ದುಬೈ: ಆರು ತಿಂಗಳ ಹಿಂದೆ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಕಪ್ ಎತ್ತಿ ಹಿಡಿದಿದ್ದ ಟೀಂ ಇಂಡಿಯಾ ಇದೀಗ ಟಿ20 ಮಾದರಿಯಲ್ಲಿ ನಡೆದ ವಿಷ್ಯಾ ಕಪ್‌ನಲ್ಲೂ (Asia Cup) ಪರಾಕ್ರಮ ಮುಂದುವರೆಸಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 146 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಮೂಲಕ 9ನೇ ಬಾರಿ ಏಷ್ಯಾ ಕಪ್ ಜಯಿಸಿತು.
Suryakumar Yadav recreates Rohit Sharma’s iconic 2024 T20 World Cup celebration after Asia Cup win.🇮🇳🔥 #INDvPAK pic.twitter.com/Y8rJzgNvEX
— 𝐑𝐮𝐬𝐡𝐢𝐢𝐢⁴⁵ (@rushiii_12) September 28, 2025
ಗೆಲ್ಲಲು ಸಾಧಾರಣ ಗುರಿ ಪಡೆದ ಭಾರತ ಭಾರತ 5 ತಂಡ ಮೊದಲ 4 ಓವರ್ ಗಳಲ್ಲಿ 20 ರನ್‌ಗೆ 3 ವಿಕೆಟ್ ಕಳೆದುಕೊಂಡಾಗ ಭಾರತದ ಪಾಳೆಯದಲ್ಲಿ ಆತಂಕ ದ ಮೂಡಿತ್ತು. ಉತ್ತಮ ಫಾರ್ಮ್ ನಲ್ಲಿದ್ದ ಅಭಿಷೇಕ್ ಶರ್ಮಾ (5), ನಾಯಕ ಸೂರ್ಯಕುಮಾರ್ ಯಾದವ್ (1), ಶುಭಮನ್ ಗಿಲ್ 12(10) ವಿಕೆಟ್ ಅನ್ನು ಫಾಹಿಮ್ ಆಶ್ರಫ್ ಮತ್ತು ಶಾಹಿನ್ ಶಾ ಅಫ್ರಿದ್ ಅವರು ಉರುಳಿಸಿದರು.
ಆದರೆ ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಪನ್ ಅವರು ತಾಳ್ಮೆಯಿಂದ 4ನೇ ವಿಕೆಟ್ ಗೆ 57 ರನ್ ಗಳ ಜೊತೆಯಾಟವಾಡಿದರು. 13ನೇ ಓವರ್ ನಲ್ಲಿ ಸಂಜು ಸ್ಯಾನ್ ಔಟಾದ ಬಳಿಕ ಜೊತೆಯಾದ ತಿಲಕ್ ವರ್ಮಾ ಮತ್ತು ಶಿವಂ ದುಬೆ ಜೋಡಿ ಪಾಕ್ ಕೈಯಿಂದ ಪಂದ್ಯವನ್ನು ಕಸಿದು ಕೊಂಡಿತು.
ತಿಲಕ್ ವರ್ಮಾ 53 ಬಾಲ್‌ಗಳಲ್ಲಿ 69 ರನ್ ಗಳಿಸಿ ಗೆಲುವಿನ ರೂವಾರಿಯಾದರು. ದುಬೆ 22 ಬಾಲ್ ಗಳಲ್ಲಿ 33 ರನ್ ಗಳಿಸಿ 19ನೇ ಓವರ್‌ನಲ್ಲಿ ಔಟಾದರು.
Winning moment for Team India! 🇮🇳✨
— ICC Asia Cricket (@ICCAsiaCricket) September 28, 2025
Beating Pakistan 3 times in a tournament & becoming 9-time Asia Cup champions is not everyone cup of tea🔥#AsiaCup2025 #INDvPAK pic.twitter.com/g8Z45AX0MA
ಈ ಸೋಲಿನ ಮೂಲಕ ಫೈನಲ್ ಪಂದ್ಯದಲ್ಲಿ ಭಾರತವನ್ನು ಮಣಿಸಬೇಕು, ಹಾಗೆ, ಹೀಗೆ ಎಂದು ವೀರಾವೇಶದ ಮಾತುಗಳನ್ನಾಡಿದ್ದ ಪಾಕ್ ಅಭಿಮಾನಿಗಳು ಹಾಗೂ ಮಾಜಿ ಆಟಗಾರರ ಸೊಕ್ಕು ಮುರಿದಂತಾಗಿದೆ.