ಯಾದಗಿರಿ: ಕುಮಾರಸ್ವಾಮಿ (Kumaraswamy) ಅವರ ಜೊತೆ ಹೊಂದಾಣಿಕೆಯಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ (BJP) ಲಾಭವಾಗಿದ್ದು, ಅಪ್ಪ-ಮಗ (ಯಡಿಯೂರಪ್ಪ, ವಿಜಯೇಂದ್ರ) ಜೆಡಿಎಸ್ (JDS) ಅನ್ನು ದೂರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basana Gowda Patila Yatnal) ಅವರು ಆರೋಪಿಸಿದ್ದಾರೆ.
ಕುಮಾರಸ್ವಾಮಿ ಭೇಟಿ, ಮಾತುಕತೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ ಯತ್ನಾಳ್, ನಾವು ಯಾವ ಕಾಲಕ್ಕೂ ಜೆಡಿಎಸ್ ಹೊಗುವುದಿಲ್ಲ. ಆದರೆ ಬಿಜೆಪಿಯನ್ನು ರಿಪೇರಿ ಮಾಡುವುದೇ ನಮ್ಮ ಉದ್ದೇಶ. ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಇದೆ. ಅದು ಮುಂದುವರಿಯಬೇಕು ಎಂಬ ಉದ್ದೇಶ ನಮ್ದು.
ರಾಜ್ಯದಲ್ಲಿ ಕುಮಾರಸ್ವಾಮಿ ಅವರಿಗೆ ಶಕ್ತಿ ಇದೆ, ದೇವೇಗೌಡರಿಗೆ ದೊಡ್ಡ ಶಕ್ತಿ ಇದೆ. ಅಂತೆಯೇ ಬಿಜೆಪಿಗೂ ಶಕ್ತಿ ಇದೆ. ಕುಮಾರಸ್ವಾಮಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಬೇಕು ಎಂಬ ಉದ್ದೇಶ ನಮ್ಮದು.
ಮೊನ್ನೆ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಜೊತೆ ಹೊಂದಾಣಿಕೆಯಿಂದ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮೈಸೂರು, ಕೋಲಾರ, ಚಿತ್ರದುರ್ಗ ಕ್ಷೇತ್ರದಲ್ಲಿ ಗೆಲುವಿಗೆ ಕುಮಾರಸ್ವಾಮಿ, ದೇವೇಗೌಡರ ಸಹಕಾರ ಇದೆ.
ನಿನ್ನೆ ಪೂಜ್ಯ ತಂದೆ ಹೇಳಿದ್ದಾನೆ ಅಲ್ವಾ, ನಮ್ಮ (BJP) ಸ್ವಂತ ಬಲದ ಮೇಲೆ ಸರ್ಕಾರ ಬರುತ್ತೆ ಅಂತ. ಅಂದರೇನು ಜೆಡಿಎಸ್ನ ಬಿಜೆಪಿಯಿಂದ ಅಪ್ಪಾ- ಮಗ(ಯಡಿಯೂರಪ್ಪ, ವಿಜಯೇಂದ್ರ) ದೂರ ಮಾಡ್ತಾ ಇದ್ದಾರೆ. ಆದರೆ ಮೋದಿ, ಅಮಿತ್ ಶಾ ಅವಕಾಶ ಕೊಡಲ್ಲ. ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಇಲ್ಲವಾದರೆ ಜೆಸಿಬಿ-ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಎಂದರು.