
ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ (Bashettihalli Town Panchayat Election) ಅಂಗವಾಗಿ ಜೆಡಿಎಸ್ ( JDS) ಅಭ್ಯರ್ಥಿ ಪರವಾಗಿ ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ ಅವರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಈ ವೇಳೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಜನಪರ ಯೋಜನೆ, ರಾಜ್ಯಕ್ಕೆ ನೀಡಿರುವ ಕೊಡುಗೆಗಳನ್ನ ವಿವರಿಸಿ ಮತಯಾಚಿಸಿದರು.

ಈ ಸಂಧರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಲಕ್ಷ್ಮೀಪತಯ್ಯ, ಮುಖಂಡರಾದ ಮಂಡಿ ಬ್ಯಾಡರಹಳ್ಳಿ ಅಶ್ವಥ್ ನಾರಾಯಣ್, ರಾಮಚಂದ್ರ ಬಾಬು, ದೊಡ್ಡ ತುಮಕೂರು ಪ್ರಭಾಕರ್, ನಾಗರಾಜ್, ಶಾಂತಿನಗರ ಪ್ರವೀಣ್, ಹಾದ್ರಿಪುರ ಮಹೇಶ್, ಸಂಜೀವ ಮತ್ತಿತರರಿದ್ದರು.