
ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯ (Bashettihalli Town Panchayat Election) 6 ಮತ್ತು 7ನೇ ವಾರ್ಡ್ನಲ್ಲಿ ಬಿಜೆಪಿ (BJP) ವತಿಯಿಂದ ಅಧಿಕೃತ ಅಭ್ಯರ್ಥಿಗಳು ಯಾರು ಎಂಬ ಗೊಂದಲ ಮುಖಂಡರು ಹಾಗೂ ಮತದಾರರಿಗೆ ಎದುರಾಗಿದೆ.
ಈ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ನಯನ, ಕೆ.ಎಂ.ಅಂಬರೀಶ್, ಭಾಗ್ಯಮ್ಮ ಹಾಗೂ ಮಧುಕುಮಾರ್ ಅವರು ಪ್ರಚಾರ ಮಾಡುತ್ತಿದ್ದು ಇವರಲ್ಲಿ ಅಧಿಕೃತ ಬಿಜೆಪಿ ಅಭ್ಯರ್ಥಿಗಳು ಯಾರು.? ಎಂಬುದು ಪ್ರಶ್ನೆಗೆ ಕಾರಣವಾಗಿದೆ.
ಈ ನಾಲ್ವರು ಅಭ್ಯರ್ಥಿಗಳು ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಯೆಂದು ಕರಪತ್ರವನ್ನು ಮುದ್ರಿಸಿ ಪಕ್ಷದ ನಾಯಕರುಗಳ ಭಾವಚಿತ್ರವನ್ನು ಬಳಸಿ ಪ್ರಚಾರ ನಡೆಸುತಿದ್ದಾರೆ ಎನ್ನಲಾಗಿದೆ.
ಇದರಿಂದಾಗಿ ಸ್ಥಳೀಯವಾಗಿ ಪಕ್ಷದ ಮುಖಂಡರು ಮತ್ತು ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ನಾಳೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಯಾರು..? ಯಾರಿಗೆ ಮತ ನೀಡಬೇಕು ಎಂಬ ಪ್ರಶ್ನೆ ಎದುರಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.