8 students from Nalanda High School, Doddaballapur selected for the President's Award ceremony

ರಾಷ್ಟ್ರಪತಿ ಅವಾರ್ಡ್ ಸಮಾರಂಭಕ್ಕೆ ದೊಡ್ಡಬಳ್ಳಾಪುರದ ನಳಂದ ಪ್ರೌಢಶಾಲೆಯ 8 ವಿದ್ಯಾರ್ಥಿಗಳು ಆಯ್ಕೆ

ದೊಡ್ಡಬಳ್ಳಾಪುರ: ನಗರದ ಪ್ರತಿಷ್ಠಿತ ನಳಂದ ಪ್ರೌಢಶಾಲೆಯ (Nalanda High School) ಕಬ್ಸ್ ಮತ್ತು ಬುಲ್ ಬುಲ್ಸ್‌ನ 8 ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಷ್ಟ್ರಪತಿ ಅವಾರ್ಡ್ ಸಮಾರಂಭಕ್ಕೆ (President’s Award ceremony) ಆಯ್ಕೆಯಾಗಿದ್ದು, ಹರಿಯಾಣದ ಗಡಪುರಿ ಸ್ಕೌಟ್ಸ್ ಅಂಡ್ ಗೈಡ್ಸ್ ಸೆಂಟರ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ರಾಷ್ಟ್ರಪತಿ ಅವಾರ್ಡ್ ಸಮಾರಂಭಕ್ಕೆ ದೊಡ್ಡಬಳ್ಳಾಪುರದ ನಳಂದ ಪ್ರೌಢಶಾಲೆಯ 8 ವಿದ್ಯಾರ್ಥಿಗಳು ಆಯ್ಕೆ

ಗೋಲ್ಡನ್ ಆ್ಯರೋ ಅವಾರ್ಡ್ ಸೆರೊಮನಿಯು ಕಬ್ಸ್ ಮತ್ತು ಬುಲ್ ಬುಲ್ಸ್ ನ ಅತ್ಯಂತ ಕ್ಲಿಷ್ಟಕರವಾದ ಹಂತವಾಗಿದ್ದು, ನಳಂದ ಪ್ರೌಢಶಾಲೆಯ ಐದನೇ ತರಗತಿಯ ವಿದ್ಯಾರ್ಥಿಗಳಾದ ಸಾದ್ವಿತ್ ಡಿ ,ಪ್ರಥಮ್ ಶೆಟ್ಟಿ ಜೆಸಿ, ಕಿಶೋರ್ ಉಪ್ಪಾರ್ ಸಿ, ರೋಹನ್ ಸಾಯಿ ಕೆ, ಮನುಶ್ರೀ ಕೆ, ಮುನಿದುತಿ ಕೆ, ಸುಮನಾ ಡಿಎಸ್ ವಿದ್ಯಾರ್ಥಿಗಳು ಶಿಕ್ಷಕರಾದ ಅನಿತಾ ಆರ್ ಮತ್ತು ಕವಿತಾ ಬಿಕೆ ರವರ ನಾಯಕತ್ವದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಶಾಲಾ ಕಾರ್ಯದರ್ಶಿ ಅನುರಾಧ ಕೆ ಆರ್ ರವರು ತಿಳಿಸಿದ್ದಾರೆ.

ರಾಷ್ಟ್ರಪತಿ ಅವಾರ್ಡ್ ಸಮಾರಂಭಕ್ಕೆ ದೊಡ್ಡಬಳ್ಳಾಪುರದ ನಳಂದ ಪ್ರೌಢಶಾಲೆಯ 8 ವಿದ್ಯಾರ್ಥಿಗಳು ಆಯ್ಕೆ

