
ದೊಡ್ಡಬಳ್ಳಾಪುರ: ತಾಲೂಕಿನ ವಡ್ಡರಹಳ್ಳಿ ರೈಲು ನಿಲ್ದಾಣ ಹಾಗೂ ದೊಡ್ಡಬಳ್ಳಾಪುರ ರೈಲ್ವೆ ಸ್ಟೇಷನ್ ನಡುವೆ ಸುಮಾರು 50-55 ವರ್ಷದ ಮಹಿಳೆ ರೈಲಿಗೆ (Train) ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಕುರಿತಂತೆ ಯಶವಂತಪುರ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳು ಹೆಸರು ಸರಸ್ವತಮ್ಮ ಎಂದು ಹೇಳುತ್ತಿದೆ. ಆದರೆ ವಿಳಾಸ ತಿಳಿದು ಬಂದಿಲ್ಲ.
ಗಾಯಗೊಂಡಿರುವ ಮಹಿಳೆ ಚಹರೆ: 168 ಸೆಂ.ಮೀ ಎತ್ತರ, ಎಣ್ಣೆ ಕೆಂಪು ಮೈ ಬಣ್ಣ, ಕೋಲು ಮುಖ, ತಲೆಯಲ್ಲಿ ಸುಮಾರು 1 ಅಡಿ ಉದ್ದದ ಕಪ್ಪು ತಲೆ ಕೂದಲು ಇದ್ದು ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.
ಬಟ್ಟೆಗಳು: ಹಸಿರು ಬಣ್ಣದ ಜಾಕೆಟ್ ಹಾಗೂ ನೀಲಿ ಹೂ ಇರುವ ಬಿಳಿ ಬಣ್ಣದ ಸೀರೆ ಧರಿಸಿರುತ್ತಾರೆ.
ಇವರ ವಾರಸುದಾರರು ಯಾರಾದರು ಇದ್ದಲ್ಲಿ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ 9108630967, 9902193960, ರೈಲ್ವೆ PSI 9480802118 ಸಂಪರ್ಕಿಸಲು ಮನವಿ ಮಾಡಲಾಗಿದೆ.