ಬೆಂಗಳೂರು: ಕಾಂಗ್ರೆಸ್ಸಿಗರ ರಕ್ತದಲ್ಲೇ ಸರ್ವಾಧಿಕಾರ ಇದೆ. ಇಂದಿರಾಗಾಂಧಿ ಅವರು ಈ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ 50 ವರ್ಷ ತುಂಬಿದೆ. ಆ ಕರಾಳದಿನವನ್ನು ಕರ್ನಾಟಕದಲ್ಲಿ ಸುವರ್ಣ ಮಹೋತ್ಸವವನ್ನು ಕಾಂಗ್ರೆಸ್ ಆಚರಿಸುತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswmy) ಕಿಡಿಕಾರಿದರು.
ಈ ಬಗ್ಗೆ ಬೆಂಗಳೂರಿನ ಜೆಪಿ ನಗರದ ನಿವಾಸದ ಬಳಿ ಮಾತನಾಡಿದ ಅವರು, ವಿಧಾನಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಕುರಿತು ತೀವ್ರವಾಗಿ ಖಂಡಿಸಿದರು.
ವಿಧಾನಸೌಧ ನಮ್ಮ ರಾಜ್ಯದ ಶಕ್ತಿ ಸೌಧ, ಇಂಥ ಶಕ್ತಿ ಸೌಧದಲ್ಲಿ ಎಮರ್ಜೆನ್ಸಿ 2.0ತಂದಿದ್ದಾರೆ. ಇಂಥ ಸರ್ವಾಧಿಕಾರದ ಮನಸ್ಥಿತಿ ಕಾಂಗ್ರೆಸ್ ಪಕ್ಷದ DNA ಬದಲಾಗಿಲ್ಲ, ಅವರ ರಕ್ತದಲ್ಲೇ ಬಂದಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಸಂವಿಧಾನದ ಅಡಿಯಲ್ಲಿ ಮಾಧ್ಯಮದವರ ಅಭಿಪ್ರಾಯವನ್ನು ವ್ಯಕ್ತಿಪಡಿಸುವುದಕ್ಕೆ ಎಲ್ಲರಿಗೂ ಹಕ್ಕಿದೆ. ಭದ್ರತೆ ಮತ್ತು ತಾಂತ್ರಿಕ ಕಾರಣದಿಂದ ವಿಧಾನಸೌಧಕ್ಕೆ ಮಾಧ್ಯಮಗಳ ನಿರ್ಬಂಧಿಸಿರುವುದು ಅವರು ಹೇಡಿತನ. ಇದರ ಉದ್ದೇಶ ವಿಧಾನಸೌಧದಲ್ಲಿ ಸರ್ಕಾರದ ಜನಪ್ರತಿನಿದಿಗಳು ನಡೆಸುತ್ತಿರುವ ಅವ್ಯವಹಾರ, ಭ್ರಷ್ಟಾಚಾರವನ್ನು ಮುಚ್ಚಕುವುದಕ್ಕೆ ಮಾಧ್ಯಮಗಳ ನಿರ್ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಕರ್ತರ ಪ್ರತಿಭಟನೆ ವಿಚಾರಕ್ಕೆ ಮಾತನಾಡಿದ ಅವರು. ನಿಮ್ಮ ಹೋರಾಟಕ್ಕೆ ಜೆಡಿಎಸ್ ಪಕ್ಷದ ಬೆಂಬಲವಿದೆ. ಇದು ಮಾಧ್ಯಮಗಳ ಹೋರಾಟವಲ್ಲ, ಏಳುಕೋಟಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯದ ಹೋರಾಟ. ನಿಮ್ಮ ಜತೆ ನಾವಿದ್ದೇವೆ ಎಂದು ಅವರು ಹೇಳಿದರು.
ಪ್ರಚೋದನೆ ಹೇಳಿಕೆ ಬಿಟ್ಟು ಅಭಿವೃದ್ಧಿಗೆ ಸಹಕರಿಸಿ
ಕೋಲಾರದ ವೇಮಗಲ್ನಲ್ಲಿ ಹೆಲಿಕಾಪ್ಟರ್ ಘಟಕಕ್ಕೆ ಶಾಸಕ ಕೊತ್ತೂರು ಮಂಜುನಾಥ್ ವಿರೋಧಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕಕ್ಕೆ ಬರುವ ಕೈಗಾರಿಕೆಗಳನ್ನು ಉಳಿಸಿಕೊಳ್ಳಬೇಕು. ಪ್ರಚೋದನೆ ಹೇಳಿಕೆ ನೀಡುತ್ತಿರುವುದು ಒಬ್ಬ ಶಾಸಕರ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಅಭಿವೃದ್ಧಿಗೆ ಸಹಕರಿಸಿ ಎಂದು ಕಿಡಿಕಾರಿದರು.
ಕರ್ನಾಟಕ ರಾಜ್ಯಕ್ಕೆ ಒಂದು ಕೈಗಾರಿಕೆ ಸ್ಥಾಪನೆ ಆಗುತ್ತೆ ಎಂದರೆ, ಒಬ್ಬ ಶಾಸಕ ಅದಕ್ಕೆ ಸಂಪೂರ್ಣ ಸಹಕಾರ ಮತ್ತು ಬೆಂಬಲ ಕೊಡ್ಬೇಕು. ಇಲ್ಲಿ ಯಾರನ್ನ ಯಾರು ಬಿಟ್ಟು ಮಾಡುವ ಪ್ರಶ್ನೆಯಿಲ್ಲ. ಮೊದಲು ಇಂಥ ಸಂಸ್ಕೃತಿಯನ್ನ ಬಿಟ್ಟು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರದ ಸರಕಾರಕ್ಕೆ ಬೆಂಬಲ ಕೊಡ್ಬೇಕು ಎಂದು ಒತ್ತಿ ಹೇಳಿದರು.
ಮೈತ್ರಿ ವಿಚಾರಕ್ಕೆ ಮಾತನಾಡಿದ ಅವರು, ಜೆಡಿಎಸ್ ಬಿಜೆಪಿ ಒಗ್ಗಟ್ಟಿನಿಂದ ಹೋಗ್ತೇವೆ. ರಾಜ್ಯದಲ್ಲಿ NDA 140 ರಿಂದ 150 ಸ್ಥಾನವನ್ನ ಗೆಲ್ಲುತ್ತೆವೆ. ಮಾನ್ಯ ಮುಖ್ಯಮಂತ್ರಿಗಳು ಯಾವ ಅರ್ಥದಲ್ಲಿ ಟ್ವೀಟ್ ಮಾಡಿದ್ದರೋ ಗೊತ್ತಿಲ್ಲ. ಆದರೆ ಕುರ್ಚಿ ಕದನದ ಬಿಟ್ಟು ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಪ್ರವೇಶಿಸಿ ರಾಜ್ಯದ ಅಭಿವೃದ್ಧಿಗೆ ಸಹಕರಿಸಿ ಬೇಕು ಎಂದು ಹೇಳಿದರು.