ಬೆಂಗಳೂರು: ಬಜೆಟ್ ಅಧಿವೇಶನ ಮಾರ್ಚ್ ಮೊದಲ ವಾರದಲ್ಲಿ ಆರಂಭವಾಗುತ್ತಿದೆ ಇದರ ಬಗ್ಗೆ
ನಾನು, ಆರ್ ಅಶೋಕ್ ಅವರು ಸದನ ಹೇಗೆ ಮುನ್ನಡೆಸಬೇಕು ಅಂತ ಚರ್ಚೆ ಮಾಡುತ್ತೇವೆ ತದನಂತರ ಎಲ್ಲಾ ವಿಚಾರಗಳನ್ನು ಪ್ರಮುಖರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಹೇಳಿದರು.
ಶಾಸಕ ಚಂದ್ರು ಲಮಾಣಿ ಬಂಧನ ವಿಚಾರ
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಂಜಾರ ಸಮಾಜವನ್ನೇ ಟಾರ್ಗೆಟ್ ಮಾಡುತ್ತಿರುವುದು ಎಲ್ಲರಿಗು ಗೊತ್ತಿರುವ ವಿಚಾರ. ಬಂಜಾರ ಸಮಾಜ ಬಿಜೆಪಿ ಜೊತೆ ಗಟ್ಟಿಯಾಗಿ ನಿಂತಿರುವುದೇ ಕಾಂಗ್ರೆಸ್ ಗೆ ಸಹಿಸಲು ಅಸಾದ್ಯವಾಗಿದೆ
ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ಬಂಜಾರ ಸಮಾಜಕ್ಕೆ ಅನ್ಯಾಯವೂ ಆಗಿದೆ, ನಿರ್ಲಕ್ಷ್ಯ ಮಾಡಿದ್ದಾರೆ.
ಡಿಸಿಎಂ ಅವರು ಬಂಜಾರ ಕಾರ್ಯಕ್ರಮ ಕ್ಕೆ ಬಂದಾಗ ಸಹಜವಾಗಿ ಡಿಸಿಎಂಗೆ ಆ ಸಮಾಜದ ಯುವಕರು ಘೇರಾವ್ ಹಾಕಿ ಪ್ರತಿಭಟನೆ ಮಾಡಿದ್ರು. ಇದನ್ನು ಸಹಿಸಿದ ಡಿಸಿಎಂ ಓಡಿ ಹೋಗುವುದರ ಜೊತೆಗೆ ಘೋಷಣೆ ಕೂಗಿದದ ಯುವಕರ ಮೇಲೆ FIR ಹಾಕಿದ್ದಾರೆ. ಹಾಗಾಗಿ ಆ ಸಮಾಜದ ಮೇಲೆ ಕಾಂಗ್ರೆಸ್ ಈಗ ಟಾರ್ಗೆಟ್ ಮಾಡಿದೆ.
ಭ್ರಷ್ಟಾಚಾರಕ್ಕೆ ಜಾತಿ ಲೇಪನ ಬಳಿತಾ ಇಲ್ಲ, ನಮ್ಮ ಶಾಸಕರಾದ ಚಂದ್ರು ಲಮಾಣಿ ಶಾಸಕರಿದ್ದಾರೆ, ಅವರು ಕೋರ್ಟಲ್ಲಿ ವಿಚಾರಣೆ ಎದುರಿಸುತ್ತಾರೆ
ಈಗಾಗಲೇ ಅನೇಕ ಆಡಿಯೋ ಲೀಕ್ ಆಗಿದೆ. ಅದರ ಸತ್ಯಾಸತ್ಯತೆ ಹೊರಬರಬೇಕಿದೆ .
ಸಚಿವ ಪ್ರಿಯಾಂಕ್ ಖರ್ಗೆ ಸಿಎಂ, ಡಿಸಿಎಂ ಭ್ರಷ್ಟಾಚಾರ ಬಗ್ಗೆ ಮಾತಾಡೋ ಯೋಗ್ಯತೆ ಇದೆಯಾ.?
ಸರ್ಕಾರ ಬಂದ ಕೂಡಲೇ ವಾಲ್ಮೀಕಿ ಹಗರಣ, ಮೂಡಾ ಹಗರಣ ನಡೆದಿದೆ.
ವಾಲ್ಮೀಕಿ ನಿಗಮದ ಹಣ ಚುನಾವಣೆಗೆ ಬಳಸಿಕೊಂಡಿಲ್ಲವಾ.? ಪ್ರಿಯಾಂಕ್ ಖರ್ಗೆ ನಮಗೆ ಭ್ರಷ್ಟಾಚಾರದ ಬಗ್ಗೆ ಹೇಳ್ತಾರೆ.ಇದು ಭೂತದ ಬಾಯಲ್ಲಿ ಭಗವದ್ಗೀತೆ ತರ ಆಗಿದೆ.ಭ್ರಷ್ಟಾಚಾರಕ್ಕೆ ಜಾತಿ ಲೇಪನ ಹಾಕಲ್ಲ. ಸತ್ಯಾಸತ್ಯತೆ ಹೊರಗೆ ಬರಲಿ, ತನಿಖೆ ಆಗಲಿ ಅಂತ ಹೇಳಿದರು
ಸಿಎಂ ಜಾತಿ ಕಾರ್ಡ್ ಪ್ಲೇ ವಿಚಾರ
ಸಿದ್ದರಾಮಯ್ಯ ಅವರಿಗೆ ಬಿಜೆಪಿ ಮೇಲೆ ಸಿಟ್ಟು ಇಲ್ಲ. ಆದ್ರೆ ಅವರ ಕೋಪ ಅವರ ಪಕ್ಷದಲ್ಲಿ ಇರುವವರ ಮೇಲೆ ಅಂತ ಹೇಳಿದರು
ಸಿಎಂಗೆ ಮನವಿ ಮಾಡಿದ ವಿಜಯೇಂದ್ರ
ಕುರಿ ಕಾಯೋರು ಸಿಎಂ ಆಗಿದ್ದಾರೆ ಸಂತೋಷ. ಆದ್ರೆ ಈ ಬಜೆಟ್‌ನಲ್ಲಾದ್ರೂ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡಿ ಅಂತ
ನಾವು ಹಕ್ಕೊತ್ತಾಯ ಮಾಡ್ತಿದ್ದೇವೆ ಅಂತ ಹೇಳಿದರು