A story for the day of the Harithalekhani: God

ಹರಿತಲೇಖನಿ ದಿನಕ್ಕೊಂದು ಕಥೆ: ದೇವರು

Harithalekhani: ಒಂದು ಬಂದರಿನಲ್ಲಿ ದೊಡ್ಡ ಹಡಗೊಂದು ನಿಂತಿತ್ತಂತೆ. ಅದರ ಸ್ಥಂಭದ ಮೇಲೆ ಒಂದು ಹಕ್ಕಿ ಬಂದು ಕುಳಿತಿತ್ತು. ಹಡಗಿನಲ್ಲೂ ಅದಕ್ಕೆ ಕಾಳುಕಡ್ಡಿ ಸಿಗುತ್ತಿದ್ದವು. ಆನಂದವಾಗಿ ಕಾಳುಕಡ್ಡಿ ತಿನ್ನುತ್ತ ಹಡಗಿನ ಪಟಗಳ ಮಧ್ಯೆ ಹಕ್ಕಿ ಹಾರಾಡಿಕೊಂಡಿತ್ತು.

ಈ ಮಧ್ಯೆ ಹಡಗು ಯಾನಕ್ಕೆ ಹೊರಟಿದ್ದು ಅದರ ಗಮನಕ್ಕೆ ಬರಲಿಲ್ಲ. ಎಷ್ಟೋ ಹೊತ್ತಿನ ನಂತರ ಅದು ಮತ್ತೆ ಪಟಸ್ಥಂಭದ ಮೇಲೆ ಬಂದು ಕುಳಿತಾಗ ಅದಕ್ಕೆ ಎಲ್ಲೆಲ್ಲೂ ನೀರೇ ಕಾಣಿಸುತ್ತಿತ್ತು. ದಡ ಕಾಣಿಸಲಿಲ್ಲ. ಅದಕ್ಕೆ ದಡದಲ್ಲಿದ್ದರೆ ತನಗೆ ಇನ್ನೂ ಹೆಚ್ಚು ಕಾಳುಕಡ್ಡಿ ಸಿಗಬಹುದು, ಇನ್ನೂ ಆನಂದವಾಗಿರಬಹುದು ಎನಿಸಿತು.

ಹರೆಯದಲ್ಲಿರುವ ಹಕ್ಕಿಗೆ ತನ್ನ ರೆಕ್ಕೆಗಳ ಮೇಲೆ ಅತೀವ ವಿಶ್ವಾಸ. ದಡವನ್ನು ಹುಡುಕಿಕೊಂಡು ಉತ್ತರದಿಕ್ಕಿಗೆ ಹಾರಿತು.
ರೆಕ್ಕೆಗಳು ಬಳಲುವಷ್ಟು ಹಾರಿದರೂ ದಡ ಕಾಣಲಿಲ್ಲ. ಅದು ಹಿಂದಕ್ಕೆ ಹಾರಿ ಬಂದು ಮತ್ತೆ ಹಡಗಿನ ಪಟಸ್ಥಂಭದ ಮೇಲೆಯೇ ಕುಳಿತಿತು. ಸ್ವಲ್ಪ ಹೊತ್ತು ದಣಿವಾರಿಸಿಕೊಂಡ ನಂತರ ದಕ್ಷಿಣ ದಿಕ್ಕಿಗೆ ಹೋದರೆ ದಡ ಸಿಗಬಹುದು ಎಂದುಕೊಂಡು ದಕ್ಷಿಣ ದಿಕ್ಕಿಗೂ ಹೋಯಿತು. ಹಾರಿಹಾರಿ ರೆಕ್ಕೆಗಳು ಬಳಲಿದವು. ಆದರೆ ದಡ ಕಾಣಲಿಲ್ಲ.

ಅದು ಮತ್ತೆ ಹಡಗಿನ ಪಟಸ್ಥಂಭದ ಮೇಲೆಯೇ ಬಂದು ಕುಳಿತಿತು. ಆನಂತರ ಅದು ಪೂರ್ವ ದಿಕ್ಕಿಗೆ ಹೋಗಿ ಬಂತು. ಪಶ್ಚಿಮ ದಿಕ್ಕಿಗೂ ಹೋಗಿ ಬಂತು. ಎಲ್ಲಿಯೂ ದಡ ಕಾಣಲಿಲ್ಲ…!

ಕೊನೆಗೆ ಪಟಸ್ಥಂಭದ ಮೇಲೆಯೇ ಕುಳಿತು ಕೆಳಗೆ ನೋಡಿತು. ಕೆಳಗೂ ಕಾಳು ಕಡ್ಡಿಗಳು ಕಂಡವು. ನಾನು ಎಲ್ಲೆಲ್ಲಿಯೋ ಹುಡುಕಿಕೊಂಡು ಹೋಗುವ ವಸ್ತುಗಳು ಇಲ್ಲಿಯೇ ಇವೆಯಲ್ಲ ಎಂದು ಸಮಾಧಾನಪಟ್ಟುಕೊಂಡು ನಂತರದ ದಿನಗಳನ್ನು ಅಲ್ಲಿಯೇ ಆನಂದವಾಗಿ ಕಳೆಯಿತು.

