ಟಿಯಾನ್‌ಜಿನ್ (ಚೀನಾ): ಭಾರತದ ಮೇಲೆ ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.
ತಿಯಾಂಜಿನ್ ನಗರಕ್ಕೆ ಶನಿವಾರ ಸಂಜೆ ಬಂದಿಳಿದ್ದಾರೆ. ಏಳು ವರ್ಷಗಳ ಬಳಿಕ ಚೀನಾಗೆ ಆಗಮಿಸಿದ ಭಾರತದ ಪ್ರಧಾನಿಗೆ ಚೀನಾ ಕೆಂಪು ರತ್ನಗಂಬಳಿ ಹಾಸಿ ಸ್ವಾಗತ ನೀಡಿದೆ.
ಮೋದಿ ಅವರನ್ನು ಚೀನಾ ಸಚಿವ ಲೀ ಲೆಚೆಂಗ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಟಿಯಾಂಜಿನ್ ನಗರದಲ್ಲಿ ‘ಶಾಂಫೈ ಸಹಕಾರ ಸಂಘ’ (ಎಸ್‌ಸಿಒ)ದ ಶೃಂಗಸಭೆಯಲ್ಲಿ ಭಾಗಿಯಾಗಲೆಂದೇ ಪ್ರಧಾನಿ ಮೋದಿ 2 ದಿನಗಳ ಚೀನಾ ಪ್ರವಾಸ ಹಮ್ಮಿಕೊಂಡಿದ್ದಾರೆ.
ಚೀನಾ, ರಷ್ಯಾ, ಟರ್ಕಿ, ಪಾಕಿಸ್ತಾನ ಸೇರಿದಂತೆ 24 ದೇಶಗಳ ನಾಯಕರು ಈ ಶೃಂಗದಲ್ಲಿ ಭಾಗವಹಿಸಲಿದ್ದಾರೆ.
ಭಾನುವಾರ ಬೆಳಗ್ಗೆ 9.30ಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜತೆಗೆ ಪ್ರಧಾನಿ ಮೋದಿ ಪ್ರತ್ಯೇಕವಾಗಿ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ, ಆದರೆ ಖಚಿತವಾಗಿಲ್ಲ. ಬಳಿಕ ರಷ್ಯಾ ಅಧ್ಯಕ್ಷ ಬ್ಲಾದಿಮಿರ್ ಪುಟಿನ್ ಅವರ ಜತೆಗೂ ಮೋದಿ ಮಾತುಕತೆ ನಡೆಸಲಿದ್ದಾರೆ.
2020ರ ಗಲ್ವಾನ್ ಗಡಿ ಸಂಘರ್ಷದ ಬಳಿಕ ಮೋದಿ ಅವರು ಇದೇ ಮೊದಲ ಬಾರಿಗೆ ಚೀನಾಗೆ ಭೇಟಿ ನೀಡಿದ್ದು, ಟ್ರಂಪ್ಗೆ ತಿರುಗೇಟು ಎನ್ನಲಾಗುತ್ತಿದೆ.