
ಚೆನ್ನೈ: ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ತಾಣಗಳನ್ನು (Social Media) ನಿಷೇಧಿಸಿರುವ (Ban) ವಿಷಯ ಎಲ್ಲರಿಗೂ ತಿಳಿದೇ ಇದೆ. ಭಾರತದಲ್ಲೂ ಅಂತಹದ್ದೇ ಕಾನೂನು ಜಾರಿಗೆ ತರುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಕೇಂದ್ರ ಸರಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ.
ಅಪ್ರಾಪ್ತ ವಯಸ್ಕರು, ಸೋಷಿಯಲ್ ಮೀಡಿಯಾದಲ್ಲಿ ಸುಲಭವಾಗಿ ಅಶ್ಲೀಲ ವಿಷಯಗಳಿಗೆ ಒಡ್ಡಿಕೊಳ್ಳುತ್ತಿರುವುದನ್ನು ತಡೆಗಟ್ಟಲು ಆಸ್ಟ್ರೇಲಿಯಾ ಮಾದರಿ ಕಾನೂನನ್ನು ಭಾರತದಲ್ಲಿ ಪರಿಗಣಿಸಬೇಕು ಎಂದು ಮದ್ರಾಸ್ ಕೋರ್ಟ್ ಸಲಹೆ ನೀಡಿದೆ.