ಈ ಕತೆಯಲ್ಲಿ ದಡವನ್ನು ಅರಸಿಕೊಂಡು ನಾಲ್ಕೂ ದಿಕ್ಕಿಗೆ ಹಾರಿ ಬಳಲಿ ಮತ್ತೆ ಹಡಗಿಗೇ ಮರಳಿ ಬರುವ ಹಕ್ಕಿಯ ಪರಿಸ್ಥಿತಿ ನಮ್ಮೆಲ್ಲರದ್ದು.!

ನಾವು ಕೂಡ ದೇವರನ್ನು ಅರಸುತ್ತ ಎಲ್ಲ ದಿಕ್ಕುಗಳಿಗೂ ಹೋಗುತ್ತೇವೆ. ಇಲ್ಲಿ ಸಿಗಲಿಲ್ಲ, ಅಲ್ಲಿ ಸಿಗಬಹುದು ಎಂದು ಅಲ್ಲಿಗೆ ಹೋಗುತ್ತೇವೆ. ಅಲ್ಲಿಯೂ ಸಿಗದಿದ್ದರೆ ಮತ್ತೆಲ್ಲಿಯೋ ಸಿಗಬಹುದೆಂದು ಮತ್ತೆಲ್ಲಿಗೋ ಹೋಗುತ್ತೇವೆ. ಆದರೆ ದೇವರು ನಾವೆಲ್ಲಿದ್ದೇವೆಯೋ, ಅಲ್ಲಿಯೇ ನಮಗೆ ಸಿಗುತ್ತಾನೆ! ದೇವರು ಬೇರೆಲ್ಲಿಯೋ ಇದ್ದಾನೆ ಎಂದು ಭಾವಿಸುವ ಮಾನವರು, ದೇವರು ನಾವೆಲ್ಲಿದ್ದೇವೆಯೋ ಅಲ್ಲಿಯೇ ಇದ್ದಾನೆಂದು ಅರಿತು ಕೊಳ್ಳೊಣ ನಾವು ದೇವರನ್ನು ಹುಡುಕುತ್ತಿಲ್ಲ.

ನಾವು ಹುಡುಕುತ್ತಿರುವುದು ಮನಃಶಾಂತಿಯನ್ನು, ತೃಪ್ತಿಯನ್ನು, ಆನಂದವನ್ನೂ ಎನ್ನುವವರು ನಾವಾದರೆ, ಅದನ್ನು ಎಲ್ಲೆಲ್ಲಿಯೋ ಹುಡುಕಿಕೊಂಡು ಹೋಗುವುದರಲ್ಲಿ ಅರ್ಥವಿದೆಯೇ? ನಾವಿರುವಲ್ಲಿಯೇ ಲಭ್ಯವಿರುವ ಅವುಗಳನ್ನು ಎಲ್ಲೆಲ್ಲಿಯೋ ಅರಸಿಕೊಂಡು ಹೋಗುವುದು ವ್ಯರ್ಥವಲ್ಲವೇ?

ಕೃಪೆ: ಲೇಖಕರ ಮಾಹಿತಿ ಲಭ್ಯವಿಲ್ಲ. (ಸಾಮಾಜಿಕತಾಣ)

ರಾಜಕೀಯ

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

[ccc_my_favorite_select_button post_id="119088"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಮಾತನಾಡಿದರು.

[ccc_my_favorite_select_button post_id="118983"]
ನ್ಯೂಸ್ ಚಾನಲ್ ಚರ್ಚೆ ವೇಳೆ ಕಿರಿಕ್.. ಎಫ್‌ಐಆ‌ರ್

ನ್ಯೂಸ್ ಚಾನಲ್ ಚರ್ಚೆ ವೇಳೆ ಕಿರಿಕ್.. ಎಫ್‌ಐಆ‌ರ್

ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ (News channel) ಧರ್ಮಸ್ಥಳ ಪ್ರಕರಣ ಸಂಬಂಧಿಸಿ ನಡೆದಿದ್ದ ಚರ್ಚಾ ಕಾರ್ಯಕ್ರಮದ ವೇಳೆ ದಾಂಧಲೆ ನಡೆಸಿ, ಹಲ್ಲೆಗೆ ಯತ್ನಿಸಿದ್ದ ಆರೋಪದ ಮೇಲೆ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ವಿರುದ್ಧ ಬೆಂಗಳೂರಿನ

[ccc_my_favorite_select_button post_id="119114"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!