ಕಬ್ಸ್ ಮತ್ತು ಬುಲ್ ಬುಲ್ಸ್ ಗಳ ಪ್ರತಿಜ್ಞೆ, ಧ್ವಜಾರೋಹಣ, ಮಾರ್ಚ್ ಫಾಸ್ಟ್, ಸಾಹಸ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಾದ ಡ್ರಾಯಿಂಗ್ ಅಂಡ್ ಪೇಂಟಿಂಗ್, ನೃತ್ಯ ,ಸಂಗೀತ, ದೇಶ ಭಕ್ತಿ ಗೀತೆಗಳು ಮುಂತಾದವುಗಳಲ್ಲಿ ಸ್ಪರ್ಧಿಸಿ ಹರಿಯಾಣದಲ್ಲಿ ಕನ್ನಡದ ಬಾವುಟವನ್ನು ಹಾರಿಸಿದ್ದಾರೆ.

ರಾಷ್ಟ್ರಪತಿ ಅವಾರ್ಡ್ ಸಮಾರಂಭಕ್ಕೆ ದೊಡ್ಡಬಳ್ಳಾಪುರದ ನಳಂದ ಪ್ರೌಢಶಾಲೆಯ 8 ವಿದ್ಯಾರ್ಥಿಗಳು ಆಯ್ಕೆ

ಈ ವಿದ್ಯಾರ್ಥಿಗಳು ತಮ್ಮ ಸತತ ಕಠಿಣ ಪರಿಶ್ರಮದ ಮೂಲಕ ಪ್ರವೇಶ್ , ಕೋಮಲ್ ಪಂಕ್ ,ಈರಕ್ ಪಂಕ್ ಹಂತಗಳನ್ನು ದಾಟಿ ಗೋಲ್ಡನ್ ಅರೋ ಅವಾರ್ಡ್ ನ್ನು ಪಡೆಯುತ್ತಿರುವುದು ಇಡೀ ಕರ್ನಾಟಕ ರಾಜ್ಯದ ಹೆಮ್ಮೆಯ ವಿಷಯವಾಗಿದೆ.

ರಾಷ್ಟ್ರಪತಿ ಅವಾರ್ಡ್ ಸಮಾರಂಭಕ್ಕೆ ದೊಡ್ಡಬಳ್ಳಾಪುರದ ನಳಂದ ಪ್ರೌಢಶಾಲೆಯ 8 ವಿದ್ಯಾರ್ಥಿಗಳು ಆಯ್ಕೆ

ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿತಾ ಕೆಪಿ ಅವರು ವಿದ್ಯಾರ್ಥಿಗಳ ಈ ಅಭೂತ ಪೂರ್ವ ಸಾಧನೆಗೆ ಅಭಿನಂದನೆಗಳನ್ನು ಹೇಳಿ, ಇಡೀ ದೇಶದಲ್ಲಿಯೇ ಅತಿ ಹೆಚ್ಚು 35 ವಿದ್ಯಾರ್ಥಿಗಳು ನಮ್ಮ ಶಾಲೆಯಿಂದ ಅರ್ಹರಾಗಿದ್ದು ಅದರಲ್ಲಿ ಎಂಟು ವಿದ್ಯಾರ್ಥಿಗಳು ರಾಷ್ಟ್ರಪತಿಯವರ ಅತ್ಯುನ್ನತ ಪದಕ ಸ್ವೀಕಾರ ರ‍್ಯಾಲಿಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ರಾಷ್ಟ್ರಪತಿ ಅವಾರ್ಡ್ ಸಮಾರಂಭಕ್ಕೆ ದೊಡ್ಡಬಳ್ಳಾಪುರದ ನಳಂದ ಪ್ರೌಢಶಾಲೆಯ 8 ವಿದ್ಯಾರ್ಥಿಗಳು ಆಯ್ಕೆ

