ದೊಡ್ಡಬಳ್ಳಾಪುರ: ಮುಂಜಾನೆಯ ಮಂಜಿನಿಂದ ಕೆಟ್ಟು ನಿಂತಿದ್ದ ಲಾರಿ ಕಾಣದೆ ಕಾರ್ಖಾನೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಡಿಕ್ಕಿ ಹೊಡೆದ ಪರಿಣಾಮ (Accident) ಚಾಲಕ ಸೇರಿ 10ಮಂದಿ ಗಾಯಗೊಂಡಿರುವ ಘಟನೆ ಮಾಕಳಿ ರೈಲ್ವೆ ಸ್ಟೇಷನ್ ಬಳಿಯ ತಿರುವಿನಲ್ಲಿ ಸಂಭವಿಸಿದೆ.
ಗೌರಿಬಿದನೂರಿನಿಂದ ಪ್ರತಿನಿತ್ಯದಂತೆ ಮುಸಾಶಿ ಕಾರ್ಖಾನೆಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮಂಜಿನ ಕಾರಣ, ರಸ್ತೆ ಬದಿಯಲ್ಲಿ ಕೆಟ್ಟು ನಿಂತಿ ಲಾರಿ ಕಾಣದ ಹಿಂಬಂದಿಯಿಂದ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಚಾಲಕನ ಕಾಲಿಗೆ ಗಂಭೀರ ಪೆಟ್ಟಗಿದ್ದು, ಉಳಿದ 10 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಲಾರಿ ಚಾಲಕನ ನಿರ್ಲಕ್ಷ್ಯ
ಕೆಟ್ಟು ನಿಂತ ಲಾರಿ ಚಾಲಕ ಇತರೆ ವಾಹನಗಳಿಗೆ ಸೂಚನೆ ದೊರಕುವಂತೆ ರಿಪ್ಲಾಕ್ಟರ್ ಅಳವಡಿಸದೆ ಇರುವುದು, ಮಂಜಿನ ಹಿನ್ನೆಲೆಯಲ್ಲಿ ಕೆಟ್ಟು ನಿಂತ ಲಾರಿ ಕಾಣದೆ ಬಸ್ಸಿ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.