ಚಿಕ್ಕಬಳ್ಳಾಪುರ: ಸನಾತನ ಧರ್ಮದ ಬಗ್ಗೆ ಅಧ್ಯಯನ ಮಾಡಿ ತಿಳಿಯಲು ಸಾಧ್ಯವಿಲ್ಲ. ಅದನ್ನು ಅನುಭವಿಸಿ ಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದರು.
ಅವರು ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ನಡೆದ ಶ್ರೀ ಸತ್ಯ ಸಾಯಿ ಬಾಬಾ ಅವರ ನೂರನೇ ವರ್ಷಾಚರಣೆ ಹಿನ್ನೆಲೆಯಲ್ಲಿ 100 ಡೇಸ್ ವರ್ಲ್ಡ್ ಕಲ್ಚರಲ್ ಫೆಸ್ಟಿವಲ್ 2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಧುಸೂಧನ ಸ್ವಾಮಿಜಿ ಅವರೊಂದಿಗೆ ದೈವದತ್ರ ಸಂಬಂಧ ಇದೆ. ನಾನು ಅವರನ್ನು ಭೇಟಿ ಮಾಡಿದಾಗ ಮಾನವತೆಯ ಅನುಕೂಲಕ್ಕಾಗಿ ಶಕ್ತಿ ಬಂದತಾಯಿತು. ಎಲ್ಲರೂ ಶಕ್ತಿಯ ಪ್ರತೀಕಗಳು ಆದರೆ ನಮ್ಮ ಶಕ್ತಿಗೆ ಮಿತಿ ಇದೆ. ಆದರೆ, ಮಧುಸೂದನ ಸ್ವಾಮೀಜಿ ಅವರ ಶಕ್ತಿಗೆ ಮಿತಿ ಇಲ್ಲ. ನಾವು ಏನು ನೋಡುತ್ತೇವೆ ಅದು ಪವಾಡ. ದೈವ ಅವರಿಗೆ ಆ ಕೆಲಸ ಮಾಡಿಸುತ್ತಿದೆ ಎಂದರು.
ಮುಂದಿನ ಜನಾಂಗ ಸೃಷ್ಠಿ
ನಾನು ಮೊದಲು ಇಲ್ಲಿ ಕೇವಲ ಕಲ್ಲು ಮಣ್ಣು ನೋಡುತ್ತಿದ್ದೆ ಈಗ ಇದು ದೈವಿಕ ಕೇಂದ್ರವಾಗಿದೆ. ಸನಾತನ ಧರ್ಮದ ಬಗ್ಗೆ ಅಧ್ಯಯನ ಮಾಡಿ ತಿಳಿಯಲು ಸಾಧ್ಯವಿಲ್ಲ. ಅದನ್ನು ಅನುಭವಿಸಿ ಪಡೆಯಬೇಕು. ಅವರು ಇಲ್ಲಿ ಬಂದು ಅನುಭವಿಸಬೇಕು. ಯಾರು ಇಲ್ಲಿ ಬಂದಿದ್ದೀರಿ ಅವರು ಅದರ ಅನುಭವ ಪಡೆಯುತ್ತೀರಿ ಎಂದು ಹೇಳಿದರು.
ಸ್ವಾಮೀಜಿ ಇಲ್ಲಿ ಸೃಷ್ಟಿಸುತ್ತಿರುವುದು ಕಟ್ಟಡಗಳಷ್ಟೇ ಅಲ್ಲ, ಮುಂದಿನ ಜನಾಂಗವನ್ನು ಸೃಷ್ಠಿಸುತ್ತಿದ್ದಾರೆ. ಇಲ್ಲಿ ಬರುವ ಮಕ್ಕಳು, ಸಂಸ್ಕಾರ, ಸಂಸ್ಕೃತಿ, ಧೈರ್ಯ ಶಕ್ತಿ ಪಡೆಯುತ್ತಾರೆ ಎಂದರು.
ಪುಣ್ಯಕೋಟಿ
ನಾನು ಗೋಶಾಲೆಗೆ ಹೊಗಿದ್ದೆ ನಾನು ತುಂಬ ಭಾವನಾತ್ಮಕವಾದೆ. ನಾನು ಸಿಎಂ ಆಗಿದ್ದಾಗ ಪುಣ್ಯಕೋಟಿ ಯೋಜನೆ ಜಾರಿಗೆ ತಂದಿದ್ದೆ, ಪ್ರತಿ ಹಸುವಿನ ನಿರ್ವಹಣೆಗೆ ವಾರ್ಷಿಕ 11 ಸಾವಿರ ರು. ನೀಡಲಾಗುತ್ತದೆ. ನಾವು ಇಲ್ಲಿ ಬಂದಾಗ ಪುಣ್ಯ ಪಡೆದುಕೊಳ್ಳಬೇಕು. ಆಗ ನಾವು ಪುಣ್ಯಶಾಲಿಗಳಾಗುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಮಧುಸೂದನ್ ಸಾಯಿ ಸ್ವಾಮೀಜಿ ಹಾಜರಿದ್ದರು.