ದೊಡ್ಡಬಳ್ಳಾಪುರ (Doddaballapura): ಚಾಲಕನ ನಿಯಂತ್ರಣ ತಪ್ಪಿದ ಕಾರ್ಖಾನೆಯ ಮಿನಿ ಬಸ್ಸೊಂದು ಪಲ್ಟಿ ಹೊಡೆದಿರುವ ಘಟನೆ ದೊಡ್ಡಬಳ್ಳಾಪುರ ಹೊಸಹಳ್ಳಿ ನಡುವಿನ ಗ್ರೀನ್ ವ್ಯಾಲಿ ಬಳಿ ಸಂಭವಿಸಿದೆ.
ದೊಡ್ಡಬಳ್ಳಾಪುರದಿಂದ ಗೌರಿಬಿದನೂರಿಗೆ ಹೊಸಹಳ್ಳಿ ಮಾರ್ಗವಾಗಿ ಕಾರ್ಮಿಕರಿದ್ದ ಮಿನಿ ಬಸ್ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಘಟನೆಗೆ ಬೇರೊಂದು ವಾಹನವನ್ನು ಓವರ್ ಟೇಕ್ ಮಾಡುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ, ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರನ್ನು ಬೇರೆ ವಾಹನದ ಮೂಲಕ ಊರುಗಳಿಗೆ ಕಳುಹಿಸಲಾಗಿದೆ.
ಏಕಾಏಕಿ ಬಸ್ ಪಲ್ಟಿ ಹೊಡೆದಿದ್ದು, ಕಾರ್ಮಿಕರನ್ನು ಆತಂಕ್ಕೆ ಒಳಗಾಗುವಂತೆ ಮಾಡಿತ್ತು. ಇತರೆ ವಾಹನಗಳ ಸವಾರರು ಸ್ಥಳಕ್ಕೆ ದೌಡಾಯಿಸಿ, ಮಿನಿ ಬಸ್ಸಿನ ಗಾಜನ್ನು ಹೊಡೆದು ಪ್ರಯಾಣಿಕರನ್ನು ಹೊರಗೆ ಕರೆತಂದರು.
ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.