ಸ್ಕೌಟ್ಸ್ ನ ಅತ್ಯುನ್ನತ ತರಬೇತಿ ವುಡ್ ಬ್ಯಾಡ್ಜ್ ಪಡೆದಿರುವ ಲೀಡರ್ ಸುನಿತಾ ಪಿ ಅವರು, ನಮ್ಮ ನಳಂದ ಪ್ರೌಢಶಾಲೆ ಮತ್ತು ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಗಳ ಒಟ್ಟು 2380 ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು, ನರ್ಸರಿ ತರಗತಿಗಳ ಹಂತದಿಂದಲೇ ಬನ್ನಿಸ್ ಗಳಾಗಿ ಪ್ರಾಣಿ ಪಕ್ಷಿ ಗಿಡ ಮರ ಗಳೊಂದಿಗೆ ಸಹಬಾಳ್ವೆಯ ತರಬೇತಿಯನ್ನು ಪಡೆಯುತ್ತಾರೆ.

ರಾಷ್ಟ್ರಪತಿ ಅವಾರ್ಡ್ ಸಮಾರಂಭಕ್ಕೆ ದೊಡ್ಡಬಳ್ಳಾಪುರದ ನಳಂದ ಪ್ರೌಢಶಾಲೆಯ 8 ವಿದ್ಯಾರ್ಥಿಗಳು ಆಯ್ಕೆ

ನಂತರ ಪ್ರಾಥಮಿಕ ಹಂತದಲ್ಲಿ ಕಬ್ಸ್ ಮತ್ತು ಬುಲ್ ಬುಲ್ಸ್ ನಲ್ಲಿ ಶಿಸ್ತು, ಸಾಹಸ ,ಕ್ರೀಡೆ, ಹಾಡು, ನೃತ್ಯ, ಕಾಡಿನ ಸಾಹಸ ಕಥೆಗಳನ್ನು ದಿನನಿತ್ಯವೂ ಅಭ್ಯಸಿಸಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಜೀವನದಲ್ಲಿ ರೂಡಿಸಿಕೊಳ್ಳುತ್ತಾರೆ.

ಬಳಿಕ ಆರನೇ ತರಗತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಪಾದಾರ್ಪಣೆ ಮಾಡಿ ಶಿಸ್ತಿನ ಸಿಪಾಯಿಗಳ ರೀತಿಯಲ್ಲಿ ಒಟ್ಟು 12 ಪ್ರೊಫಿಶಿಯನ್ಸಿ ಬ್ಯಾಡ್ಜ್ ಗಳನ್ನು ಗಳಿಸಿ ವಿವಿಧ ಹಂತಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ, ಅಂತಿಮವಾಗಿ ರಾಷ್ಟ್ರಪತಿ ಪದಕದವರೆಗೂ ಸ್ಪರ್ಧಿಸುತ್ತಾರೆ.

ರಾಷ್ಟ್ರಪತಿ ಅವಾರ್ಡ್ ಸಮಾರಂಭಕ್ಕೆ ದೊಡ್ಡಬಳ್ಳಾಪುರದ ನಳಂದ ಪ್ರೌಢಶಾಲೆಯ 8 ವಿದ್ಯಾರ್ಥಿಗಳು ಆಯ್ಕೆ

ಈ ರೀತಿಯಾಗಿ ಅಂತರಾಷ್ಟ್ರೀಯ ಮನ್ನಣೆ ಗಳಿಸಿರುವ ಸ್ಕೌಟ್ಸ್ ಅಂಡ್ ಗೈಡ್ಸ್ ಅನ್ನು ನರ್ಸರಿ ತರಗತಿಯಿಂದ 10ನೇ ತರಗತಿಯವರೆಗೂ ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಶೈಕ್ಷಣಿಕವಾಗಿಯು ಇಡೀ ತಾಲೂಕಿನಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ.

ರಾಷ್ಟ್ರಪತಿ ಅವಾರ್ಡ್ ಸಮಾರಂಭಕ್ಕೆ ದೊಡ್ಡಬಳ್ಳಾಪುರದ ನಳಂದ ಪ್ರೌಢಶಾಲೆಯ 8 ವಿದ್ಯಾರ್ಥಿಗಳು ಆಯ್ಕೆ

ಪ್ರಸ್ತುತ ಹರಿಯಾಣದಲ್ಲಿ ಗೋಲ್ಡನ್ ಆ್ಯರೋ ರ‍್ಯಾಲಿ ಯಲ್ಲಿ ಭಾಗವಹಿಸುತ್ತಿರುವ ಶಾಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಇಡೀ ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆಂದು ಹರ್ಷವನ್ನು ವ್ಯಕ್ತಪಡಿಸಿದ್ದಾರೆ .

ರಾಷ್ಟ್ರಪತಿ ಅವಾರ್ಡ್ ಸಮಾರಂಭಕ್ಕೆ ದೊಡ್ಡಬಳ್ಳಾಪುರದ ನಳಂದ ಪ್ರೌಢಶಾಲೆಯ 8 ವಿದ್ಯಾರ್ಥಿಗಳು ಆಯ್ಕೆ

ರಾಜಕೀಯ

ರಾಜ್ಯದಲ್ಲಿ NDA 140 ರಿಂದ 150 ಸ್ಥಾನವನ್ನ ಗೆಲ್ಲುತ್ತೆವೆ: ನಿಖಿಲ್ ಕುಮಾರಸ್ವಾಮಿ

ರಾಜ್ಯದಲ್ಲಿ NDA 140 ರಿಂದ 150 ಸ್ಥಾನವನ್ನ ಗೆಲ್ಲುತ್ತೆವೆ: ನಿಖಿಲ್ ಕುಮಾರಸ್ವಾಮಿ

ರಾಜ್ಯದಲ್ಲಿ NDA 140 ರಿಂದ 150 ಸ್ಥಾನವನ್ನ ಗೆಲ್ಲುತ್ತೆವೆ. ಮಾನ್ಯ ಮುಖ್ಯಮಂತ್ರಿಗಳು ಯಾವ ಅರ್ಥದಲ್ಲಿ ಟ್ವೀಟ್ ಮಾಡಿದ್ದರೋ ಗೊತ್ತಿಲ್ಲ: ನಿಖಿಲ್ ಕುಮಾರಸ್ವಾಮಿ (Nikhil Kumaraswmy)

[ccc_my_favorite_select_button post_id="119635"]
20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ: ಎಂ ಬಿ ಪಾಟೀಲ

20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ: ಎಂ ಬಿ ಪಾಟೀಲ

ಫ್ರಾನ್ಸ್ ಮೂಲದ ಏರ್ ಬಸ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಜತೆಗೂಡಿ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ, ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣೆ ಘಟಕದಲ್ಲಿ ಮುಂದಿನ 20 ವರ್ಷಗಳಲ್ಲಿ ಎಚ್125 ದರ್ಜೆಯ

[ccc_my_favorite_select_button post_id="119504"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ರಾಹುಲ್‌ ಗಾಂಧಿಗೆ ಜೀವ ಬೆದರಿಕೆ; ಬಿಜೆಪಿ ಬೆಂಬಲಿಗನ ಬಂಧನ

ರಾಹುಲ್‌ ಗಾಂಧಿಗೆ ಜೀವ ಬೆದರಿಕೆ; ಬಿಜೆಪಿ ಬೆಂಬಲಿಗನ ಬಂಧನ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ವಿರೋಧ ಪಕ್ಷಗಳ 25 ಸಂಸದರ ಮೇಲೆ ಗುಂಡು ಹಾರಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ರಾಜಸ್ಥಾನದ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="119595"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ಖಾಸಗಿ ಕಾರ್ಖಾನೆಯ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ (Accident), ದ್ವಿಚಕ್ರ ವಾಹನ ಸವಾರ ಸಾವನಪ್ಪಿರುವ ಘಟನೆ ತಾಲೂಕಿನ ಗೊಲ್ಲಹಳ್ಳಿ ಕ್ರಾಸ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪ ಇಂದು ಸಂಜೆ

[ccc_my_favorite_select_button post_id="119492"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!