ದೊಡ್ಡಬಳ್ಳಾಪುರ: ಬೆಳಗಾವಿಯ ರಾಣಿ ಚನ್ನಮ್ಮ ಯೂನಿವರ್ಸಿಟಿಯಲ್ಲಿ ಇಂದಿನಿಂದ ಅಕ್ಟೋಬರ್ 07ರವರೆಗೆ ನಡೆಯಲಿರುವ ಸೌತ್ ಜೋನ್ ಇಂಟರ್ ಯೂನಿವರ್ಸಿಟಿ ಕಬಡ್ಡಿ ಚಾಂಪಿಯನ್‌ಶಿಪ್‌ಗೆ (South Zone Inter University Kabaddi Championship) ದೊಡ್ಡಬಳ್ಳಾಪುರದ (Doddaballapura) ಇಬ್ಬರು ಕ್ರೀಡಾಪಟುಗಳು (Athletes) ಆಯ್ಕೆಯಾಗಿದ್ದಾರೆ.

ಬೆಂಗಳೂರು ನಾರ್ಥ್ ಯೂನಿವರ್ಸಿಟಿ ಕಬಡ್ಡಿ ತಂಡಕ್ಕೆ ದೊಡ್ಡಬಳ್ಳಾಪುರದ ಅವಿಘ್ನ ಕಬಡ್ಡಿ ಕ್ಲಬ್‌ನ ಅಟಗಾರರಾದ ಹರೀಶ್.ಆರ್ ಹಾಗೂ ಚಂದನ್.ಎಸ್ ಆಯ್ಕೆಯಾಗಿದ್ದಾರೆ.
ಅಟಗಾರರಾದ ಹರೀಶ್.ಆರ್ ಹಾಗೂ ಚಂದನ್.ಎಸ್ ಅವರನ್ನು ಬಿಕೆಎನ್ ಗ್ರೂಪ್ಸ್ ಅಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ, ಅವಿಘ್ನ ಕಬಡ್ಡಿ ಕ್ಲಬ್ ಕೋಚ್ ರವಿಕುಮಾರ್, ನಗರಸಭೆ ಉಪಾಧ್ಯಕ್ಷ ಎಂ. ಮಲ್ಲೇಶ್ ಶುಭಕೋರಿದ್ದಾರೆ.