮ್ಯಾಗ್ನಸ್ ಕಾರ್ಲ್ಸನ್ ಮೇಜು ಗುದ್ದಿ ತಮ್ಮ ಸಿಟ್ಟು ಪ್ರದರ್ಶಿಸಿದ್ದಾರೆ.
ಆರಂಭದಲ್ಲಿ ಬಹುಪಾಲು ನಿಯಂತ್ರಣ ಕಾಯ್ದುಕೊಂಡಿದ್ದ ಮ್ಯಾಗ್ನಸ್ ಬಳಿಕ ಅಂತಿಮ ಹಂತದಲ್ಲಿ ಕೆಲ ತಪ್ಪುಗಳನ್ನು ಮಾಡಿದರು. ಇದರಿಂದ 19 ವರ್ಷದ ಭಾರತೀಯ ಗ್ಯಾಂಡ್ ಮಾಸ್ಟರ್ ಗುಕೇಶ್ ಅವರಿಗೆ ಗೆಲುವು ಸುಲಭವಾಯಿತು.
ತನ್ನ ಸೋಲು ಅರಿವಾಗುತ್ತಿದ್ದಂತೆಯೇ ಮ್ಯಾಗ್ನಸ್ ತಾಳ್ಮೆಕಳೆದುಕೊಂಡರು. ಟೇಬಲ್ ಗೆ ಗುದ್ದಿದ್ದಲ್ಲದೇ, ಓಹ್ ಮೈ ಗಾಡ್ ಎಂದು ಕೂಗಿದ್ದಾರೆ.
ಇದರಿಂದ ಆಘಾತಗೊಂಡ ಗುಕೇಶ್ ಟೇಬಲ್ ನಿಂದ ದೂರ ಸರಿದು ನಿಂತರು. ಆಗ ಅವಸರದಿಂದ ನಡೆದು ಬಂದ ಮ್ಯಾಗ್ನಸ್ ಗುಕೇಶ್ ಅವರ ಬೆನ್ನು ತಟ್ಟಿ ಪ್ರಶಂಸಿಸಿ ಅಲ್ಲಿಂದ ತೆರಳಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.