ಬೆಂಗಳೂರು: ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ ಯಂತೆಯೇ 18ನೇ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.
ಈ ಮೂಲಕ ಕಳೆದ 18 ವರ್ಷಗಳಿಂದ ‘ ಈ ಸಲ ಕಪ್ ನಮ್ದೇ’ ಎಂದು ಗುನುಗುನಿಸುತ್ತಿದ್ದ ಅಭಿಮಾನಿಗಳ ಕನಸನ್ನು ‘ಈ ಸಲ ಕಪ್ ನಮ್ದು‘ ಎನ್ನುವಂತೆ ಸಾಕಾರ ಗೊಳಿಸಿದೆ.
This isn’t just celebrations, it’s tears, hugs and screams.
— Royal Challengers Bengaluru (@RCBTweets) June 3, 2025
This is what belief finally looks like. ❤️
pic.twitter.com/5Fh01Wep0U
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ರನ್ ಗಳ ಅಂತರದಲ್ಲಿ ಮಣಿಸಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
YES SIR. 😭 https://t.co/XO6RruJiXy
— Royal Challengers Bengaluru (@RCBTweets) June 3, 2025
ಕಪ್ ಕನಸು ನನಸಾಗುತ್ತಿದ್ದಂತೆ ವಿರಾಟ್ ಕೊಹ್ಲಿ ಸಂಭ್ರಮ ತಾಳಲಾರದೆ ಕಣ್ಣೀರಿಟ್ಟರು. ಈ ಗೆಲುವಿಗೆ ಎಬಿ ಡಿವಿಲಯರ್ಸ್, ಕ್ರಿಸ್‌ಗೇಲ್ ಸಾಕ್ಷಿಯಾದರು.
This wasn’t luck. This was loyalty paying rent after 18 years. 🤌
— Royal Challengers Bengaluru (@RCBTweets) June 3, 2025
pic.twitter.com/kOfZ7aX7RF
ಗೆಲುವು ಖಚಿತವಾಗುತ್ತಿದ್ದಂತೆ RCB ಅಭಿಮಾನಿಗಳ ತಾಳ್ಮೆಯ ಕಟ್ಟೆ ಹೊಡೆದು ಹೋಗಿದೆ. ನಡು ರಾತ್ರಿಯೇ ರಸ್ತೆಗಿಳಿದು ಪಟಾಹಿ ಕೊಡೆದು, ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿ ಸಂಭಮಾಚರಣೆ ಮಾಡಿದ್ದಾರೆ.
ಈ ಗೆಲುವಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ತಮಿಳುನಾಡಿನ ಎಲ್‌ಕೆ ಸ್ಟಾಲಿನ್, ತೆಲುಗು ಚಿತ್ರ ನಟ ಅಲ್ಲು ಅರವಿಂದ್ ಸೇರಿದಂತೆ ಅನೇಕರು ಶುಭಕೋರಿ ಟ್ವಿಟ್ ಮಾಡಿ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ
Rrrrrrrrr…. Cccccccc…. Bbbbbbbbb….
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಟ್ವಿಟ್ ಮಾಡಿದ್ದಾರೆ.
ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ.
ಆರ್‌ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್‌ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಇದು ಇತಿಹಾಸ ಸೃಷ್ಟಿಸಿದ ದಿನ..
ಕೊನೆಯದಾಗಿ, ಈ ಸಲ ಕಪ್ ನಮ್ದೆ ಎಂದಿದ್ದಾರೆ..
ಡಿಸಿಎಂ ಡಿಕೆ ಶಿವಕುಮಾರ್
ಟಿ-20 ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮಣಿಸಿ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
18 ವರ್ಷಗಳ ಕನಸು ನನಸು ಮಾಡಿದ ಆರ್ ಸಿ ಬಿ ತಂಡಕ್ಕೆ ಹೃತ್ಪೂರ್ವಕ ಶುಭಾಶಯ ಹೇಳಿರುವ ಡಿ ಕೆ ಶಿವಕುಮಾರ್ ಅವರು, “ಈ ಸಲ ಕಪ್ ನಮ್ದೇ..” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಟಿವಿ ಪರದೆ ಮೂಲಕ ಪಂದ್ಯ ವೀಕ್ಷಿಸಿದ ಡಿಸಿಎಂ ಅವರು ಆರ್ ಸಿ ಬಿ ಗೆಲ್ಲುತ್ತಿದ್ದಂತೆ ಸಂಭ್ರಮ ಆಚರಿಸಿದರು.
ಈ ಒಂದು ಶುಭ ದಿನ, ಶುಭ ಘಳಿಗೆಗಾಗಿ ಇಡೀ ಕರ್ನಾಟಕ ಹಂಬಲಿಸಿತ್ತು. ಇದನ್ನು ಸಾಕಾರಗೊಳಿಸಿದ ರಜತ್ ಪಟೀದಾರ್ ಹಾಗೂ ವಿರಾಟ್ ಕೊಹ್ಲಿ ಅವರ ತಂಡಕ್ಕೆ ಮಾಧ್ಯಮ ಹೇಳಿಕೆಯಲ್ಲಿ ಶುಭ ಹಾರೈಸಿದ್ದಾರೆ.
ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ
ಐಪಿಎಲ್ 2025 ಟೂರ್ನಿಯಲ್ಲಿ ರೋಚಕ ಗೆಲುವು ಸಾಧಿಸಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಅಭಿನಂದಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಸಲ ಕಪ್ ನಮ್ದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ತಂಡ ಸ್ಪೂರ್ತಿಯಿಂದ ಆಡಿದ ಪಟಿದಾರ್ ಪಡೆಯನ್ನು ಹಾಗೂ ವಿಶೇಷವಾಗಿ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಐತಿಹಾಸಿಕ ದ್ವಿಗಿಜಯ ಸಾಧಿಸಿದ ಆರ್ ಸಿಬಿ ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರೂವರೆ ಕೋಟಿ ಕನ್ನಡಿಗರ ಕನಸನ್ನು ನನಸು ಮಾಡಿದ ಪಟಿದಾರ್ ಪಡೆಯ ಶ್ರೇಷ್ಠ ಕ್ರಿಕೆಟ್ ಕನ್ನಡಿಗರು ಮಾತ್ರವಲ್ಲದೆ ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿದೆ.
ಕರ್ನಾಟಕದ ಕ್ರಿಕೆಟ್ ಇತಿಹಾಸದಲ್ಲಿಯೇ ಈ ಗೆಲುವು ಮಹೋನ್ನತ ಮೈಲುಗಲ್ಲು ಎಂಬುದು ನನ್ನ ಅಭಿಪ್ರಾಯ. ಮುಖ್ಯವಾಗಿ 18 ವರ್ಷಗಳಷ್ಟು ಸುದೀರ್ಘ ಕಾಲ ತಂಡ ಶ್ರೇಯಸ್ಸಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಅಭಿನಂದಿಸುತ್ತೇನೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
“ಈ ಸಲ ಕಪ್ ನಮ್ಮದೇ” 💛♥️
ಅಂತಿಮ #IPL ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮಣಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಪ್ರಚಂಡ ಗೆಲುವಿನ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ #RCB ತಂಡಕ್ಕೆ ಅಭಿನಂದನೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶುಭಕೋರಿದ್ದಾರೆ.
18 ವರ್ಷಗಳ ಕನ್ನಡಿಗರ ಕಾಯುವಿಕೆ, ದೇಶದ ಕ್ರಿಕೆಟ್ ಅಭಿಮಾನಿಗಳ ಹಾರೈಕೆಗೆ ತಕ್ಕ ಪ್ರತಿಫಲ ದೊರೆತಿದೆ. ತಮ್ಮ ನಿರಂತರ ಪರಿಶ್ರಮ ಹಾಗೂ ವಿರೋಚಿತ ಆಟದೊಂದಿಗೆ ಕನ್ನಡಿಗರ ಮನೆ ಮನ ಗೆದ್ದ ಪ್ರತಿಯೊಬ್ಬ ಆರ್.ಸಿ.ಬಿ ಆಟಗಾರರಿಗೂ ಅನಂತ ಅಭಿನಂದನೆಗಳು.
ಈಗ ವಿಶ್ವ ಕ್ರಿಕೆಟ್ ಪ್ರೇಮಿಗಳೂ ಸಂಭ್ರಮಿಸಿ ಹೇಳುತ್ತಿದ್ದಾರೆ ‘ಕಪ್ ನಮ್ಮದೇ’ ಎಂದು ಟ್ವಿಟ್ ಮಾಡಿದ್ದಾರೆ.
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್
ವೆಲ್ಡನ್ @RCBTweets! ಅಚ್ಚರಿಗಳಿಂದ ತುಂಬಿದ ಋತುವಿಗೆ ರೋಮಾಂಚಕ ಅಂತ್ಯ ಎಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಶುಭಕೋರಿದ್ದಾರೆ.
ವಿರಾಟ್ ಕೊಹ್ಲಿ, ನೀವು ವರ್ಷಗಳಿಂದ ಈ ಕನಸನ್ನು ಹೊತ್ತುಕೊಂಡಿದ್ದೀರಿ ಮತ್ತು ಇಂದು ರಾತ್ರಿ, ಕಿರೀಟವು ನಿಮಗೆ ನಿಜವಾಗಿಯೂ ಸರಿಹೊಂದುತ್ತದೆ. #KingKohli 👑
ಮುಂದಿನ ಋತುವಿನಲ್ಲಿ ಚೆನ್ನೈ ತಂಡ (CSK) ಬಲವಾದ ಪುನರಾಗಮನವನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಅವರು ಟ್ವಿಟ್ ಮಾಡಿದ್ದಾರೆ.
ಅಲ್ಲು ಅರ್ಜುನ್
ಕಾಯುವಿಕೆ ಮುಗಿಯಿತು. “ಈ ಸಲಾ ಕಪ್ ನಮ್ದೇ!” ಎಂದು ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ ಶುಭಕೋರಿದ್ದಾರೆ.
ಕೊನೆಗೂ! ❤️ ನಾವು 18 ವರ್ಷಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದೇವೆ.
ಆರ್‌ಸಿಬಿಗೆ ಅಭಿನಂದನೆಗಳು! ❤️ ಎಂದವರು ಟ್ವಿಟ್ ಮಾಡಿದ್ದಾರೆ.