ಬೆಂಗಳೂರು: ನಟ ದರ್ಶನ್ (Actor Darshan) ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ. ಇದರ ನಡುವೆ ಅಭಿಮಾನಿಗಳಿಗೆ ‘ದಿ ಡೆವಿಲ್’ (The Devil) ಸಿನಿಮಾ ಅಪ್‌ಡೇಟ್ ಒಂದನ್ನು ನೀಡಿದೆ.
‘ದಿ ಡೆವಿಲ್’ ಮೊದಲ ಹಂತದ ಚಿತ್ರೀಕರಣದ ವಿಡಿಯೊವನ್ನು ಶ್ರೀ ಜೈಮಾತಾ ಕಂಬೈನ್ಸ್ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬಿಡುಗಡೆ ಮಾಡಿದೆ.
ಮಾರ್ಚ್ 22nd , 2024 " ದಿ ಡೆವಿಲ್" ಮೊದಲ ಹಂತದ ಚಿತ್ರೀಕರಣ ಸಂದರ್ಭ, ಹೀಗೆ ಆರಂಭವಾಯಿತು ಡೆವಿಲ್‌ನ ಪ್ರಯಾಣ❤️
— Shri Jaimatha Combines (@sjmcfilms) November 11, 2025
It all started on March 22nd, 2024 with The Devil’s first schedule… and here we are, just a month away from the big day!✨#DarshanThoogudeepa #dboss pic.twitter.com/U9cogIbMwQ
ಈಗಾಗಲೇ ಡೆವಿಲ್ ಸಿನಿಮಾದ ಎರಡು ಹಾಡುಗಳು ಬಿಡುಗಡೆ ಮಾಡಿರುವ ಚಿತ್ರ ತಂಡ,ಶೀಘ್ರದಲ್ಲೇ ಮೂರನೇ ಹಾಡಿನ ಬಗ್ಗೆ ಅಪ್‌ಡೇಟ್ ನೀಡುತ್ತೇವೆ ಎಂದು ಮಾಹಿತಿ ನೀಡಿದೆ.
2024 ಮಾರ್ಚ್ 22ರಂದು ‘ದಿ ಡೆವಿಲ್’ ಮೊದಲ ಹಂತದ ಚಿತ್ರೀಕರಣ ಸಂದರ್ಭ ಹೀಗೆ ಆರಂಭವಾಯಿತು ಡೆವಿಲ್‌ನ ಪ್ರಯಾಣ ಎಂದು ಶ್ರೀ ಜೈಮಾತಾ ಕಂಬೈನ್ಸ್ ವಿಡಿಯೊ ಹಂಚಿಕೊಂಡಿದೆ.
ಅದರಲ್ಲಿ ನಟ ದರ್ಶನ್ ಇದ್ರೆ ನೆಮ್ಮದಿಯಾಗಿ ಇರಬೇಕು ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಕೆಲವೊಂದು ಸಾಹಸ ದೃಶ್ಯಗಳಲ್ಲಿ ನಟ ದರ್ಶನ್ ಕಾಣಿಸಿಕೊಂಡಿದ್ದಾರೆ.
ಡೆವಿಲ್ ಸಿನಿಮಾ ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ. ಮಿಲನಾ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ.