ದೊಡ್ಡಬಳ್ಳಾಪುರ: ಇಂದು (ಅ.14) ರಾತ್ರಿ ಸುರಿದ ಗುಡುಗು, ಮಿಂಚು ಸಹಿತ ಬಾರಿ ಮಳೆಗೆ ಸಿಡಿಲು (Thunderbolt) ಬಡಿದು ನೂತನವಾಗಿ ನಿರ್ಮಿಸಿದ್ದ ಮನೆಯೊಂದು ಹಾನಿಯಾಗಿರುವ ಘಟನೆ ನಗರದ ದರ್ಗಾಜೋಗಿಹಳ್ಳಿಯಲ್ಲಿ ಕೆಲವೇ ಗಂಟೆಗಳ ಮುಂಚೆ ಸಂಭವಿಸಿದೆ.
ದರ್ಗಾಜೋಗಿಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ಮುಜಾಹಿದ್ ಖಾನ್ ಅವರು ಎರಡು ವರ್ಷಗಳ ಹಿಂದಷ್ಟೇ ನೂತನವಾಗಿ ನಿರ್ಮಿಸಿದ್ದ ಮನೆಗೆ ಮಂಗಳವಾರ ರಾತ್ರಿ 9.10ರ ಸುಮಾರಿಗೆ ಸಿಡಿಲು ಬಡಿದಿದೆ.
ಸಿಡಿಲು ಬಡಿದ ಕಾರಣ ಮನೆಯ ಮೇಲಿನ ಗೋಡೆಯ ಕಟ್ಟೆ ಬಿದ್ದಿದ್ದು, ಸಿಸಿ ಟಿವಿ ಕ್ಯಾಮೆರಾಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಮಕ್ಕಳು ಸೇರಿದಂತೆ ಯಾರಿಗೂ ತೊಂದರೆ ಉಂಟಾಗಿಲ್ಲ.
ದೊಡ್ಡಬಳ್ಳಾಪುರ ಗ್ರಾಮಾಂತರ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.