ಹೈದರಾಬಾದ್: ಇಂದು (ಸೋಮವಾರ) ಬೆಳ್ಳಗೆ ಟಿಪ್ಪರ್ ಲಾರಿ ಮತ್ತು ಸರ್ಕಾರಿ ಸಾರಿಗೆ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) 20 ಮಂದಿ ಮೃತಪಟ್ಟಿರುವ ಘಟನೆ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿ ನಡೆದಿದೆ.
ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದೆ.
ಘಟನೆಯಲ್ಲಿ ಬಸ್ಸಿನಲ್ಲಿದ್ದ 10 ತಿಂಗಳ ಮಗು ಸೇರಿ 20 ಮಂದಿ ಸಾವನಪ್ಪಿದ್ದು, ಅನೇಕ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
💔 Very tragic accident near Mirzaguda, Chevella.
— YSR (@ysathishreddy) November 3, 2025
An RTC bus collided with a tipper, leading to the death of 21 people.
Deeply painful and heartbreaking incident 🥲#Telangana #Tragedy pic.twitter.com/QTBG81QeYI
ಟಿಪ್ಪರ್ ಲಾರಿಯಲ್ಲಿ ಸಾಗಿಸುತ್ತಿದ್ದ ಜಲ್ಲಿ ಕಲ್ಲು ಬಸ್ ಮೇಲೆ ಬಿದ್ದ ಪರಿಣಾಮ ಜನರು ಬಸ್ ಒಳಗೆ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿ ಅನೇಕ ಪ್ರಯಾಣಿಕರನ್ನು ಹೊರಗೆ ತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.