ಬೆಂಗಳೂರು: RCB ಹಾಗೂ PK ನಡುವೆ ಐಪಿಎಲ್ 2025 ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರಶಸ್ತಿಗೆ ಎರಡು ತಂಡಗಳ ನಡುವೆ ಜಿದ್ದಾಜಿದ್ದಿ ನಡೆಯಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.
18 ವರ್ಷಗಳಿಂದ ಕಪ್ ಗೆಲ್ಲದ ಆರ್‌ಸಿಬಿ ಈ ಸಲ ಟ್ರೋಫಿಗೆ ಮುತ್ತಿಡಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಅದರಂತೆಯೇ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವರು ಆದ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಕೂಡ ಆರ್‌ಸಿಬಿ (RCB) ತಂಡಕ್ಕೆ ಶುಭ ಹಾರೈಸಿದ್ದಾರೆ.
ಮಾಧ್ಯಮಗಳ ಜತೆ ಮಾತಾಡಿದ ಅವರು, ಹಲವಾರು ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್‌ಗೆ ಬಂದಿದೆ. ಎಲ್ಲರಲ್ಲೂ ದೊಡ್ಡಮಟ್ಟದ ನಿರೀಕ್ಷೆ ಇದ್ದು ಫೈನಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ಪ್ರಶಸ್ತಿ ಪಡೆಯಲಿ.
ತಂಡದಲ್ಲಿ ಎಲ್ಲರು ಅತ್ಯುತ್ತಮ ಪ್ರದರ್ಶನ ನೀಡಲಿ. ಫೈನಲ್‌ನಲ್ಲಿ ಕಪ್ ಪಡೆಯುವಂತಹ ಎಲ್ಲ ಆಟಗಾರರ ಶ್ರಮದಿಂದ ಯಶಸ್ಸು ಕಾಣಲಿ ಎಂದು ನಾನು ಕೂಡ ಶುಭ ಹಾರೈಸುತ್ತೇನೆ ಎಂದು ಹೇಳಿದ್ದಾರೆ.