ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ (Accident) ಹತ್ತಾರು ಮೀಟರ್ ಗಳಷ್ಟು ದೂರಕ್ಕೆ ತೆರಳಿದ ಕಾರು ಪಲ್ಟಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬ್ರಿಡ್ಜ್ ಬಳಿಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ನಡೆದಿದೆ.
ಅಪಘಾತದ ಭಯಾನಕ ದೃಶ್ಯಗಳು ಸಮೀಪದ ಹೋಟೆಲ್ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಗರದ ವಾಪಸಂದ್ರ ಕಡೆಯಿಂದ ದ್ವಿಚಕ್ರ ವಾಹನ ಸವಾರ ಹೆದ್ದಾರಿಯಲ್ಲಿ ರಸ್ತೆ ದಾಟುವಾಗ ಬಾಗೇಪಲ್ಲಿ ಕಡೆಯಿಂದ ಅತಿವೇಗವಾಗಿ ಬಂದ ಸ್ವಿಪ್ಟ್ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸುಮಾರು 20- 30 ಮೀಟರ್ ಗಳಷ್ಟು ದೂರ ಪಲ್ಟಿ ಹೊಡೆದಿದೆ.
ಆದ್ರೆ ದ್ವಿಚಕ್ರ ವಾಹನ ಸವಾರ ಅಚ್ಚರಿಯಂತೆ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದು. ಕಾರು ಹಾಗೂ ಬೈಕ್ ಸಂಪೂರ್ಣ ಜಖಂ ಆಗಿದೆ.
ಇನ್ನೂ ಘಟನೆ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೋಲಿಸರು ಸ್ಥಳ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.