ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ “ದಿ ಡೆವಿಲ್” (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.
ಈ ಮುಂಚೆ ಇದ್ರೆ ನೆಮ್ದಿಯಾಗಿರ್ಬೇಕ್, ಒಂದೇ ಒಂದು ಸಲ ಅಂತ ಸಾಂಗ್ ಬಿಡುಗಡೆ ಮಾಡುವ ಮೂಲಕ ದರ್ಶನ್ ಅವರ ಸೆಲೆಬ್ರಿಟಿಸ್ಗೆ ಖುಷಿ ಪಡಿಸಿದ್ದ ಚಿತ್ರ ತಂಡ ಈಗ ಅಲೊಹೊಮೊರ (Alohomora) ಗೀತೆಯನ್ನು ಬಿಡುಗಡೆ ಮಾಡಿದೆ.
ಈ ಗೀತೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಸ್ ಲುಕ್‌ನಲ್ಲಿ ಕಾಣಿಸಿದ್ದಾರೆ. ಕಿಂಗ್, ಡಾನ್, ರಿಯಲ್ ಡೆವಿಲ್ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದು, ಬಾಸ್ ಅವತಾರ ತೋರಿಸಿದ್ದಾರೆ.
ಅಲೊಹೊಮೊರಾ..ದಿ ಟ್ರೂ ಎಂಪರರ್, ಡೌಟೇ ಬೇಡ, ಸೈತಾನ ದೇವರೆ.. ಅಸ್ತಲವಿಸ್ತ, ಹೇಳದೇ ಇರೋ ಬಂಧನಗಳೇ ತಕಕಾರು ತೊಂದರೆ.. ಅಂತ ಸಾಗುತ್ತದೆ ಸಾಲುಗಳು. ಕಲಿಯುಗದಿ ಕೃಷ್ಣ ಯಾರಲೇ.. ಅಸಲಿ ಕಲಿ ಯಾರು ಹೇಳಲೇ.. ಹುಟ್ಟುವುದು ಸಾವಿನಿಂದಲೇ.. ಬೇಟ ಬಾಪ್ ಬೆಳಕು, ಬಾಪ್ ಹೇ ಕತ್ತಲೆ.. ಎಂದು ಹಾಡು ಸಾಗುತ್ತದೆ.
ದರ್ಶನ್, ರಚನಾ ರೈ ಮತ್ತು ಇತರರು ನಟಿಸಿರುವ ”ದಿ ಡೆವಿಲ್” ಚಿತ್ರದ ”ಅಲೋಹೋಮೊರಾ – ದಿ ಟ್ರೂ ಎಂಪರರ್” ಹಾಡಿನ ಪ್ರೋಮೋವನ್ನು ಪ್ರಸ್ತುತಪಡಿಸಲಾಗಿತ್ತು.