ಬೆಂಗಳೂರು: ನಾನ್ ಬರ್ತಿದ್ದೀನಿ ಚಿನ್ನ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ‘ ದಿ ಡೆವಿಲ್’ (The Devil) ಸಿನಿಮಾ ಇದೇ ತಿಂಗಳ 11ರಂದು ಬಿಡುಗಡೆಯಾಗುತ್ತಿದೆ.
ಶೋ ಹೌಸ್ಫುಲ್!
ಡೆವಿಲ್ ಅಬ್ಬರಿಸೋಕೆ ಕೆಲವೇ ಕೆಲವು ದಿನಗಳಷ್ಟೇ ಬಾಕಿ ಇದೆ. ಹಾಗೆಯೇ ದರ್ಶನ್ ಅಭಿಮಾನಿಗಳು ಅಂತೂ ಹಬ್ಬ ಮಾಡೋಕೆ ರೆಡಿ ಆಗಿ ನಿಂತಿದ್ದಾರೆ.
ಇನ್ನೂ ದರ್ಶನ್ ಡೆವಿಲ್ ಅಬ್ಬರಕ್ಕೆ ಚಿತ್ರಮಂದಿರಗಳೆಲ್ಲ ಈಗಿನಿಂದಲೇ ಸಿಂಗಾರ ಗೊಳ್ತಿವೆ. ಡೆವಿಲ್ ಚಿತ್ರದ ಫ್ಯಾನ್ಸ್ ಶೋಗೆ ಅನ್ ಲೈನ್ ಬುಕಿಂಗ್ ಕೂಡ ಈಗಾಗಲೇ ಶುರುವಾಗಿದೆ.
ದೊಡ್ಡಬಳ್ಳಾಪುರದಲ್ಲಿ ದರ್ಶನ್ ಫ್ಯಾನ್ಸ್ ಹವಾ ಎಷ್ಟರ ಮಟ್ಟಿದೆ ಇದೆ ಅಂದ್ರೆ, ಟಿಕೆಟ್ ಬುಕ್ಕಿಂಗ್ ಓಪನ್ ಆದ ಒಂಬತ್ತೇ ನಿಮಿಷಕ್ಕೆ ವೈಭವ್ ಚಿತ್ರಮಂದಿರದಲ್ಲಿ ಗುರುವಾರದ ಬೆಳಗ್ಗೆ 6.30ರ ಶೋ ಹೌಸ್ಫುಲ್ ಆಗಿದೆ.
ಅಭಿಮಾನಿಗಳಿಗಾಗಿ ಅನ್ ಲೈನ್ ಬುಕಿಂಗ್ ಓಪನ್
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಗುತ್ತಿದೆ. ಹೊಸ ರೀತಿಯಲ್ಲಿ ದರ್ಶನ್ ಅವರನ್ನು ನೋಡಿ ಅಭಿಮಾನಿಗಳು ಅಂತೂ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ.
ಹಾಗೆಯೇ ಇಂದು ಮಧ್ಯಾನ 1:5 ಕ್ಕೆ ಡೆವಿಲ್ ಚಿತ್ರದ ಫ್ಯಾನ್ಸ್ ಶೋಗೆ ಅನ್ ಲೈನ್ ಬುಕಿಂಗ್ ಓಪನ್ ಆಗಿದೆ. ಬುಕ್ಕಿಂಗ್ ಓಪನ್ ಆದ ಕೆಲವೇ ಹೊತ್ತಲೇ ಹೌಸ್ ಫುಲ್ ಆಗಿದೆ.
ಟ್ರೈಲರ್ ಮೂಲಕ ಈಗಾಗಲೇ ಅಬ್ಬರಿಸಿರುವ ಡೆವಿಲ್ ಕಾಣಲು ಫ್ಯಾನ್ಸ್ ಕಾತರದಿಂದ ಕಾಯುತಿದ್ದರೆ. ಗುರುವಾರ ಬೆಳಗ್ಗೆ 6:30 ಕ್ಕೆ ಡೆವಿಲ್ ಚಿತ್ರದ ಫ್ಯಾನ್ಸ್ ಶೋ ಇರಲಿದ್ದು, ಬೆಂಗಳೂರು, ದೊಡ್ಡಬಳ್ಳಾಪುರ ಸೇರಿ ಅನೇಕ ಕಡೆಗಳಲ್ಲಿ ಫ್ಯಾನ್ಸ್ ಶೋ ಅನ್ನು ಏರ್ಪಡಿಸಲಾಗಿದೆ.