ದೊಡ್ಡಬಳ್ಳಾಪುರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ವತಿಯಿಂದ ನಡೆದ ಅಂತರಕಾಲೇಜು ಅಥ್ಲೆಟಿಕ್ ಕ್ರೀಡಾ ಕೂಟ-2025 ರಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (Government First Grade College) ಕ್ರೀಡಾ ಪಟುಗಳು ಭಾಗವಹಿಸಿ 10 ಚಿನ್ನದ ಪದಕ, 6 ಬೆಳ್ಳಿ ಪದಕ, 2 ಕಂಚಿನ ಪದಕಗಳಿಸಿ 89 ಅಂಕಗಳನ್ನು ಪಡೆಯುವ ಮೂಲಕ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ.
ಇದರೊಂದಿಗೆ ವಿಶ್ವವಿದ್ಯಾಲಯ ಮಟ್ಟದ 4 ಹೊಸ ಕೂಟ ದಾಖಲೆಗಳನ್ನು ಮಾಡಿ ಸಾಧನೆ ಮಾಡಿದ್ದಾರೆ ಎಂದು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಶ್ರೀನಿವಾಸ.ಜಿ ತಿಳಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ.ಸದಾಶಿವ ರಾಮಚಂದ್ರಗೌಡ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಶ್ರೀನಿವಾಸ.ಜಿ ಪ್ರಾಧ್ಯಾಪಕರಾದ ಡಾ.ಮಧುಸೂದನ್ರೆಡ್ಡಿ, ಡಾ.ಗಂಗಾಧರಯ್ಯ.ಬಿ.ಆರ್., ನೀರಜಾದೇವಿ, ಲಲಿತಮ್ಮ ಸತೀಷ್ಕುಮಾರ್.ಎನ್.ಬಿ., ಶೈಲಾ, ಡೋರೀನ್ ಕೋಟ್ಯಾನ್ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.