ದೊಡ್ಡಬಳ್ಳಾಪುರ: ಡಿ. 21 ರಂದು ನಡೆಯಲಿರುವ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯ. (Bashettihalli Town Panchayat Election) ನಾಮಪತ್ರಗಳ ಪರಿಶೀಲನೆ ಕಾರ್ಯ ಬುಧವಾರ ನಡೆದಿದ್ದು, ಸಲ್ಲಿಕೆಯಾಗಿದ್ದ ಒಟ್ಟು 82 ನಾಮಪತ್ರಗಳ ಪೈಕಿ 5 ನಾಮಪತ್ರಗಳು ತಿರಸ್ಕೃತವಾಗಿವೆ.
ಉಳಿದಂತೆ 74 ಅಭ್ಯರ್ಥಿಗಳಿಂದ 77 ನಾಮಪತ್ರಗಳ ಸಲ್ಲಿಕೆಯಾಗಿ ಕ್ರಮಬದ್ಧವಾಗಿವೆ.
ಡಿಸೆಂಬರ್ 12 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಕಣದಲ್ಲಿ ಎಷ್ಟು ಮಂದಿ ಉಳಿಯಲಿದ್ದಾರೆ ಎನ್ನುವುದು ಅಂತಿಮವಾಗಲಿದೆ.
ನಗರಸಭೆ ಉಪಚುನಾವಣೆ: ನಾಲ್ವರು ಅಭ್ಯರ್ಥಿಗಳು
ದೊಡ್ಡಬಳ್ಳಾಪುರ ನಗರಸಭೆಯ 21 ನೇ ವಾರ್ಡ್ ನ ಹೇಮಾವತಿಪೇಟೆ ವಾರ್ಡ್ನ ಚುನಾವಣೆಗೆ ಒಟ್ಟು ನಾಲ್ವರು ಅಭ್ಯರ್ಥಿಗಳಿಂದ 6 ನಾಮಪತ್ರಗಳು ಸಲ್ಲಿಕೆಯಾಗಿದ್ದು, 6 ನಾಮಪತ್ರಗಳು ಸಹ ಕ್ರಮಬದ್ಧವಾಗಿವೆ.