ದೊಡ್ಡಬಳ್ಳಾಪುರ: ಭಾರತ ಸಂವಿಧಾನ (Constitution) ಸಮರ್ಪಣಾ ದಿನ ಮತ್ತು ಮಾನವ ಹಕ್ಕುಗಳ ದಿನಾಚರಣೆಯ ಪ್ರಯುಕ್ತ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು (Essay Competition) ನಾಳೆ ಆಯೋಜಿಸಲಾಗಿದೆ.
ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿಯು ನಾಳೆ (ಡಿ.6) ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ದೊಡ್ಡಬಳ್ಳಾಪುರ ನಗರದಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ತೂಬಗೆರೆ ಷರೀಫ್ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಪ್ರತಿ ಪದವಿ ಪೂರ್ವ ಕಾಲೇಜಿನಿಂದ ಇಬ್ಬರು(2) ವಿಧ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದ್ದು, ಈ ಕುರಿತಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದು ಅನುಮತಿ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ಪರ್ಧೆಯ ದಿನ (ಡಿ.6) ಒಂದು ಗಂಟೆ ಮುಂಚಿತವಾಗಿ ತಮ್ಮ ಕಾಲೇಜಿನ ಮುಖ್ಯಸ್ಥರು/ಪ್ರಾಂಶುಪಾಲರಿಂದ ದೃಢೀಕರಣ ಪತ್ರದೊಂದಿಗೆ ಕಾಲೇಜು ನೀಡಿರುವ ಗುರುತಿನ ಚೀಟಿಯೊಂದಿಗೆ ಪ್ರಬಂಧ ಸ್ಪರ್ಧೆ ನಡೆಯುವ ಸ್ಥಳಕ್ಕೆ ಆಗಮಿಸಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ
ಪ್ರಥಮ ಬಹುಮಾನವಾಗಿ
ರೂ 5000 ಸಾವಿರ.
ದ್ವಿತೀಯ ಬಹುಮಾನ – ರೂ. 3000 ಸಾವಿರ.
ತೃತೀಯ ರೂ. 2000 ಸಾವಿರ ಹಾಗೂ ಐದು ಸಮಾಧಾನಕರ ತಲಾ 1000 ರೂಗಳ
ಬಹುಮಾನಗಳೊಂದಿಗೆ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು.
ವಿಜೇತರಿಗೆ ಡಿ. 10ರ ಬುಧವಾರ ಬೆಳಿಗ್ಗೆ 11 ಗಂಟೆಗೆ ದೊಡ್ಡಬಳ್ಳಾಪುರ ನಗರದಲ್ಲಿರುವ ಕನ್ನಡ ಜಾಗೃತ ಭವನದಲ್ಲಿ ನಡೆಯಲಿರುವ ಸಂವಿಧಾನ ಸಮರ್ಪಣಾ ದಿನ ಹಾಗೂ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಬಹುಮಾನವನ್ನು ವಿತರಿಸಲಾಗುವುದು.
ಪ್ರಬಂಧದ ವಿಷಯ
ಭಾರತ ಸಂವಿಧಾನದ ಮಹತ್ವ, ಲಕ್ಷಣಗಳು ಮತ್ತು ಮೂಲಭೂತ ಹಕ್ಕುಗಳು.
ನಿಬಂಧನೆಗಳು
ಕಾಲೇಜು ಮುಖ್ಯಸ್ಥರ/ಪ್ರಾಂಶುಪಾಲರ ದೃಢೀಕರಣ ಪತ್ರ ಹಾಗೂ ವಿಧ್ಯಾರ್ಥಿಗಳ ಗುರುತಿನ ಚೀಟಿ ಕಡ್ಡಾಯವಾಗಿ ತರತಕ್ಕದ್ದು.
ಪ್ರಬಂಧವು 10 ಪುಟಗಳು ಮೀರದಂತಿರಬೇಕು.
ಪರೀಕ್ಷಾ ಕೊಠಡಿಯೊಳಗೆ 15 ನಿಮಿಷ ಮುಂಚಿತವಾಗಿ ಹಾಜರಿರತಕ್ಕದ್ದು.
ಪರೀಕ್ಷಾ ಕೊಠಡಿಯೊಳಗೆ ಪೇಪರ್ ಮತ್ತು ಪೆನ್ನು ತರುವಂತಿಲ್ಲ.
ನಿಮ್ಮ ಬ್ಯಾಗು, ಲಗೇಜು, ಹಾಗೂ ಮೊಬೈಲ್ ಕೊಠಡಿಯೊಳಗೆ ತರುವಂತಿಲ್ಲ.
ಪ್ರಬಂಧ ಸ್ಪರ್ಧೆಯ ಸಮಯದ ಮಧ್ಯೆ ಯಾರೂ ಎದ್ದು ಹೋಗುವಂತಿಲ್ಲ.
ಭಾಗವಹಿಸುವ ವಿಧ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಹೋಗತಕ್ಕದ್ದು.
ಪ್ರಬಂಧ ಸ್ಪರ್ಧೆ ಮುಗಿದ ನಂತರ ವಿದ್ಯಾರ್ಥಿಗಳಿಗೆ ಲಘು ಉಪಹಾರದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
ತೂಬಗೆರೆಷರೀಫ್ 9343717770
ರಾಜುಸಣ್ಣಕ್ಕಿ 9986573503
ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಸೂಚಿಸಿದ್ದಾರೆ.