ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ (Accident) ಸಂಭವಿಸಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಗುಮ್ಮನಹಳ್ಳಿ ಸಮೀಪ ಇಂದು ಸಂಜೆ ಸಂಭವಿಸಿದೆ.
ತಾಲೂಕಿನ ಗುಮ್ಮನಹಳ್ಳಿ-ಲಿಂಗಧೀರನಹಳ್ಳಿ ಗೇಟ್ ನಡುವಿನ ತಿರುವಿನಲ್ಲಿ ಮುಖಾಮುಖಿಯಾದ ಸ್ಕೂಟರ್ ಮತ್ತು ಬೈಕ್ ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಭೀಕರ ಅಪಘಾತ.. ಅಂಬುಲೆನ್ಸ್ ಸಿಗದೆ ಬೀದಿಯಲ್ಲಿ ಒದ್ದಾಡಿದ ಗಾಯಾಳುಗಳು..!
ಘಟನೆ ಬೆನ್ನಲ್ಲೇ ದಾರಿ ಹೋಕರು ಅಂಬುಲೆನ್ಸ್ಗೆ ಕರೆ ಮಾಡಿ ಒಂದು ಗಂಟೆ ಕಾದರು ಸ್ಥಳಕ್ಕೆ ಬಾರದೆ ಇರುವ ಕಾರಣ, ಸುಮಾರು ಒಂದು ಗಂಟೆಗಳ ಕಾಲ ಗಾಯಗೊಂಡವರು ನಡು ರಸ್ತೆಯಲ್ಲಿಯೇ ನರಳಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೆರಳಿದ ಯುವಕರಿಂದ ಆಸ್ಪತ್ರೆಗೆ ಬೇಲಿ
ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೆನ್ಸ್ ಲಭ್ಯವಿಲ್ಲವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ ಇರುವುದರಿಂದ ಕೆರಳಿದ ಯುವಕರು ಸಾಸಲು ಸರ್ಕಾರಿ ಆಸ್ಪತ್ರೆ ಬಾಗಿಲಿಗೆ ಬೇಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸಾಸಲು ಹೋಬಳಿ ಕೇಂದ್ರವಾಗಿದ್ದು, 24X7 ಕಾರ್ಯನಿರ್ವಹಿಸಬೇಕಿದೆ. ಆದರೆ ಇಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆಯಿಂದ ಯಾವುದೇ ಸೌಲಭ್ಯ ದೊರಕುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.