ಕೋಲ್ಕತ್ತ: ನಿನ್ನೆ ಬೆಳಗ್ಗೆ ವಿಮಾನ ಅಪಘಾತದಲ್ಲಿ ಮಡಿದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಪ್ರಕರಣದ ತನಿಖೆಯನ್ನು ಕೇಂದ್ರ ಸರಕಾರ ಅಧೀನದ ಯಾವುದೇ ಸಂಸ್ಥೆಯಿಂದ ನಡೆಸಬಾರದು. ಸುಪ್ರೀಂ ಕೋರ್ಟ್ ( Supreme Court ) ಮೇಲ್ವಿಚಾರಣೆಯಲ್ಲಿಯೇ ತನಿಖೆ ನಡೆಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಒತ್ತಾಯಿಸಿದ್ದಾರೆ.
ಸಿಂಗೂರ್‌ಗೆ ತೆರಳುವುದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಮಮತಾ, “ನಾವು ಸುಪ್ರೀಂ ಕೋರ್ಟ್ ಮಾತ್ರ ನಂಬುತ್ತೇವೆ. ಇತರೆಲ್ಲಾ ತನಿಖಾ ಸಂಸ್ಥೆಗಳು ಕೇಂದ್ರ ಸರಕಾರದ ಜತೆ ಪೂರ್ಣ ರಾಜಿ ಮಾಡಿಕೊಂಡಿವೆ’ ಎಂದು ಆರೋಪಿಸಿದ್ದಾರೆ.